ಬದುಕು ಬದಲಾಯಿಸಿದ ಪ್ರೀತಿ -ಪ್ರೇಮ

ಬದುಕು ಬದಲಾಯಿಸಿದ ಪ್ರೀತಿ -ಪ್ರೇಮ

ಪ್ರೀತಿ ಇಲ್ಲದ ಮೇಲೆ
ಹೂ ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
ಕವಿ ಜಿ.ಎಸ್.ಶಿವರುದ್ರಪ್ಪನವರ ಒಂದು ಕವನದ ಸಾಲುಗಳು ನೆನಪಾಗುತ್ತವೆ.
ಈ ಜಗತ್ತು ನಿಂತಿರುವುದು ಪ್ರೀತಿಯ ಮೇಲೆ. ಪ್ರೀತಿಯೇ ಶಕ್ತಿ ಈ ಪ್ರೀತಿ -ಪ್ರೇಮ ದ ಬಗ್ಗೆ ಅನೇಕರು ತಮ್ಮದೇ ವ್ಯಾಖ್ಯಾನಗಳನ್ನು ಈ ರೀತಿಯಾಗಿ ವ್ಯಕ್ತಪಡಿಸಿರುವರು.
ಪ್ರೇಮ
1) ಒಂದು ಹೆಣ್ಣಿನೊಡನೆ ಬದುಕಬೇಕೆಂಬ ಒಬ್ಬ ಗಂಡಸು ಮಾಡುವ ಪ್ರಯತ್ನವನ್ನು ಪ್ರೇಮ ಎಂದು ಕರೆಯುತ್ತಾರೆ. -ವುಡ್ ಹೌಸ್
2)ಪ್ರೇಮ ವು ಸಂಸಾರದ ಜ್ಯೋತಿ ಇದ್ದಂತೆ – ಯೇಸುಕ್ರಿಸ್ತ
3) ಪ್ರೇಮದಂಥ ಸದ್ಗುಣವಸ್ತು ಇನ್ನೊಂದಿಲ್ಲ.-ಸ್ವಾಮಿ ವಿವೇಕಾನಂದ
4)ಪ್ರೇಮದ ಕುರುಹು ತ್ಯಾಗದಲ್ಲಿ ಇದೆ
5)ಪ್ರೇಮವು ಸತ್ಯದೊಂದಿಗೆ ಮಾತ್ರ ಸಂತೋಷವಾಗಿರುತ್ತದೆ ಪ್ರೇಮ ಏನೆಲ್ಲ ಸಹಿಸುತ್ತದೆ ಏನೆಲ್ಲ ಮನ್ನಿಸುತ್ತದೆ ಪ್ರೇಮವು ಆಶಾಮಯ ಅದು ನಿಷ್ಪಲವಾಗುವುದಿಲ್ಲ-ಮ ,ಗಾಂಧಿ
6)ಮನುಷ್ಯತ್ವದ ಹೆಸರೇ ಪ್ರೇಮ -ಬುದ್ಧ
7)ನಿಜವಾದ ಪ್ರೇಮಕ್ಕೆ ಆದರವೇ ಅಡಿಗಲ್ಲು.-ಆಂಗ್ಲನುಡಿ
8)ಪ್ರೇಮದ ನಶೆಯಲ್ಲಿರುವವನಿಗೆ ನಾಚಿಕೆಯೆಂಬುದೇ ಇರುವುದಿಲ್ಲ -ಜೇಬುನ್ನಿಕಾ
9)ಪ್ರೇಮ ಸಾಮ್ರಾಜ್ಯದಲ್ಲಿ ಬಡತನವೇ ಸಿರಿತನ-ಶೇಕ್ಸ್ ಪಿಯರ್
11)ಪ್ರೇಮವನ್ನು ಪ್ರೇಮದಿಂದಲೇ ಸಂಪಾದಿಸಬಹುದು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ-ಲಾಂಗ್ ಫೆಲೋ
12)ಪ್ರೇಮವು ಪಾಪಿಗಳನ್ನು ಸುಧಾರಿಸುತ್ತದೆ._ಟಾಲಸ್ಟಾಯ್
13)ಪ್ರೇಮಕ್ಕೆ ದೂರ ಸಾಮಿಪ್ಯಗಳ ಪ್ರಶ್ನೆ ಇಲ್ಲ. -ಮಿರ್ಜಿಅನ್ನಾರಾಯ್
14)ಪ್ರೇಮದ ಮಾತುಗಳೆಂದೂ ಹಳೆಯವಾಗಲಾರವು-
ಜೋರಾಫಿಯೋ
15)ಪ್ರೇಮ ಹುಟ್ಟಿ ಅದನ್ನು ಕಳೆದುಕೊಳ್ಳುವುದಕ್ಕಿಂತ ಅದು ಹುಟ್ಟದಿರುವುದೇ ಲೇಸು_ಸುಭಾಷಿತ
16)ಪ್ರೇಮ ಹೀನವಾದ ಕ್ರಿಯೆಗಳೆಲ್ಲವೂ ಶೂನ್ಯವೇ -ಜಿಬ್ರಾನ್
17)ಪ್ರೇಮದ ನಡೆಯ ಜಾಡನ್ನು ಸ್ತ್ರೀಯರು ಅತೀ ಶೀಘ್ರ ಅರಿಯುವರು-ಟ್ಯಾಗೋರ್
18)ಪ್ರೇಮವು ಇದ್ದರೆ ಹಿಂದೂ ಹೆಂಡತಿಯಂತೆ ಇರಬೇಕು ಅದು ಜೀವನದಲ್ಲಿಯೂ ನಮ್ಮೊಂದಿಗೆ ಇರುತ್ತದೆ.
19)ಪ್ರೇಮವು ಗಂಡನಿಗೆ ತನ್ನ ಜೀವಮಾನದಲ್ಲಿ ಒಂದು ಭಾಗ ಮಾತ್ರವಾಗಿದ್ದರೆ ಹೆಣ್ಣಿಗೆ ಅದು ಅವಳ ಇಡೀ ಜೀವಮಾನವೇ ಆಗಿದೆ.ಹೌದು ಪ್ರೀತಿ ನಮ್ಮ ಬದುಕನ್ನು ಬದಲಿಸುವಂತಿರಬೇಕು. ತಂದೆ-ತಾಯಿ ಪೋಷಕ ಗುರು ಹಿರಿಯರ ಮಾತುಗಳನ್ನು ಕಡೆಗಣಿಸಿ ಪ್ರೀತಿಯ ಬಲೆಯಲ್ಲಿ ಬೀಳುವ ಇಂದಿನ ಯುವ ಪ್ರೇಮಿಗಳನ್ನು ನೋಡಿದಾಗ ನನಗೆ ತುಂಬಾ ದುಃಖವಾಗುತ್ತದೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯ ಸುಳಿಯಲ್ಲಿ ಸಿಲುಕಿ ಹೊರಗೆ ಬಾರದೆ ಅನೇಕ ಆಘಾತಗಳಿಗೆ ಕಾರಣರಾದ , ಕಾರಣರಾಗುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಸಿಗುತ್ತವೆ ತಂದೆ ತಾಯಿಗಳನ್ನು ಕಡೆಗಣಿಸಿ , ಕೊಲೆಮಾಡುವ ಇಂದಿನ ಮಕ್ಕಳ ಮನಸ್ಥಿತಿಯನ್ನು ಯಾವ ಗುರು ತಾನೇ ತಿದ್ದಲು ಸಾಧ್ಯ .ಸಾಧ್ಯ ಆದರೂ ಗುರುಗಳ ಮಾತನ್ನೂ ಧಿಕ್ಕರಿಸಿ ನಡೆಯುವ ಇಂದಿನ ಯುವಕರಿಗೆ ಏನು ಹೇಳಬೇಕು .ಪ್ರೀತಿಸುವುದು ತಪ್ಪಲ್ಲ ಈ ಜಗತ್ತಿನಲ್ಲಿ ನಾವು ಯಾರು ಯಾರನ್ನಾದರೂ ಪ್ರೀತಿಸಬಹುದು ಪ್ರೀತಿಯು ವಯಸ್ಸು,ಲಿಂಗ ,ಜಾತಿ ,
ಜನಾಂಗ ಮತ್ತು ಧರ್ಮವನ್ನು ಮೀರಿದ್ದು. ಧರ್ಮ ಮೀರಿದ್ದು ಎಂದು ಹೇಳಿದರೆ ಪ್ರೀತಿಯ ಹುಚ್ಚು ಕಿಡಿ ಯಾರ ಎದೆಯನ್ನೂ ಸುಡಬಾರದು. ಯಾವ ಕುಟುಂಬವನ್ನೂ ,ಸಮಾಜವನ್ನೂ ಧರ್ಮವನ್ನೂ ಒಡೆಯಬಾರದು. ಪ್ರೀತಿಯ ಭಾವಗಳು ಮನಸಾರೇ ಒಪ್ಪಿಕೊಂಡು ಎರಡು ಕುಟುಂಬವನ್ನು ಬೆಸೆಯುವ ನೈತಿಕ ಹೊಣೆಗಾರಿಕೆಯೂ ಇರಬೇಕು.ಪ್ರೀತಿ ಯು ಶಕ್ತಿಯಾಗಬೇಕು .ನಮ್ಮ ಬದುಕಿನ ಮುನ್ನುಡಿಯನ್ನು ನಾವೇ ಬರೆದುಕೊಳ್ಳಬೇಕು. ಪ್ರೀತಿಯು ನಿಂತ ನೀರಿನಂತೆ ಆಗದೇ ಹರಿಯುವ ಸ್ವಚ್ಛಂದ ತಿಳಿನೀರಿನಂತೆ ಮನಃಶುದ್ಧವಾಗಿರಬೇಕು. ಕೊಳಚೆ ನೀರು ಗಬ್ಬೆದ್ದು ನಾರುವಂತೆ ಆಗಬಾರದು . ಪ್ರೀತಿ ನಮ್ಮ ಬದುಕನ್ನು ಯಾವ ರೀತಿ ಬದಲಾಯಿಸುವುದು ಎಂಬುವುದಕ್ಗೆ ನಿಜ ಜೀವನದಲ್ಲಿ ನಡೆದ ಒಂದು ಘಟನೆ .ಸುಮಾರು 30 ವರ್ಷದ ಹಿಂದಿನ ಘಟನೆ ಒಂದು ಊರು ಆ ಊರಿನಲ್ಲಿ ಒಂದು ಸುಸಂಸ್ಕೃತ ಕುಟುಂಬದಲ್ಲಿ ಸುಮಾರು ಹತ್ತು ಹನ್ನೆರಡು ವರ್ಷದ ಹುಡುಗ ಹುಡುಗಿ ಜೋಡಿಯಾಗಿ ಬೆಳೆದು ಆಟಪಾಠಗಳಲ್ಲಿ ಮೈಮರೆತು ಓದುತ್ತಿದ್ದರು. ಹುಡುಗಿ ತುಂಬಾ ಚತುರೆ ಜಾಣೆಯೂ ಕೂಡಾ. ಎಲ್ಲಾ ಕೆಲಸಕಾರ್ಯಗಳಲ್ಲಿ ಎತ್ತಿದ ಕೈ. ಓಣಿಯ ಜನರು ಹುಡುಗಿಯ ಕೆಲಸ ಕಾರ್ಯಗಳ ಕುರಿತು ತುಂಬಾ ಮೆಚ್ಚಿಕೊಂಡು ತಮ್ಮ ಮಕ್ಕಳಿಗೆ ಹೀಗೆ ಹೇಳುತ್ತಿದ್ದರು. ಆ ಹುಡುಗಿ ನೋಡಿ ಕಲಿಯಿರಿ .ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಾಳೆ ಎಷ್ಟು ಚೆಂದ ಎಲ್ಲಾ ಕೆಲಸ ಮಾಡಿ ಶಾಲೆಗೆ ಹೋಗುತ್ತಾಳೆ ಎಂದು ಹೇಳುತ್ತಿದ್ದರು. ಯಾವ ಕೆಲಸ ಕೊಟ್ಟ ರೂ ಹಿಂಜರಿಯದೇ ಮಾಡುವ ಹುಡುಗಿ ಯ ಸೋದರತ್ತೆಯ ಮಗನು ಹುಡುಗಿಯನ್ನು ಮನಸಾರೆ ತುಂಬಾ ಇಷ್ಟಪಡುತ್ತಿದ್ದ. ಇಬ್ಬರೂ ಅಭ್ಯಾಸ ಮಾಡುತ್ತ ಆಟ ಆಡುತ್ತ ಹಾಗೇ ಕಾಲೇಜೀನ ಮೆಟ್ಟಿಲು ಏರುತ್ತಾರೆ. ಒಂದು ಸಲ ಹುಡುಗಿಯನ್ನು.ಹುಡುಗ ಕೇಳುತ್ತಾನೆ ನನ್ನನ್ನು ಮದುವೆಯಾಗುತ್ತೀಯಾ ?ಎಂದು ಆವಾಗ ಹುಡುಗಿ ನನ್ನನ್ನು ಮದುವೆಯಾಗಿ ಏನ್ ಮಾಡುತ್ತೀಯಾ ?ಇಬ್ಬರೂ ಕಲಿಯೋಣ ಇಬ್ಬರಲ್ಲಿ ಯಾರಿಗಾದರೂ ನೌಕರಿ ಹತ್ತಿದರೆ ಖಂಡಿತ ಮದುವೆಯಾಗೋಣ ಎಂದು ಉತ್ತರ ನೀಡುತ್ತಾಳೆ. ಹುಡುಗ ಅಷ್ಟಕ್ಕೆ ಸುಮ್ಮನಾಗದೆ ಪದೇಪದೇ ಅವಳ ಬೆನ್ನು ಹತ್ತಿ ಬರುತ್ತಿದ್ದದನ್ನು ಹುಡುಗಿಯು ಇಷ್ಟ ಪಡದೇ ಮನೆಯಲ್ಲಿ ವಿಷಯ ತಿಳಿಸುತ್ತಾಳೆ. ನಾನು ಓದಬೇಕು ಆತನಿಗೆ ಸರಿಯಾಗಿ ತಿಳಿಸಿ ಹೇಳಿ ಎಂದು. ಎಷ್ಟು ಹೇಳಿದರೂ ಕೇಳದ ಹುಡುಗನ ಹುಚ್ಚು ಪ್ರೀತಿಗೆ ಹುಡುಗಿ ಮಂಕಾಗುತ್ತಾಳೆ ಸರಿಯಪ್ಪ ನೀನು ನಿನ್ನ ಕಾಲಮೇಲೆ ನಿಲ್ಲು ಯಾವುದಾದರೂ ನೌಕರಿ ಹಿಡಿ ಆಮೇಲೆ ಮದುವೆಯಾಗೋಣ ಎನ್ನುತ್ತಾಳೆ .ಹುಡುಗನು ತನ್ನ ತಾಯಿ ಹತ್ತಿರ ಹೋಗಿ ಅವಳು ಮಾವನ ಮಗಳು ನನ್ನನ್ನು ಮದುವೆ ಮಾಡಿಕೊಳ್ಳಲು ಒಪ್ಪಿದ್ದಾಳೆ ನೀನು ಹೋಗಿ ಕೇಳು ಎಂದು ಹೇಳುತ್ತಾನೆ .ಅವಾಗ ಹುಡುಗಿಯ ಅತ್ತೆಯು ಊರಿಗೆ ಬಂದು ಅಣ್ಣಾ ನಿನ್ನ ಮಗಳನ್ನು ನನ್ನ ಮಗನಿಗೆ ಕೇಳಲಿಕ್ಕೆ ಬಂದಿದ್ದೇನೆ ಅದಕ್ಕೆ ಅನ್ನುತ್ತಾಳೆ ಹುಡುಗಿ ಯ ತಂದೆಯು ನಾನೇನು ಹೇಳಲಾರೆ ಅವಳು ಯಾರನ್ನೂ ಮದುವೆ ಆಗುವುದಿಲ್ಗ ಎನ್ನುತ್ತಿದ್ದಾಳೆ. ಮಗಳು ಓದಬೇಕು ಅನ್ನುವಳು ಅವಳನ್ನೇ ಕೇಳು ಅವಳು ಒಪ್ಪಿದರೆ ನೋಡೋಣ ಎಂದು ಹೇಳುತ್ತಾನೆ.ಅವಾಗ ನೀನು ನನ್ನ ಮಗನನ್ನು ಮದುವೆಯಾಗುತ್ತೀಯಾ ?ಎಂದು ಕೇಳುತ್ತಾಳೆ ಹುಡುಗಿಯು ನಿರಾಕರಿಸುತ್ತಾಳೆ.ಹುಡುಗಿಯ ನಿರಾಕರಣೆಯಿಂದ ಹುಡುಗನ ತಾಯಿಗೆ ತುಂಬಾ
ಕೋಪ ಬರುತ್ತದೆ. ಕೋಪದಿಂದ ನೀನು ಹೇಗೆ ಸಾಲಿ ಕಲಿತಿ ನಾನೂ ನೋಡುತ್ತೇನೆ .ನನ್ನ ಮಗನನ್ನು ಬ್ಯಾಡ ಅಣ್ಣಾ ಕತ್ತಿ ಎಂದು ಅತ್ತು-ಕರೆದು ಬೈದು ಸಿಟ್ಟಿನಿಂದ ಕಟ್ಟಿಕೊಂಡು ಬಂದ ಬುತ್ತಿಯನ್ನು ಕೊಟ್ಟು ಇನ್ನೂ ನಿಮ್ಮ ಮನೆ ಹೊಸ್ತಿಲು ತಿಳಿಯುವುದಿಲ್ಲ ಎಂದು ಹೇಳಿ ಹೋಗುತ್ತಾಳೆ .ಈಕಡೆ ಹುಡುಗಿ ತನ್ನ ಬದುಕನ್ನು ಪ್ರೀತಿಯ ಬಂಧನದಲ್ಲಿ ದೂಡದೆ ಚೆನ್ನಾಗಿ ಓದಿ ಕಾಲೇಜಿಗೆ ಪ್ರಥಮವಾಗಿ ಬರುತ್ತಾಳೆ ಕಾಲೇಜಿನ ಉಪನ್ಯಾಸಕರು ಹುಡುಗಿಯನ್ನು ಕೊಂಡಾಡುತ್ತಾರೆ ಹಾಗೆ ತನ್ನ ಶಿಕ್ಷಣವನ್ನು ಮುಂದುವರಿಸುತ್ತಾಳೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ನೌಕರಿಯನ್ನು ಹಿಡಿದು ತನ್ನ ಕಾಲಮೇಲೆ ತಾನು ನಿಂತುಕೊಂಡು ನಂತರ ತಂದೆ ತಾಯಿಗಳ ಇಚ್ಛೆಯಂತೆ ಬಂದ ವರ ನಿಗೆ ತಲೆಬಾಗಿ ತಾಳಿ ಕಟ್ಟಿಸಿಕೊಂಡು ಮೂರು ಮಕ್ಕಳ ತಾಯಿಯಾಗಿ, ಗಂಡನಿಗೆ ಉತ್ತಮ ಹೆಂಡತಿಯಾಗಿ ಕುಟುಂಬಕ್ಕೆ ಆದರ್ಶ ಮಗಳಾಗಿ, ಸೊಸೆಯಾಗಿ ಸಮಾಜದಲ್ಲಿ ಉತ್ತಮ ಗೃಹಿಣಿಯಾಗಿ ಅನೇಕ ಮಹಿಳಾ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅನೇಕ ಮಹಿಳಾ ಗೋಷ್ಠಿಯನ್ನು ಏರ್ಪಡಿಸಿ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತ ಬರುತ್ತಾ ಅಷ್ಟೇ ಅಲ್ಲದೇ ಕಾಲೇಜಿನ ಪ್ರಾಚಾರ್ಯೆಯಾಗಿ ಉತ್ತಮ ಆಡಳಿತದ ಕಾರ್ಯನಿರ್ವಹಿಸುತ್ತಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಬಿತ್ತುತ್ತಾ .ವಿದ್ಯಾರ್ಥಿಗಳಿಂದ ಅವ್ವಾ ಎಂತಲೇ ಕರೆಸಿಕೊಳ್ಳುವ ಆ ಹುಡುಗಿ ಬೇರೆ ಯಾರೂ ಅಲ್ಲ ನಾನೇ.
ಪ್ರೀತಿಸಿದ ಹುಡುಗನನ್ನು ದಿಟ್ಟವಾಗಿ ವಿರೋಧಿಸಿ ಸುಂದರ ಬದುಕನ್ನು ಕಟ್ಟಿಕೊಂಡು ಪ್ರೀತಿಸಿದ ಹುಡುಗನ ಮನಸ್ಸನ್ನು ಬದಲಾಯಿಸುವ ಮನಸ್ಸುಗಳು ಇಂದಿನ ಸಮಾಜಕ್ಕೆ ಬೇಕಾಗಿದೆ.ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ಹುಡುಗನಿಗೂ ಮಾರ್ಗದರ್ಶಕಳಾಗಿ ಹುಡುಗ ನನ್ಮುಂದೆ ಬಂದು ನಿಂತಾಗ ಹೇಳುತ್ತಾನೆ ನೀನು ನನ್ನ ಬದುಕನ್ನು ಬದಲಾಯಿಸಿದವಳು.ನೀನೇ ನನಗೆ ಆದರ್ಶ .ಅವತ್ತು ನೀನು ನನ್ನ ಮಾತು ಕೇಳಿ ಮದುವೆ ಆಗಿದ್ದರೆ ನಾವಿಬ್ಬರೂ ಇಷ್ಟು ಮುಂದೆ ಬರಲಿಕ್ಕೆ ಆಗುತ್ತಿರಲಿಲ್ಲ ಎಂದು ಹೇಳುವಾಗ ಹಿಂದಿನ ಘಟನೆಗಳನ್ನು ಮರೆತು ನನ್ನ ಜೊತೆಗೆ ಪ್ರೀತಿಯ ನಾಲ್ಕು ಮಾತುಗಳನ್ನು ಮಾತನಾಡಿದಾಗ ನನಗೆ ಸತ್ಯ ಎನಿಸುತ್ತದೆ. ಹೌದು ಅವತ್ತು ನಿನ್ನ ಮಾತು ಕೇಳಿ ನಿನ್ನನ್ನು ನಾನು ಮದುವೆ ಆಗಿದ್ದರೆ ನಾನೂ ಕೂಡಾ ಇಷ್ಟು ಉನ್ನತವಾದ ಹುದ್ದೆಯನ್ನು ಏರಲು ಆಗುತ್ತಿರಲಿಲ್ಲ ಎನಿಸುತ್ತದೆ. ಅದಕ್ಕೆ ಹೇಳುವುದು ಕುರುಡು ಪ್ರೀತಿಯಲ್ಲಿ ಮೈಮರೆತು ನಮ್ಮ ಬದುಕನ್ನು ಹಾಳು ಮಾಡಿಕೊಳ್ಳದೇ ಸುಂದರವಾದ ಬದುಕಿಗೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಿ ಪ್ರೀತಿಯು ನಮ್ಮ ನಮ್ಮ ಬದುಕನ್ನು ಬದಲಾಯಿಸುವಂತೆ ಇರಬೇಕು .ಅಯಾ ಸಂದರ್ಭ ದಲ್ಲಿ ಏನು ಆಗಬೇಕು ಅದು ಆಗೇ ಆಗುತ್ತದೆ ಪ್ರೀತಿ ಹಿಂದೆ ನಾವು ಓಡದೇ .ಕಲಿಯುವ ವಯಸ್ಸಿನಲ್ಲಿ ಗುರಿಯನ್ನು ಇಟ್ಟುಕೊಂಡು ಚೆನ್ನಾಗಿ ಓದಿದರೆ ಅದ್ಭುತ ವಾದ ಸಾಧನೆಯನ್ನು ಮಾಡಿ ನಿಮ್ಮ ಪ್ರೀತಿ ಯನ್ನೂ ಉಳಿಸಿಕೊಳ್ಳಿ ಎಂದು ಹೇಳತ್ತಾ. ಎಲ್ಲಾ ಪ್ರೇಮ ಹೃದಯಕ್ಕೆ ಪ್ರೇಮಿಗಳ ದಿನ ದ ಶುಭಾಶಯಗಳು..

ಪ್ರೊ – ಸಾವಿತ್ರಿ ಮಹದೇವಪ್ಪ ಕಮಲಾಪೂರ
ಮೂಡಲಗಿ

One thought on “ಬದುಕು ಬದಲಾಯಿಸಿದ ಪ್ರೀತಿ -ಪ್ರೇಮ

Comments are closed.

Don`t copy text!