ಠೇವಣಿ ಹಣ ಹೂಡಿಕೆದಾರರಿಗೆ ಮರಳಿ ಸಿಗುವುದೆಂದು ?ಠೇವಣಿದಾರರ ಅಳಲು
e-ಸುದ್ದಿ ಬೆಳಗಾವಿ
ಸಂಗೊಳ್ಳಿ ರಾಯಣ್ಣ ಅರ್ಬನ್ ಕೊಪರೇಟಿವ್ ಸೋಸೈಟಿಯಲ್ಲಿ ಸಾರ್ವಜನಿಕರು ಇಟ್ಟಿರುವ ಠೇವಣಿ ಹಣ ಎಂದು ದೊರೆಯುತ್ತದೆ ಎಂದು ಠೇವಣಿದಾರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮುನ್ನೂರು ಕೋಟಿ ರೂಪಾಯಿಗೂ ಮಿಕ್ಕ ಹಣದ ವಂಚನೆ ಮಾಡಿದ ಚಿತ್ರೋದ್ಯಮಿ ಆನಂದ ಅಪ್ಪುಗೋಳ ನಾಲ್ಕು ವರುಷ ಜೈಲಿನಲ್ಲಿದ್ದು ಈಗ ಹೊರ ಬಂದಿದ್ದಾನೆ.
ಸರಕಾರ ಆತನ ಆಸ್ತಿ ಮುಟ್ಟುಗೋಲು ಹಾಕಿ ಠೇವಣಿದಾರರ ಹಣವನ್ನು ಮರಳಿಸುವಂತೆ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ
ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿರುವ ಆನಂದ ಅಪ್ಪಗೊಳ ಅವರು ಬಡ ಮಧ್ಯಮ ಕೂಲಿ ಕಾರ್ಮಿಕರ ಠೇವಣಿ ಹಣ ಹಿಂತಿರುಗಿಸದೆ ಇರುವದು ಅತೀವ ನೋವಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇಂತಹ ವಂಚನೆ ಮಾಡಿದ್ದ ಆನಂದ ಅಪ್ಪುಗೋಳ ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.
ಅದೆಷ್ಟೊ ಮುದುಕರೂ ಹಿರಿಯ ನಾಗರಿಕರು ನೂರಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೀಜನವಾಗಿಲ್ಲ. ಕೂಡಲೇ ಹಣ ವಾಪಾಸು ಕೊಡಿಸಿ. ಇಲ್ಲದಿದ್ದಲ್ಲಿ ಹೋರಾಟ ಮಾಡುವದಾಗಿ ಠೇವಣಿದಾರರು ಎಚ್ಚರಿಸಿದ್ದಾರೆ.