ಪ್ರಶ್ನೆಗಳು
ದಿಂಬುಗಳೂ
ಕನಸು ಕಾಣಬೇಕಂತೆ
ಕೊಡುವೆಯಾ ಬಾಡಿಗೆಗೆ
ಒಲವಿನೆದೆಯ
ಬಾನಂಗಳವ?
ಕಣ್ಣೀರ ಕೋಡಿಗಳೂ
ಕರ ಕಟ್ಟಬೇಕಂತೆ
ನೀಡುವೆಯಾ
ಮನಸಾರೆ ನಿದ್ರೆ
ಇರದ ರಾತ್ರಿಗಳ?
ಕನವರಿಕೆಗಳೂ
ಬಿಡುಬೀಸಾಗಿ
ಸಾಗಬೇಕಂತೆ
ತರುವೆಯಾ ನೀ ನಿಲ್ಲದ
ರಸಗಳಿಗೆಗಳ?
ಮಧುಮಂಚಕೂ
ಕೊಂಚ ಆಲಿಂಗನದ
ಮಹದಾಸೆಯಂತೆ
ತೆರೆಯುವೆಯಾ
ಎದೆಯ ಕದವ?
ಮಿಲನವೂ
ಬಯಸುತಿದೆ ಮುಕ್ತಿಯ
ಮಡಿವಂತಿಕೆಯ
ಕಳಚುವೆಯಾ
ದೇಹ ವಾಸನೆಯ?
-ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ ೫೮೭೩೦೧
೯೪೪೮೫೯೧೧೬೭