ಅನುರಾಗ ಭಾವಗೀತೆ ರಚನೆ ಹಾಗೂ ವಾಚನ ಸ್ಪರ್ಧೆ
e-ಸುದ್ದಿ ಇಲಕಲ್ಲ
ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಾ ಘಟಕದ ವತಿಯಿಂದ ದಿನಾಂಕ ೧೩/0೨/೨0೨೨ ರವಿವಾರ ಸಾಯಂಕಾಲ ೪.೦೦ಗಂಟೆಯಿಂದ “ಅನುರಾಗ” ವಿಷಯದಡಿ ಭಾವಗೀತೆ ರಚನೆ ಮತ್ತು ವಾಚನ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ೪0ಕ್ಕೂ ಹೆಚ್ಚು ಸಹೃದಯಿ ಕವಿಮನಸುಗಳು ಭಾಗವಹಿಸಿದ್ದರಿಂದ ಸುದೀರ್ಘ ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಾವ ಗೀತೆಗಳ ಕಲರವ ಕೇಳಿಬಂತು.
ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಶ್ರೀ ಶ್ರೇಯಾoಶ ಜೆ ಕೋಲ್ಹಾರ ಶಿಕ್ಷಕರು ಭಾವ ಗೀತೆಯ ಬಗ್ಗೆ ಭಾವನಾತ್ಮಕವಾಗಿ ವಿವರಿಸುತ್ತ ಭಾವಗೀತೆ ಭಾವ ಸಾಲುಗಳನ್ನು ಅರಳಿಸುತ್ತದೆ ಈ ಕವಿತೆ ಅವಳ ಪ್ರೇಮ, ಅವನ ವಿರಹ, ಇವರ ತುಡಿತ, ಅವರ ಮಿಡಿತವನ್ನು ಹೇಳುತ್ತದೆ ಹೃದಯ ಹೃದಯದೊಂದಿಗೆ ಹೃದಯಗಳನ್ನು ಮಾತನಾಡಿಸುತ್ತದೆ ಭಾವಗಳನ್ನು ಬೆಸೆಯುತ್ತದೆ ಅನುರಾಗ ಎಂದರೇನೆಂದು ತಿಳಿಸುತ್ತದೆ ಎಂದು ಸುಂದರವಾಗಿ ವರ್ಣಿಸಿದರು. ನಂತರ ಅತಿಥಿ ಗಾಯಕರಾಗಿ ಆಗಮಿಸಿದ ಶಿವರಂಜನಿ ಸಂಗೀತ ಕಲಾ ಬಳಗದ ಅಧ್ಯಕ್ಷರಾದ ಶ್ರೀ ಪ್ರಭುಲಿಂಗಯ್ಯ ಬನ್ನಿಗೋಳಮಠ ಅವರು ಸುಶ್ರಾವ್ಯವಾಗಿ ವ್ಹಿ ಸಿ ಐರ್ಸoಗ ಅವರ ಭಾವಗೀತೆಯನ್ನು ಹಾಡಿದರು.
ಇಲಕಲ್ಲ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಪ್ರಭು ಬನ್ನಿಗೋಳಮಠ ಅವರು ಪ್ರಾಸ್ತಾವಿಕವಾಗಿ ಮಾನಾಡುತ್ತಾ ಇಲಕಲ್ಲ ವೇದಿಕೆ ಆರಂಭವಾಗಿ ಆರು ತಿಂಗಳಾಯಿತು. ಕರೋನಾ ಮಾರಿಯಿಂದಾಗಿ ಅನಿವಾರ್ಯವಾಗಿ ಅಂತರ್ಜಾಲದಲ್ಲಿ ಕಾರ್ಯಕ್ರಮ ಮಾಡಬೇಕಾದ ಅನಿವಾರ್ಯತೆಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಎಲ್ಲವು ಯಶಸ್ವಿ ಕಾರ್ಯಕ್ರಮಗಳು ಇದಕ್ಕೆಲ್ಲ ಕಾರಣ ರಾಜ್ಯಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರ ಪ್ರೋತ್ಸಾಹ, ಜಿಲ್ಲಾಧ್ಯಕ್ಷರ ಸಹಕಾರ ಹಾಗೂ ಎಲ್ಲಾ ಪದಾಧಿಕಾರಿಗಳ ಸಹಕಾರ ಕಾರಣ ಎಂದು ಹೇಳಿದರು. ಭಾವಗೀತೆ ವ್ಯಕ್ತಿನಿಷ್ಟ ಹಾಗೂ ಭಾವಭಿವ್ಯಕ್ತಿಗೆ ಅನುಕೂಲವಾದ ಪ್ರಕಾರ ಎಂದು ಹೇಳಿದರು.ತಮ್ಮದೇ ಸ್ವರಚಿತ ಭಾವಗೀತೆಯನ್ನು ಹಾಡಿದರು.
ಮತ್ತೊರ್ವ ಅತಿಥಿ ಗಾಯಕರಾದ ಪ್ರಸನ್ ಕುಮಾರ್ ಭಾಗಲಕೋಟೆ ಭಾವಗೀತೆ ಹಾಡಿದರು.
ಮುಂದುವರಿದು ಮುಖ್ಯ ಅತಿಥಿಗಳಾಗಿ ಆಗಮಿಸಿದ, ಶ್ರೀಮತಿ ಆಶಾ ಎಸ್ ಯಮಕನ ಮರಡಿ ಹಾಗೂ ಶ್ರೀಮತಿ ಡಾ. ದಾಕ್ಷಯಿಣಿ ಶಂಕರ್ ಅವರು ವೇದಿಕೆಯ ಕಾರ್ಯಕ್ರಮಗಳ ಕುರಿತು ಅರ್ಥಪೂರ್ಣ ಮಾತುಗಳನ್ನು ಹೇಳಿದರು.
ಗೌರವ ಉಪಸ್ಥಿತರಿದ್ದ ಶ್ರೀ ಸಂಗಣ್ಣ ಬ ಗದ್ದಿಯವರು ಇಲಕಲ್ಲ ಘಟಕದ ಕಾರ್ಯ ವೈಖರಿಯ ಬಗ್ಗೆ ಒಳ್ಳೆಯ ಪ್ರೋತ್ಸಾಕರ ಮಾತುಗಳನ್ನಾಡಿ ಸಿದ್ಧೇಶ್ವರ ಸಾಹಿತ್ಯ ವೇದಿಕೆಯಲ್ಲಿ ರಾಜ್ಯದ್ಯoತ ಮಹಿಳೆಯರೇ ಕ್ರಿಯಾಶೀಲರಾಗಿರುವು ದು ಸಂತಸ ಎಂದು ಹೇಳಿದರು. ಇನ್ನೊಬ್ಬ ಗೌರವ ಉಪಸ್ಥಿತರು ಶ್ರೀಮತಿ ಗಿರಿಜಾ ಮಾಲಿಪಾಟೀಲ ಅವರು ವೇದಿಕೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಭಾಧ್ಯಕ್ಷರು, ನಿರ್ಣಾಯಕರು ಆದ ಶ್ರೀಮತಿ ಜಯಶ್ರೀ ಭಂಡಾರಿ ಅವರು ಸಮಾರೋಪದ ಮಾತುಗಳಲ್ಲಿ ಭಾವಗೀತೆಯ ಕುರಿತು ಮೈಸೂರು ಮಲ್ಲಿಗೆಯನ್ನು ಕವಿ ಗಳು ಕೆ ಎಸ್ ನರಸಿಂಹಸ್ವಾಮಿಯವರಕವನಗಳನ್ನು ಉದಾಹರಿಸಿ ಮಾನಾಡಿದರು. ನಂತರ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವನಗಳೆಲ್ಲ ಚೆನ್ನಾಗಿ ಮೂಡಿಬಂದಿವೆ. ಭಾವಗೀತೆ, ಅನುರಾಗ ವಿಷಯವೇ ಹಾಗೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ.ಸುರೇಶ್ ನೆಗಳಗುಳಿ ಅವರು ಬಾವಗೀತೆ ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ ನಲವತ್ತು ಕವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಶ್ರೀಮತಿ ಶ್ವೇತಾ ಶಾಸ್ತ್ರಿಮಠ ಸುಶ್ರಾವ್ಯವಾಗಿ ಪ್ರಾರ್ಥಿಸಿದರು.
ಶ್ರೀಮತಿ ಸವಿತಾ ಮಾಟೂರ್ ಅವರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಶ್ರೀ ಪ್ರಭುಲಿಂಗಯ್ಯ ಬನ್ನಿಗೋಳಮಠ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಶ್ರೀಮತಿ ಅನುಪಮಾ ಶಂಕರ್ ದೋತ್ರೆ ಅತ್ಯುತ್ತಮವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಶ್ರೀ ಶಂಕರಯ್ಯ ಬನ್ನಿಗೋಳಮಠ ಅವರು ವಂದನಾರ್ಪಣೆ ಮಾಡಿದರು