ಸುವಿಚಾರ
“ಪ್ರೀತಿ ಪ್ರೇಮ ಒಂದು ವಾರದ ಮಿತಿ ಅಲ್ಲ “
ಪ್ರೇಮಿಗಳ ದಿನ ಫೆಬ್ರವರಿ 14 ಎಂದು ಪಾಶ್ಚಾತ್ಯರು ಆಚರಿಸುತ್ತಾರೆ. ನೋಡಿದ ಕೂಡಲೇ ಆಕರ್ಷಣೆಗೆ ಒಳಗಾಗುವ, ಆಸೆಗೆ ಪ್ರೀತಿಯ ಹೆಸರು ಕಟ್ಟಿ ಪ್ರೇಮಿಗಳ ದಿನ ಆಚರಿಸುವುದು ವಿದೇಶಿ ಸಂಸ್ಕೃತಿ. ನಮ್ಮಲ್ಲಿ ಮದುವೆಯನ್ನೇ ಒಂದು ವಾರದ ಸಂಭ್ರಮ ಆಚರಣೆ ಮಾಡುತ್ತೇವೆ.
ಪ್ರೀತಿ ಹುಟ್ಟಲು ಸಮಯ ಬೇಕಿರದಿರ ಬಹುದು ಬೆಳೆಯಲು ಸಾಕಷ್ಟು ಸಮಯ ಬೇಕು. ತಾಯಿಯ ಹೊಟ್ಟೆಯಿಂದ ಹೊರ ಬರಲು 9 ತಿಂಗಳು ಬೇಕಾಗುತ್ತದೇ, ಅವಳ ಪ್ರೀತಿ ತಿಳಿಯಲು ಜನ್ಮವೇ ಬೇಕಾಗುತ್ತದೆ. ಇನ್ನು 7 ದಿನದಲ್ಲಿ ಹುಡುಗಿ / ಹುಡುಗನನ್ನು ನೋಡಿ ಅರ್ಥ ಮಾಡಿಕೊಂಡು ಪ್ರೀತಿ ಮಾಡಲಾಗುವುದಿಲ್ಲ.
ಪ್ರೀತಿ ಮಾಡಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಿ ಹಿರಿಯರ ಅನುಮತಿ ಪಡೆದು ಮದುವೆ ಆಗಿ ಚೆನ್ನಾಗಿ ಬಾಳಿ.
ಇನ್ನೊಂದು ಮಾತು ಪ್ರೀತಿ ಗಂಡು ಹೆಣ್ಣು ಮದುವೆಗೆ ಮಾತ್ರ ಸೀಮಿತ ಅಲ್ಲ. ಪ್ರೀತಿಯ ವ್ಯಾಪ್ತಿ ಬಹಳ ದೊಡ್ಡದು. ಎಲ್ಲರನ್ನೂ ಪ್ರೀತಿಸುವ ದೊಡ್ಡ ಮನಸ್ಸಿರಬೇಕು. ಸಂಬಂಧ ಯಾವುದೇ ಇರಲಿ ಪ್ರೀತಿಯಿಂದ ಇರಲಿ. ನಮ್ಮ ಸಂಬಂಧಿಕರು, ಪೋಷಕರು, ಸಹೋದರ -ಸಹೋದರಿಯರ ಮೇಲೆ ಇಲ್ಲದ ಪ್ರೀತಿ ಬೇರೆಡೆ ಸಿಗಲಾರದು. ಜೀವನ ಸಂಗಾತಿ ಬಹು ಮುಖ್ಯ ಆದರೆ ಪ್ರೀತಿಯ ಮೊದಲ ಗುರುತು ತಾಯಿ.
ತಾಯಿಯನ್ನು ಪ್ರೀತಿಸಿ ತಾಯಿನೆಲವನ್ನು ಪ್ರೀತಿಸಿ
–ಮಾಧುರಿ
ಪ್ರೀತಿಯ ಬಗ್ಗೆ ಒಳ್ಳೆಯ ಸಂದೇಶ ಮೇಡಂ. 🙏🙏🙏