ಭ್ರಮರಾಂಬ ದೇವಿಯ ರಥ ಎಳೆದ ಮಹಿಳೆಯರು

e-ಸುದ್ದಿ ಮಸ್ಕಿ

ಪಟ್ಟಣದ ಭ್ರಮರಾಂಬ ದೇವಿಯ ಜಾತ್ರೆ ಶನಿವಾರ ಸರಳವಾಗಿ ನಡೆದು ಮಹಿಳೆಯರು ರಥವನ್ನು ಎಳೆದು ಪುನಿತರಾದರು.
ಪ್ರತಿವರ್ಷ ಪಟ್ಟಣದ ಭ್ರಮರಾಂಬ ದೇವಿಯ ಪುರಾಣ ಮಂಗಲ, 1008 ಕುಂಭಗಳ ಜಲಾಭೀಷೇಕ, ಮೈಸೂರು ದಸರಾ ಮಾದರಿಯಲ್ಲಿ ಅಂಬಾರಿ ಮೆರವಣಿಗೆ, ಮಹಿಳೆಯರಿಂದ ರಥೋತ್ಸವ ಅದ್ಧೂರಿಯಾಗಿ ಜರುಗುತ್ತಿತ್ತು.
ಈ ಬಾರಿ ಕರೊನ ಹಿನ್ನಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದು ಶನಿವಾರ ಬೆಳಿಗ್ಗೆ ಅರ್ಚಕರ 5 ಕುಟುಂಬದವರು ಗಂಗಾಸ್ಥಳದಿಂದ ಕುಂಭ ತಂದು ಭ್ರಮರಾಂಬ ದೇವಿಗೆ ಜಲಾಭೀಷೇಕ ಮಾಡಿದರು. ನಂತರ ಕುಂಕುಮಾರ್ಚನೆ, ವಿಶೇಷ ಪೂಜೆ ನಡೆಯಿತು.


ಪಟ್ಟಣದ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೇ ನೀಡಿದರು. ಈ ವರ್ಷ ಸರಳವಾಗಿ ನೂರಾರು ಮಹಿಳೆಯರು ಬೆಳಿಗ್ಗೆ ರಥವನ್ನು ಎಳೆಯುವ ಮೂಲಕ ಸಂಪ್ರದಾಯವನ್ನು ಬಿಟ್ಟುಕೊಡದೆ ಸರಳವಾಗಿ ಆಚರಿಸಿದರು. ನಂತರ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಗ್ರಾಮದ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ದೇವಸ್ಥಾನ ಸಮಿತಿಯ ಮುಖಂಡರಾದ ಪ್ರಕಾಶ ಧಾರಿವಾಲ, ಸಿದ್ಧಲಿಂಗಯ್ಯ ಗಚ್ಚಿನಮಠ, ಮಲ್ಲಪ್ಪ ನಾಯಿಕೊಡೆ, ಬಸವರಾಜಪ್ಪ ಕಡಿ, ಪಂಪಣ್ಣ ಗುಂಡಳ್ಳಿ, ಬಸನಗೌಡ ಪೊಲೀಸ ಪಾಟೀಲ, ಪ್ರಸನ್ನ ಪಾಟೀಲ, ವೀರೇಶಪ್ಪ ಬಾಳಿಕಾಯಿ, ಮಲ್ಲಪ್ಪ ನಾಯಿಕೊಡೆ, ನಾಗರಾಜ ಸಜ್ಜನ್, ಮಲ್ಲಿಕಾರ್ಜುನ ಕ್ಯಾತ್ನಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!