ಶರಣ ಕಲಿ ಮಡಿವಾಳ ಮಾಚೀದೇವ
೧೨ ನೇ ಶತಮಾಣದಲ್ಲಿ ಆಗಿಹೋದ ಹಲವಾರು ಶಿವಶರಣರಲ್ಲಿ ಮಡಿವಾಳ ಮಾಚೀದೇವನು ಒಬ್ಬ ಶೂರ ಶಿವಶರಣ. ಕಾಯಕವೇ ಕೈಲಾಸವೆಂದು ಕಲ್ಯಾಣದ ಶಿವಶರಣರ ಬಟ್ಟೆಗಳನ್ನು ತೊಳೆದು ಶುಚಿಯಾಗಿ ಅವರಿಗೆ ಒಪ್ಪಿಸುವ, ಮಡಿವಾಳನ ಕಾಯಕ ಮಾಡುತ್ತಾ ಅನುಭಾವದ ನುಡಿಗಳ ಮೂಲಕ ಸಮಾಜವನ್ನು ಶುಚಿಗೊಳಿಸುವದರಲ್ಲಿಯೂ ಮಾಚೀದೇವ ನಿರತನಾಗಿದ್ದದು, ಅವನ ವಚನಗಳಿಂದ ತಿಳಿದು ಬರುತ್ತದೆ.
ಶುಚಿಯಾದ ಬಟ್ಟೆಗಳನ್ನು ಶರಣರಿಗೆ ಒಪ್ಪಿಸುವಾಗ ಯಾರು ತನ್ನನ್ನು ಮುಟ್ಟಬಾರದೆಂದು ಕೊರಳಲ್ಲಿ ಗಂಟೆಯನ್ನು ಕಟ್ಟಿಕೊಂಡು ಬಾರಿಸುತ್ತ, ಕೈಯಲ್ಲಿ ಕತ್ತಿಯನ್ನು ಹಿಡಿದು ಬರಿತ್ತಿದ್ದ ಮಾಚೀದೇವನನ್ನು, ಯಾರೂ ಮುಟ್ಟಬಾರದೆಂದು ಮುಟ್ಟಿದರೆ, ಅವರ ತೆಲೆಯನ್ನೇ ತೆಗೆಯುತ್ತಿದ್ದನೆಂದು ತಿಳಿದು ಬರುತ್ತದೆ.
ಮಾಚೀದೇವನ ಮೂಲ ಗ್ರಾಮ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಹಿಪ್ಪರಿಗಿ, ಬಸವಣ್ಣನ ವಿಚಾರಗಳಿಂದ ಪ್ರಭಾವಿತನಾಗಿ ಕಲ್ಯಾಣಕ್ಕೆ ಹೊಗಿ, ಅನುಭವ ಮಂಟಪದಲ್ಲಿ ಭಾಗವಹಿಸಿ ತನ್ನ ವಿಚಾರ ಧಾರೆಗಳನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾನೆ. “ಕಲಿದೇವರ ದೇವಾ” ಎಂಬ ಅಂಕಿತನಾಮದಿAದ ಹಲವಾರು ವಚನಗಳನ್ನು ರಚಿಸಿದ್ದಾನೆ. ವಚನಗಳ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದಲು ಪ್ರಯತ್ನಿಸಿದ್ದು ಅವರ ಹಲವಾರು ವಚನಗಳಲ್ಲಿ ಕಾಣಬಹುದು.
ಅಲ್ಲಮ ಪ್ರಭುದೇವರ ಮಾಚಿದೇವÀಯ್ಯನ ವ್ಯಕ್ತಿತ್ವವನ್ನು ತಿಳಿಸುವಂತ ಮಾತನ್ನು ತಮ್ಮವಚನದಲ್ಲಿ ಹಿಗೆ ಹೇಳಿದ್ದಾರೆ
“ಎನ್ನ ಮನವೆ ಮಡಿವಾಳನಯ್ಯ”
ಮನುಷ್ಯನ ಇಡಿ ದೇಹವು ದೈಹಿಕ,ಬೌದ್ದಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಸಮನ್ವಯದಿಂದ
ಕಾರ್ಯ ನಿರ್ವಹಿಸುತ್ತವೆ.ಇವುಗಳನ್ನು ಶರಣರು ಸ್ಥೂಲ ಶರೀರ,ಸೂಕ್ಷö್ಮ ಶರೀರ ಮತ್ತು ಕಾರಣ ಶರೀರ ಎಂದು ಕರೆದಿರುವರು.ಸೂಕ್ಷö್ಮ ಶರೀರದ ಮನೋ ವ್ಯಾಪರಗಳನ್ನು ಸಮರ್ಥವಾಗಿ ನಿರ್ವಹಿಸುವ ಕಲೆ ಮಡಿವಾಳಚಿiÀÄ್ಯನಿಗೆ
ಗೊತ್ತು. ಕಾಮ ಕ್ರೋಧ ಮೋಹ ಮದಮತ್ಸರಗಳಿಂದ ಮನವು ಮೈಲಿಗೆಯಾಗುತ್ತದೆ.ಆ ಮೈಲಿಗೆಯನ್ನೂ
ಮಾಚಿದೇವ ತೊಳೆಯವನು. ಸಾಧಕನ ಮನಸ್ಸು ಶುದ್ದವಾಗಿರಬೇಕು ಶುದ್ದ ಮನಸ್ಸಿನ ಪ್ರತಿಕವಾಗಿ ಮಡಿವಾಳಯ್ಯ
ನನ್ನಲ್ಲಿ ಸಮ್ಮಿಳಿತವಾಗಿರುವನು ಎಂಬುದು ಪ್ರಭುದೇವರ ಅಭಿಪ್ರಾಯ.
“ಮಡಿವಾಳಯ್ಯನ ಲಕ್ಷö್ಯ ಅಹಂಕಾರ ನಾಶದಲ್ಲಿ” ಎಂದು ಅಕ್ಕ ಮಹಾದೇವಿ ತನ್ನ ಒಂದು ವಚನದಲ್ಲಿ
ಮಡಿವಾಳನ ಕಾಯಕದ ಕುರಿತು ಹೇಳುತ್ತಾಳೆ.
ಅಹಂಕಾರ ಆಗಾಗ ಮನವನ್ನು ಕೊಳೆ ಮಾಡುತ್ತದೆ. ಶರಣರ ಮನಕ್ಕೆ ಆಗಾಗ ಅಡರುವ ಅಹಂಕಾರವೆನ್ನುವ ಕೊಳೆಯನ್ನು ನಾಶಮಾಡುವುದೆ ಮಡಿವಾಳಯ್ಯನ ಉದ್ದೇಶ ಅದಕ್ಕಾಗಿ ಮಡಿವಾಳಯ್ಯ ತನ್ನ ಗಮನವನ್ನೆಲ್ಲಾ ಆ ಕಾಯಕದಲ್ಲಿ ತೊಡಗಿಸಿರುತ್ತಾನೆ. ಎಂದು ಅಕ್ಕ ತನ್ನ ವಚನದಲ್ಲಿ ಉಲ್ಲೇಖಿಸುತ್ತಾ¼
ಮಡಿವಾಳಯ್ಯ ಅನುಭವ ಮಂಟಪದ ಎಲ್ಲ ಶರಣರ ಮನವನ್ನು ಚೆನ್ನಾಗಿ ಬಲ್ಲವನಗಿದ್ದ. ಮನಸ್ಸಿನಲ್ಲಿ ಉಂಟಾಗುವ ಕ್ಲೇಷಗಳನ್ನು ಪರಿಹರಿಸುವ ,ತಿಳಿಸಿ ಹೇಳುವ ಆಪ್ತ ಸಮಾಲೋಚಕನು ಕೂಡ ಅಗಿದ್ದ ಎನ್ನುವದು
ಅಕ್ಕನ ವಚನದ ಈ ಸಾಲುಗಳಿಂದ ತಿಳಿಯುತ್ತದೆ.
ಮಡಿವಾಳ ಮಾಚಿದೇವನ ವಚನಗಳು ಅತ್ಯಂತ ಭಾವಪುರ್ಣವಾದವುಗಳು.ಅವನ ಶಾಬ್ದಿಕ ಸಾಮರ್ಥ ಅನನ್ಯವಾದುದು.ವಚನಗಳಲ್ಲಿ ಬಳಸುವ ರೂಪಕಗಳು,ಶಬ್ದ ಮತ್ತು ವಿಷಯವಸ್ತುವಿಗೆ ಸಂಬAಧ ಹೋಲಿಸುವಿಕೆ
ತುಂಬಾ ವಿಶಿಷ್ಟವಾದುದು.
ವಾಯುವಿನ ಗುಣ ಸರ್ಪ ಬಲ್ಲದು
ಮಧುರ ಗುಣವ ಇರುವೆ ಬಲ್ಲದು
ಗೋತ್ರದ ಗುಣವ ಕಾಗೆ ಬಲ್ಲದು.
ಇದು ಕಾರಣ ಮನುಷ್ಯ ಜನ್ಮದಲ್ಲಿ ಬಂದು
ಶಿವಜ್ಞಾನವನÀರಿಯದಿದ್ದರೆ,
ಆ ಕಾಗೆ ಕೋಳಿಗಳಿಂದ ಕರಕಷ್ಠ ಕಾಣ ಕಲಿದೇವರದೇವಾ
ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿಗೂ ಒಂದು ವಿಶೇಷ ಜ್ಞಾನವಿದೆ ಆದರೆ, ಮನುಷ್ಯನಾಗಿ ಹುಟ್ಟಿ ಶಿವಜ್ಞಾನವರಿಯದಿದ್ದರೆ ಆ ಕಾಗೆ ಕೋಳಿಗಳಿಗಿಂತಲು ಕೀಳ ಎಂದು ಶಿವಜ್ಞಾನ ಅಂದರೆ ಸ್ವಯಂ ಅರಿವಿನ ಮಹತ್ವವನ್ನು ಈ ವಚನದಲ್ಲಿ ಸಾರಿರುವುದನ್ನು ಕಾಣಬಹುದು.
ಹುಲಿಯ ಕೊಂದು ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ
ಕರಡಿಯ ಕೊಂದು ಲಿಂಗಕ್ಕೆ ಮೇಲೋಗರ ಮಾಡಿದಾತ ಬಸವಣ್ಣ
ಹಾವಿನ ಪರಿಯಾಣ ಮಾಡಿ ಕೊಡಬಲ್ಲಾತ ಬಸವಣ್ಣ
ಕಾಣಾ ಕಲಿ ದೇವರದೇವಾ.
ಈ ವಚನದಲ್ಲಿ ಹುಲಿ ಮತ್ತು P್ಪರಡಿಯನ್ನು ಸಮಾಜದ ಜಾತಿ ತಾರತಮ್ಯ,ಲಿಂಗತಾರತವ್ಮ್ಯಗಳಿಗೆ ಹೋಲಿಕೆ ಮಾಡಿದ್ದಾರೆ.ಹುಲಿಯನ್ನು ಬೇಟೆಯಾಡುವುದು ಅಷ್ಟು ಸುಲಭದ ಕೆಲಸವಲ್ಲಾ. ಹಾಗೆಯೆ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟ ಜಾತಿವ್ಯವಸ್ಥೆಯನ್ನು ಕಿತ್ತೊಗೆಯುವುದು ಕೂಡ ಸುಲಭವಲ್ಲಾ.ಆದರೆ ಬಸವಣ್ಣ ಆ ಕಾರ್ಯವನ್ನು ಬಸವಣ್ಣನವರು ಮಾಡಿದರು.ಅನುಭವ ಮಂಟಪದ ಮೂಲಕ ಜಾತಿ ಸಮಾನತೆ ಲಿಂಗ ಸಮಾನತೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದರು. ಮನುಷ್ಯರ ಮನಸಿನಲ್ಲಿಯ ಜಾತಿ ವಿಷವು ಹಾವಿನ ವಿಷಕ್ಕಿಂತ ಅಪಾಯಕಾರಿ ಆದರೆ ಬಸವಣ್ಣ ಆ ವಿಷವನ್ನು ಬದಲಾಯಿಸಬಲ್ಲ ಸಾಮರ್ಥ್ಯ ಬಸವಣ್ಣನಿಗಿದೆ ಎನ್ನುವ ಮೆಚ್ಚುಗೆಯ ಮಾತನ್ನು ಹೇಳುತ್ತನೆ.ಈ ವಚನದಲ್ಲಿ ಬಳಸಿರುವ ರೂಪಕ ವನ್ನು ಗಮನಿಸಬಹುದು.
ಉಂಡರೆ ಭೂತನೆಂಬರು,
ಉಣದಿರ್ದಡೆ ಚಕೋರಿ ಎಂಬರು,
ಊರೊಳಗಿರ್ದಡೆ ಸಂಸಾರಿ ಎಂಬರು,
ಅಡವಿಯೊಳಗಿರ್ದಡೆ ಮರ್ಕಟನೆಂಬರು
ಮಾತನಾಡೆದರೆ ಪಾಪಕರ್ಮಿ ಎಂಬರು,
ಮಾತನಾಡದಿರ್ದಡೆ ಮುಸುಕ ಕರ್ಮಿ ಎಂಬರು,
ಮಲಗದಿರ್ದಡೆ ಚೋರನೆಂಬುರು,
ಮಲಗದಿರ್ದಡೆ ಜಡದೇಹಿ ಎಂಬರು,
ಇAತೀ ವಸುದೋಯೊಳಗೆ ಎಂಟು ವಿಧವ ಕಳೆಯಲಳವಲ್ಲ ಕಾಣಾ ಕಲಿದೇವರದೇವಾ.
ಉಚ್ಚಕಾರ್ಯಗಳಲ್ಲಿ ನಿರ್ಧಾರ ಹೊಂದಿದ ಮನುಷ್ಯನು ಎಂತಹ ತೊಂದರೆಗಳು ಬಂದರು ಬಿಡಬಾರದು ಜನರು ಅನೇಕ ವಿಧವಾಗಿ ಮಾತನಾಡುತ್ತಾರೆ. ಜನರ ಟೀಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,ದೃಢ ಮನಸಿನಿಂದ ಸ್ವಕÀರ್ತವ್ಯದಲ್ಲಿ ತೊಡಗಬೇಕೆಂದು ಮಾಚೀದೇವರು ಹೇಳುತ್ತಾರೆ.
ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣ ಕಂಡೆನು
ಎನ್ನ ಮನದರಿವಿನಲ್ಲಿ ಚೆನ್ನಬಸವಣ್ಣನ ಕಂಡೆನು
ಎನ್ನ ಭಾವದ ಕೊನೆಯ ಮೊನೆಯಲ್ಲಿ ಪ್ರಭುದೇವರ ಕಂಡೆನು
ಎಲೆ ಕಲಿದೇವರದೇವಾ ನಿಮ್ಮ ಶರಣರ ಘನವನೆನ್ನ
ಸರ್ವಾಂಗದಲ್ಲಿ ಕಂಡು ನಮೋ ನಮೋ ಎನುತಿದ್ದೆನಯ್ಯ.
ಎಂದು ಮಡಿವಾಳ ಮಾಚಿದೇವ ತನ್ನ ಸರ್ವಾಂಗದಲ್ಲಿ ಅಂದರೆ ಅರಿವಿಗೆ ಚನ್ನಬಸಣ್ಣ, ಆಚರಕ್ಕೆ ಬಸವಣ್ಣ
ಭಾವಕ್ಕೆ ಪ್ರಭುದೇವರಿಗೆ ಹೊಲಿಸಿ ತಾನು ಅವರನ್ನ ಒಳಗೊಂಡವನೆAದು ಹೇಳುತ್ತಾನೆ.
ಶರಣ ಕಲಿಯಾದ ಮಡಿವಾಳ ನಿಷ್ಟಾವಂತ.ಅದನ್ನು ಅಕ್ಕ ಮಾಹಾದೇವಿ ತನ್ನ ವಚನದಲಿ, “ಮಡಿವಾಳಯ್ಯನ ನಿಷ್ಟೆ” ಎಂದು ಉದಹರಿಸುತ್ತಾಳೆ. ಮಾಚಿದೇವ ಧೈರ್ಯವಂತ.ನಿಶ್ಚಲ ಮನಸ್ಸಿನವನು. ಹಿಡಿದ ಕೆಲಸ ಬಿಡದ,ಮರಣಕ್ಕೂ ಅಂಜದೆ ವಚನ ಸಾಹಿತ್ಯದ ಉಳಿವಿಗಾಗಿ ಹೋರಾಡಿದ ಶರಣ.
ಹೀಗೆ ತಮ್ಮ ಸುಮಾರು ನೂರು ವಚನಗಳಲ್ಲಿ ಕಾಯಕ, ದಾಸೋಹ, ಲೋಕನಿಂದೆ, ಶಿವಜ್ಞಾನದ,ಶಿವಶರಣರ ಸಂಘ ಮುಂತಾದ ವಿಷಯಗಳನ್ನು ಕಾಣಬಹುದು. ಕಲ್ಯಾಣದ ಕ್ರಾಂತಿಯ ನಂತರ, ಶರಣರೆಲಾ ್ಲಕಲ್ಯಾಣವನ್ನು ತೊರೆದರು. ಮಾಚೀದೇವರು ತಮ್ಮ ಸ್ವಗ್ರಾಮ ಹಿಪ್ಪರಗಿಗೆ ಬಂದು ಕಲ್ಲೀನಾಥನಲ್ಲಿ ಲೀನವಾದರು ಎಂದು ತಿಳಿದು ಬರುತ್ತದೆ.
–ಡಾ.ನಿರ್ಮಲಾ ಬಟ್ಟಲ
ಪ್ರಾಚಾರ್ಯರು ಬೆಳಗಾವಿ.