e-ಸುದ್ದಿ ಮಸ್ಕಿ:
ಭಗೀರಥ ಸಂಘದ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಮಾಜದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳನ್ನು ನೇಮಕ ಮಾಡಿದರು. ನಾಗನಗೌಡ ಪಾಟೀಲ(ಗೌರವಧ್ಯಕ್ಷ) ಮಂಜುನಾಥ ಮಸ್ಕಿ(ಅಧ್ಯಕ್ಷ) ಯಮನೂರಪ್ಪ ಬಳಗಾನೂರ(ಉಪಾಧ್ಯಕ್ಷ) ತಿರುಪತಿ ತೋರಣದಿನ್ನಿ(ಉಪಾಧ್ಯಕ್ಷ) ಬಸವರಾಜ(ಹಂಚಿನಾಳ ಕ್ಯಾಂಪ್) ವೆಂಕಟೇಶ ದಳಪತಿ(ಉಪಾಧ್ಯಕ್ಷ) ಹನುಮಂತಪ್ಪ ರಂಗಾಪೂರ(ಉಪಾಧ್ಯಕ್ಷ) ದೇವರಾಜ ಜಾಲವಾಡಗಿ(ಪ್ರಧಾನ ಕಾರ್ಯದರ್ಶಿ) ಚಿದಾನಂದಪ್ಪ ಬುದ್ದಿನಿ(ಕಾರ್ಯದರ್ಶಿ) ವೆಂಕಟೇಶ ತಲೆಖಾನ(ಸಹ ಕಾರ್ಯದರ್ಶಿ) ಅಮರೇಶ ಗೋನಾಳ(ಖಜಾಂಚಿ) ರಾಮಣ್ಣ ಮರಕಂದಿನ್ನಿ(ಸಂಘಟನಾ ಕಾರ್ಯದರ್ಶಿ) ವೆಂಕಟೇಶ ಸಾಗರ ಕ್ಯಾಂಪ್(ಸಂಘಟನಾ ಕಾರ್ಯದರ್ಶಿ) ಲಾಲಪ್ಪ ಬೇಡರ ಕಾರ್ಲಕುಂಟಿ(ಸಂಘಟನಾ ಕಾರ್ಯದರ್ಶಿ) ಗಂಗಾಧರ ಸುಂಕನೂರು(ಸಂಘಟನಾ ಕಾರ್ಯದರ್ಶಿ) ರಾಘವೇಂದ್ರ ವಕೀಕರು(ಕಾನೂನು ಸಲಹೆಗಾರ) ಹಾಗೂ ಸಲಹಾ ಸಮಿತಿ ಸದಸ್ಯರನ್ನಾಗಿ ಟಿ.ರಂಗಪ್ಪ ಮಸ್ಕಿ.ಹನುಮಂತಪ್ಪ ಮಸ್ಕಿ, ತಿಮ್ಮಣ್ಣ, ಅಮರಣ್ಣ ಕಡದರಾಳ,ಗಂಗಾಧರ ಬುದ್ಧಿನಿ, ವೆಂಕೋಬ ಗೋನಾಳ, ಮಲ್ಲಿಕಾರ್ಜುನ ಜಾಲವಾಡಗಿ, ಯಂಕೋಬ ದೇವಪೂರ, ವೆಂಕಟೇಶ ಕೊಳಬಾಳ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಭಗೀರಥ (ಉಪ್ಪಾರ) ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.