ಗಜಲ್
ಹೃದಯಗಳ ಮಿಡಿತವು ಹುಟ್ಟಿಸಲಿ ಪ್ರೇಮರಾಗ
ಕಂಗಳ ಹಣತೆಗಳು ಬೆಳಗಿಸಲಿ ಪ್ರೇಮರಾಗ
ನೊಂದ ಜೀವ ಶರಣಾಗಿದೆ ಮಧುಶಾಲೆಗೆ ನಿತ್ಯ
ಸಾಕಿ ಮಧು ಬಟ್ಟಲು ದೊರಕಿಸಲಿ ಪ್ರೇಮರಾಗ
ತೋಟದಲ್ಲಿ ಮೊಗ್ಗು ಬಿರಿದು ಬಳಕುತಿದೆ ನಗುತಾ
ಒಲಿದ ಸುಮ ಕಂಪಲಿ ತೇಲಿಸಲಿ ಪ್ರೇಮರಾಗ
ನದಿಯ ತಟದಲಿ ರಾಧೆಯು ಕಾಯುತಿಹಳು ಮೋಹನ
ಬಿದಿರ ಕೊಳಲಲಿ ಉಸಿರು ನುಡಿಸಲಿ ಪ್ರೇಮರಾಗ
ವಿರಹದ ಕಂಬನಿಯು ಹರಿಯುತಿದೆ ಸಾಗರವಾಗಿ
ನೆನಪಿನ ಮಧುರ ಕ್ಷಣ ಚಿಮ್ಮಿಸಲಿ ಪ್ರೇಮರಾಗ
ಬಯಸಿದೆ ಮನವು ಅನುರಾಗದ ಕಾಣಿಕೆ ಇರುಳಲಿ
ಕೆನ್ನೆಗೆ ತುಟಿ ಉಂಗುರ ಮೂಡಿಸಲಿ ಪ್ರೇಮರಾಗ
ಜೀವನದಲಿ ಕರಾಳ ದಿನಗಳು ತುಂಬಿವೆ ಸದಾ
“ಪ್ರಭೆ”ಯ ಎದೆ ಗೂಡಲಿ ಉದಯಿಸಲಿ ಪ್ರೇಮರಾಗ
–ಪ್ರಭಾವತಿ ಎಸ್ ದೇಸಾಯಿ
ವಿವೇಕ ನಗರ(ಪಶ್ಚಿಮ)
ಬಸವನ ಬಾಗೇವಾಡಿ ರೋಡ
ವಿಜಯಪುರ
ಮೊ.೮೪೦೮೮ ೫೪೧೦೮