ಬಂಡೆದ್ದ ಶರಣರು
ವರ್ಗ ವರ್ಣ ಜಾತಿ ಭೇದ
ತೊರೆದ ಧೀರ ಯೋಧರು
ಸಮ ಸಮಾಜಕೆ ಜೀವ ಕೊಟ್ಟು
ಬಂಡೆದ್ದರು ಶರಣರು
ಗೊಡ್ಡು ಪದ್ಧತಿ ಮೌಢ್ಯಗಳ
ಮೆಟ್ಟಿ ನಿಂತ ಶ್ರೇಷ್ಠರು
ನಿತ್ಯ ದುಡಿದು ಹಂಚಿ ತಿಂದರು
ಬಸವ ಸೇನೆಯ ವೀರರು
ವೇದ ಆಗಮ ಶಾಸ್ತ್ರ ಪುರಾಣ
ಬಿಟ್ಟು ವಚನವ ಬರೆದರು
ಕೋಟಿ ದೇವರ ದೂರು ಮಾಡಿ
ಇಷ್ಟಲಿಂಗವ ಹಿಡಿದರು
ಉಚ್ಚ ನೀಚ ಗೋಡೆ ಕೆಡುವಿ
ಸಮತೆ ಸಾರಿದ ಧೀರರು
ಸುಲಿಗೆ ಶೋಷಣೆ ಕೊನೆ ಹೇಳಿದ
ದಿಟ್ಟ ಸಂತ ಶರಣರು
ದಯವೇ ಧರ್ಮದ ಎಂದು ಹೇಳಿ
ಪ್ರೀತಿ ಬಿತ್ತಿ ಶಾಂತಿ ಬೆಳೆದರು
ಶತಮಾನದ ಅನ್ಯಾಯಕೆ
ಬಂಡೆದ್ದ ಶರಣರು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ