ಸುಮಧುರ ಕಲ್ಪನೆ.

ಸುಮಧುರ ಕಲ್ಪನೆ.

ಮಧುರ ಮಧುರ ಈ ಬಂಧನಗಳಲಿ
ಮಧುರತೆಯು ಬೆರೆತು ಸುಂದರವಾಗಲಿ
ಕ್ಷಣ ಕ್ಷಣದಿ ಮಧುರ ಭಾವ ಸೂಸುತಲಿ
ಮಧುರ ಮಾಧುರ್ಯತೆ ಬೆಳೆಯುತ ಇರಲಿ || 1 ||

ಹೊಸ ಹೊಸ ಸಂಬಂಧಗಳು ಹೊಸೆಯುತಲಿ
ಕಟ್ಟು ನಿಟ್ಟುಗಳಲಿ ಮಿರ ಮಿರ ಮಿಂಚುತಲಿ
ಚಂದಿರನಂತೆ ದಿನ ದಿನವೂ ಬೆಳೆಯುತಲಿ
ಮಿರುಗುವ ಚೈತನ್ಯವ ಹರಹುತಲಿ|| 2 ||

ಅಂದದ ಚಂದದ ಸುಂದರ ಬಂಧನ ಕಾಣುತಲಿ
ಸುಂದರ ಸುಮಧುರ ಜೀವನ ಸಾಗಿಸುತಲಿ
ನವ ನವ ಚೇತನವ ಜೀವನದಿ ತುಂಬುತಲಿ
ನವ ನವ ವಿಧದ ನವ ಕಂಪನು ಬೀರುತಲಿ || 3 ||

ಮಧುರ ಮಧುರ ಬಂಧನಗಳ ಕೂಡಿಸುತಲಿ
ಮಧುರ ಸುಮಧುರ ಕಲ್ಪನೆಗಳ ಅರಿವಿನಲಿ || 4 ||

ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473

 

Don`t copy text!