ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ತಾಲೂಕು ಆರೋಗ್ಯಾಧಿಕಾರಿಗೆ ಮನವಿ

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ತಾಲೂಕು ಆರೋಗ್ಯಾಧಿಕಾರಿಗೆ ಮನವಿ.

 e-ಸುದ್ದಿ ಲಿಂಗಸುಗೂರು

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯ ಪತಿಯು ವ್ಯಾಕ್ಸಿನ್ ಕ್ಯಾರಿಯರ್ ತರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದ್ದು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಈ ದುರ್ಘಟನೆಗೆ ಕಾರಣರಾದವರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಈ ಪ್ರಕರಣದಲ್ಲಿ ನೊಂದ ಆಶಾ ಕಾರ್ಯಕರ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಇಂತಹ ದುರ್ಘಟನೆಗಳು ಇನ್ನು ಮುಂದೆ ಎಲ್ಲಿಯೂ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಸಹ ಸೂಕ್ತ ನಿಗಾ ವಹಿಸಬೇಕೆಂದು ಹಾಗೂ ಆಶಾ ಕಾರ್ಯಕರ್ತೆಯರಿಗೆ ತಮ್ಮದಲ್ಲದ ಮತ್ತು ಯಾವುದೇ ಇಲಾಖೆಯೇತರ ಕೇಲಸಗಳನ್ನು ಒತ್ತಾಯಪೂರ್ವಕವಾಗಿ ವಹಿಸಬಾರದೆಂದು ಹಿಂದೆ ಅನೇಕ ಬಾರಿ ಸಂಘವು ಕೇಳುತ್ತಾ ಬಂದಿರುವುದನ್ನು ಸಂಘವು ಪುನಃ ಮತ್ತೆ ಮತ್ತೆ ಆಗ್ರಹಿಸ ಬಯಸುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಹೆರಿಗೆಗೆ ಮೊದಲು ಮತ್ತು ನಂತರದಿಂದ ಹಿಡಿದು ತಾಯಿ-ಮಗುವಿನ ಆರೈಕೆಗಾಗಿ ಹಗಲು-ರಾತ್ರಿ ದುಡಿಯುವ ಒಬ್ಬ ಆಶಾಳ ಪ್ರೋತ್ಸಾಹಧನವನ್ನೂ ನ್ಯಾಯಯುತವಾಗಿ ಕೊಡದ ಆರೋಗ್ಯ ಇಲಾಖೆಯು ಅನ್ಯಾಯ‌ಮಾಡುತ್ತಿದೆ.

ಆಶಾ ತನ್ನ ಗಂಡ, ಅಣ್ಣ-ತಮ್ಮ ಇತ್ಯಾದಿ ಕುಟುಂಬದ ಸದಸ್ಯರನ್ನೆಲ್ಲ ದುಡಿಸಿಕೊಂಡು, ಉಳುವಯ್ಯನನ್ನು ಆಶಾ ಕಾರ್ಯಕರ್ತ ಚೈತ್ರಾಳಿಂದ ಕಿತ್ತುಕೊಂಡಿದೆ. ಇದು ನಿಜಕ್ಕೂ ಅನ್ಯಾಯದ ಸಾವು,ಇಡಿ ಕುಟುಂಬದ ಭವಿಷ್ಯವನ್ನೇ ಕತ್ತಲು ಮಾಡಿದ ಇಬ್ಬರು ಮಕ್ಕಳಿಗೆ ಆಶಾ ಚೈತ್ರಾಳಿಗೆ ಇಲಾಖೆಯು ಬೆಳಕಿನ ಭರವಸೆ ನೀಡಬೇಕಾಗಿದೆ.

ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಆಶಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸರ್ಕಾರವನ್ನು ಆಗ್ರಹಿಸಿದರು.
ವ್ಯಾಕ್ಸೀನ್ ಕ್ಯಾರಿಯರ್ ತಲುಪಿಸುವ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ.
ನಿಷ್ಪಕ್ಷಪಾತ ತನಿಖೆ ನಡೆಸಿ, ವ್ಯಾಕ್ಸೀನ್ ಕ್ಯಾರಿಯರ್ ತರಲು ಒತ್ತಡ ಹೇರಿ ಈ ಘಟನೆಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ.
ತಮ್ಮದಲ್ಲದ ಕೆಲಸಗಳನ್ನು ಮಾಡಲು ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುವುದರ ಬಗ್ಗೆ, ಅವರ ಸುರಕ್ಷತೆಯ ಬಗ್ಗೆ ಇರುವ ಆದೇಶಗಳನ್ನು ತುರ್ತಾಗಿ-ಕಟ್ಟುನಿಟ್ಟಾಗಿ ಜಾರಿಗೆ ತನ್ನಿ.
ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕೃತ ಜ್ಞಾಪನಾ ಪತ್ರ/ ನಡಾವಳಿಗಳನ್ನು ಜಿಲ್ಲೆಯ ಪ್ರತಿ ಪಿ.ಎಚ್‌.ಸಿ ಗಳಲ್ಲಿ ಜಾರಿಗೆ ಬರುವಂತೆ ತಕ್ಷಣ ಕ್ರಮವಹಿಸಿ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗೌರವ ಅಧ್ಯಕ್ಷ ಶರಣಪ್ಪ ಉದ್ಬಾಳ, ತಾಲೂಕು ಅಧ್ಯಕ್ಷರಾದ ಶ್ರೀಮತಿ ನಗೂಮಿ, ಕಾರ್ಯದರ್ಶಿ ಶ್ರೀಮತಿ ಲವೀನಾ ,ದೇವಮ್ಮ ಮಸ್ಕಿ, ಮಹಾಂತಮ್ಮ ಮಸ್ಕಿ. ಶೋಭ ಸಂತೆಕೆಲ್ಲೂರು, ಶೈಲಜಾ ಮುದ್ಗಲ್, ಗಂಗಮ್ಮ, ಉದಾಸಮ್ಮ ಮಾಕಪುರ, ನಾಗರತ್ನ ಮಾಕಪುರ, ನಾಗಮ್ಮ ಸಜ್ಜಲಗುಡ್ಡು ಶೋಭ ಈಚನಾಳ, ಜಯಮ್ಮ ಈಚನಾಳ, ನಾಗಮ್ಮ ಈಚನಾಳ, ಶಾಂತ ಹಟ್ಟಿ, ಬಸಮ್ಮ ಹಟ್ಟಿ, ಮೇರಿ ಹಟ್ಟಿ, ಅಂಬಮ್ಮ ಗುರುಗುಂಟ, ನಿಂಗಮ್ಮ ಗುರುಗುಂಟ, ಯಮನಮ್ಮ ರೋಡಲಾಬಂಡಾ, ಶೈಲಜಾ ಗೆಜ್ಜಲಗಟ್ಟಿ, ಶಿವಮ್ಮ ಗೆಜ್ಜಾಲಗಟ್ಟಿ, ತಿರುಪತಿ ಗೋನವಾರ, ಚಂದ್ರಶೇಖರ ಸಾಹುಕರ ಮುಂತಾದವರು ಭಾಗವಹಿಸಿದ್ದರು.

Don`t copy text!