ಮರೆಯದೇ ಮರಳಿ ಬನ್ನಿ
ಮರೆಯದೆ ಮರಳಿ ಬನ್ನಿ
ಸಂತ ಸುತಾರ
ಎಷ್ಟು ಚಂದ ನುಡಿಸಿದಿರಿ
ಭಾವೈಕ್ಯದ ಸಿತಾರ ||
ಅಲ್ಲ ನೀವು
ಬರಿ ಮಾತಿನ ಸೊಗಸುಗಾರ ನಡೆ ನುಡಿಯಲಿ
ಸಾರಿದಿರಿ ನೈಜ ಧರ್ಮ ಸಾರ ||
ಕರುನಾಡ ಜನರೆದೆಯ
ಮನ ಮನೆಯ ಮಂದಾರ ಮರೆಯದೆ ಮರಳಿ ಬನ್ನಿ
ಸಂತ ಸುತಾರ ||
ಅರಿತರಿತು ಗೋಡೆಗಳು ನಿಲ್ಲುತಿವೆ
ಧರ್ಮಗಳ ನಡುವೆ
ಕಂಡು ಕಾಣದೆ ನಡೆಯುತಿಹರು
ನಮಗೇತಕಿ ಗೊಡವೆ ||
ಅರಿತವರದೆಷ್ಟು ಭಾವೈಕ್ಯತೆಯನು
ಅದು ಬೆಲೆ ಕಟ್ಟಲಾಗದ ಒಡವೆ ಸರಳವಾಗಿ ನುಡಿದು ನಡೆದಿರಿ
ಇದ್ದು ನಮ್ಮ ನಡುವೆ ||
ಗೀತೆ ಖುರಾನ್ ಎಲ್ಲವನು
ಮಸ್ತಕದೊಳಿಟ್ಟಿರಿ ಮನುಜ
ಮತವೆ ನೈಜವೆಂದು
ಸಾರಿ ಸಾರಿ ನುಡಿದಿರಿ ||
ನಿಮಗಾಗಾಗಿ ಅಲ್ಲ ಸಂತ
ನಮಗಾಗಿ ಬನ್ನಿರಿ
ಮರೆಯದೆ ಮರಳಿ ಬನ್ನಿ…..
ಮರೆಯದೆ ಮರಳಿ ಬನ್ನಿ….. ||
✍️ ಮಲ್ಲಯ್ಯ ಕೆಂಭಾವಿಮಠ