ಬಸವಣ್ಣ ನಾವು ಅನಾಥರು

ಬಸವಣ್ಣ ನಾವು ಅನಾಥರು


ಎಲ್ಲಿದ್ದೀ ಬಸವ ನಾವು ಅನಾಥರು…
ನೀನೇ ಅಪ್ಪಿಕೊಂಡ ದಲಿತರು ನಾವು..
ನೀನು ಹೋದ ಮೇಲೆ ನಮ್ಮನ್ನು ಕೇಳುವವರಾರು..
ಉಚ್ಛ,ಮೇಲು ಜಾತಿಯ ದಬ್ಬಾಳಿಕೆಗೆ ನಲುಗಿರುವವರು ನಾವು..
ಲಿಂಗ ಸಮಾನತೆಯ ಆ ಪರಿಯ ವಾಕ್ಯವ ಕೇಳುವವರಾರು..
ಶತ, ಶತಮಾನಗಳು ಕಳೆದರೂ ಹೋಗಿಲ್ಲ ಜಾತಿ ವರ್ಣಸಂಕರ..
ಆದರೆ ನಾವು ಕೂಡ ಧರಿಸುತ್ತೇವೆ ವಿಭೂತಿಯನ್ನು..
ನೀ ಕೊಟ್ಟ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೇವೆ ನಾವು..
ಬಸವಣ್ಣ ನೀನು ಇಲ್ಲದಿದ್ದರೂ ನಾವು ಎಂದಿಗೂ ಮರೆಯಲಾರೆವು ನಿಮ್ಮನ್ನು…

ಗೀತಾ ಜಿ ಎಸ್
ಹರಮಘಟ್ಟ ಶಿವಮೊಗ್ಗ

Don`t copy text!