ಮಾಯಿ ನೀ ನಿತ್ಯ ಚಿರಂತನ

ಮಾಯಿ ನೀ ನಿತ್ಯ ಚಿರಂತನ

ಗಾನ ಸ್ವರ
ಪಯಣದಲಿ
ಸ್ವರ ಸರಸ್ವತಿ
ನೀನಾದೆ
ಭಾರತ ರತ್ನ
ಕೀರೀಟವ ಧರಿಸಿ
ಪದ್ಮಭೂಷಣದ
ಪ್ರಶಸ್ತಿ ವಿಜೇತೆ
ನೀನಾದೆ
ದಾದಾ ಸಾಹೇಬ
ಪಾಲ್ಕೆ ಪುರಸ್ಕೃತಳಾಗಿ
ಸಂಗೀತಲೋಕದ
ಕಣ್ಮಣಿ ನೀನಾದೆ
ನಾದ ಸ್ವರ
ಲಯದ ನಕ್ಷತ್ರದಂತೆ
ಗಾನ ಕೋಗಿಲೆ ನೀನಾದೆ
ಮೂವತ್ತಾರು ಭಾಷೆಗೆ
ಸಂಗೀತ ಸುಧೆ ಹರಿಸಿದ
ಸಂಗೀತ ರತ್ನ ನೀನಾದೆ
ಭಾವ್ ಬಂಧನ್ ನಾಟಕದಿಂದ
ಹೇಮಾ, ಲತಾ ನೀನಾದೆ
ನಿನ್ನ ಸ್ವರ ಜಾತ್ರೆ
ಎಂದೆಂದಿಗೂ ಚಿರಂತನ
ಮಾಯಿ ನೀ ಎಂದೂ
ನಿತ್ಯ ನೂತನ

ಡಾ ದಾನಮ್ಮ ಝಳಕಿ ಬೆಳಗಾವಿ

Don`t copy text!