ಸತ್ಯದ ಹುಡುಕಾಟದಲ್ಲಿ ಬದುಕು ಬಂಗಾರವಾಗಲಿ-ಶ್ರೀವರರುದ್ರಮುನಿ ಶಿವಾಚಾರ್ಯರು

¸e-ಸುದ್ದಿ ಮಸ್ಕಿ

ಪ್ರವಾದಿ ಮುಹಮ್ಮದ್ ಅವರ ಚಿಂತನೆಗಳು ಸರ್ವಕಾಲಿಕ ಸತ್ಯವಾಖ್ಯಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ಬದಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಮಸ್ಕಿಯ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದ ಆವರಣದಲ್ಲಿ ಪ್ರವಾದಿ ಮಹ್ಮದ್ ಪೈಗಂಬರರ ಜನ್ಮ ದಿನಾಚರಣೆ ಹಾಗೂ ಜಿಯಾರತ್ ಆಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಎಸ್‍ಐಓ ಸಂಘಟನೆಗಳು ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಮುಖಂಡ ಅಬ್ದುಲ್‍ಗನಿಸಾಬ್ ಮಾತನಾಡಿ ಪ್ರಪಂಚದಲ್ಲಿ ಇತ್ತಿಚಿಗೆ ನಡೆಯುತ್ತಿರುವ ಬೆಳವಣಿಗೆಗಳು ಅತ್ಯಂತ ಅಘಾತಕಾರಿಯಾಗಿವೆ. ನಾವು ಪ್ರವಾದಿಯವರ ಮಾರ್ಗದಲ್ಲಿ ನಡೆದು ಅವುಗಳಿಗೆ ಕಡಿವಾಣ ಹಾಕಬೇಕಾಗಿದ್ದು ನಮ್ಮ ಕರ್ತತ್ಯವಾಗಿದೆ. ನಾವು ಪ್ರವಾದಿಗಳ ಅನುಯಾಯಿಗಳಾಗಿ ಅವರ ತತ್ವಾದರ್ಶಗಳನ್ನು ಅಳವಡಿಕೊಳ್ಳಬೇಕು. ಆದ್ದರಿಂದ ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು. ಜಿಲಾನಿ ಖಾಜಿ ಮಾತನಾಡಿದರು.
ಗೆಚ್ಚಿನ ಮಠದ ಆವರಣದ ಮುಂಭಾಗದಿಂದ ಹಳೆಬಸ್ ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಯವರೆಗೆ ಸ್ಚಚ್ಛತಾ ಕಾರ್ಯ ನಡೆಸಿದರು. ಬಾಹರಲಿಸಾಬ್, ಹುಸೇನ್‍ಸಾಬ್ ಇಲಕಲ್, ಇಕ್ಬಾಲ್‍ಸಾಬ್, ಶಫೀಸಾಬ್, ರಜಾಕ್‍ಸಾಬ್, ಚಾಂದ್‍ಪಾಶ ಶೇಡ್ಮಿ, ಸಮೀರ್‍ಪಾಶ, ರಹೀಮ್‍ಪಾಶ, ಯುನೀಸ್ ಬಳ್ಳಾರಿ, ಮಹಿಬೂಬ್ ಕುಷ್ಟಗಿ, ಇಮಾಮ್‍ಸಾಬ್ ಕಾತರಕಿ, ಇರ್ಪಾನ್, ಸುಲೇಮಾಲ್, ಮೌಲಾಸಾಬ್, ಹುಸೇನ್ ಶೇಡ್ಮಿ ಸೇರಿದಂತೆ ಇತರರು ಇದ್ದರು.

Don`t copy text!