ಎತ್ತಹೋದರು ನಮ್ಮ ಶರಣರು

ಎತ್ತಹೋದರು ನಮ್ಮ ಶರಣರು

 

ಹನ್ನೆರಡನೆಯ ಶತಮಾನದಲ್ಲಿ ಒಂದು ಅಪೂರ್ವ ಕ್ರಾಂತಿ ನಡೆದು ಹೋಯಿತು . ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಹೋರಾಟದ ಜೊತೆಗೆ ಧರ್ಮವೆನ್ನುವುದು ಸತ್ಯ ಶುದ್ಧವಾದ ಆಚರಣೆ ಅಲ್ಲಿ ಇಲ್ಲಿ ಎಂಬ ಉಭಯ ಭಾವವನ್ನು ಅಳೆಯುವ ಮಹಾ ಸಾಧನ ; ಲಿಂಗ ವಸ್ತು ಅಲ್ಲ ಗುರು ವ್ಯಕ್ತಿ ಅಲ್ಲ ಜಂಗಮ ಜಾತಿಯಲ್ಲ . ಯಾವ ಮೌಲ್ಯಗಳನ್ನು ಬಸವಣ್ಣ ಮತ್ತು ಸಮಕಾಲೀನ ಶರಣರು ಎತ್ತಿ ಹಿಡಿದ್ದಾರೋ ಇಂದು ಅವುಗಳನ್ನು ಮೂಲೆಗುಂಪು ಮಾಡಿ ಮನುಷ್ಯ ತನಗೆ ಬೇಕಾದ ಆಚರಣೆ ಭ್ರಮೆ ಭ್ರಾಂತಿ ಉನ್ಮಾದ ಉತ್ಸಾಹದಲ್ಲಿ ಬದುಕಿರುವುದು ನೋವಿನ ಸಂಗತಿಯಾಗಿದೆ.

ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ಸಾರಿ ಸಾರಿ ಹೇಳಿದ ಬಸವಣ್ಣ ವಿಚಾರಕ್ಕೆ ವಿರುದ್ಧವಾಗಿ ಈಗ ಬಸವಣ್ಣನವರ ಪುತ್ತಳಿ ಊರು ಪಟ್ಟಣಗಳಲ್ಲಿ ಕಾಣುತ್ತೇವೆ. ಕೆಲ ಶ್ರೀಮಂತ ಮಠಗಳು ಬಸವಣ್ಣನವರ ಮೂರ್ತಿಗಾಗಿ ಮತ್ತು ಅನುಭವ ಮಂಟಪಕ್ಕಾಗಿ ಸಾವಿರಾರು ಕೋಟಿ ಕಟ್ಟಡಕ್ಕಾಗಿ ಅನುಧಾನವನ್ನು ಸರಕಾರಕ್ಕೆ ಕೇಳುತ್ತಿರುವುದು ನಾಚಿಕೆಗೇಡಿತನ .
ಒಂದು ಕಡೆಗೆ ಧರ್ಮ ಮಾನ್ಯತೆ ಇನ್ನೊಂದು ಕಡೆಗೆ ಲಿಂಗಾಯತರನ್ನು ಓ ಬಿ ಸಿ ಪಟ್ಟಿಗೆ ಸೇರಿಸಲು ಒತ್ತಾಯ . ಇನ್ನೊಂದು ಕಡೆಗೆ ಲಿಂಗಾಯತ ವೀರಶೈವ ನಿಗಮ ಮಂಡಳಿ . ಯಾವ ಪುರುಷಾರ್ಥಕ್ಕೆ . ಸಾರ್ವಕಾಲಿಕ ಸಮಾನತೆ ಸಮತೆ ಪ್ರೀತಿ ಬಾಂಧವ್ಯವನ್ನು ಜಗತ್ತಿಗೆ ತೋರಿದ ಸಾಂಸ್ಥಿಕರಣವಲ್ಲದ ಒಂದು ಸುಂದರಶರಣರ ಸಿದ್ಧಾಂತವನ್ನು ನಾವು ಮಠ ಆಶ್ರಮ ಪ್ರತಿಸ್ಥಾನ ಪ್ರಾಧಿಕಾರ ನಿಗಮ ಮಂಡಳಿ ಎಂಬ ಜಡ ಸ್ಥಾವರಕ್ಕೆ ಜೋತು ಬಿದ್ದಿರುವೆವು.

ಸಂಘರ್ಷ ಸಮರಸ ಹೋರಾಟ ಆದಿ ವಚನ ಚಳುವಳಿ ಎಂಬ ವಿನೂತನ ಕಾವ್ಯ ಪ್ರಭೆಯನ್ನು ಮನುಕುಲಕ್ಕೆ ಕೊಟ್ಟು ಬಯಲಲ್ಲಿ ಬಯಾಲಾದರು ನನ್ನ ಶರಣರು ಧೀರರು. ಅವರ ಆಶಯ ಇಂದಿಗೆ ಮತ್ತೆ ಅತ್ಯವಶ್ಯ .ಇಡೀ ಜಗತ್ತು ಬಸವಣ್ಣ ಮತ್ತು ಅವನ ಸಮಕಾಲೀನ ಶರಣರ ತತ್ವಗಳನ್ನು ಹಾಡಿ ಹೋಗಲಿ ಒಪ್ಪಿಕೊಂಡಿರುವಾಗ ನಾವು ಇನ್ನೂ ಕಾವಿ ಖಾದಿಗಳ ಕಪಿ ಮುಷ್ಟಿಯಲ್ಲಿ ನಲುಗುತ್ತಿದ್ದೇವೆ.ಅವರಿಗೆ ಅರ್ಥವಾದ ಬಸವಣ್ಣ ಮತ್ತು ಶರಣರು ನಮಗೆ ಅರ್ಥವಾಗದಿರುವುದು ದುರಂತವಲ್ಲವೇ ?

-ಡಾ ಶಶಿಕಾಂತ ಪಟ್ಟಣ
9552002338

Don`t copy text!