ಸುಂದರ ಕನ್ನಡ 

ಸುಂದರ ಕನ್ನಡ 

ಮುತ್ತು ಪೋಣಿಸಿದಂತ
ಕನ್ನಡದ ಅಕ್ಷರಗಳು
ಕಲಿಯಲು ಸುಲಭ
ಕಲಿಸಲೂ ಸುಲಭ

ಮಾತನಾಡಿದರೆ
ಜೇನು ಸವಿದಂತೆ
ಮಧುರ ಅತಿಮಧುರ
ಸುಮಧುರ ಗಾನ..

ಕನ್ನಡದ ಹಿರಿಮೆಯನ್ನು
ಉತ್ತುಂಗಕ್ಕೇರಿಸಿದರು
ನಮ್ಮವಚನಕಾರರು,
ಕವಿ ಪುಂಗವರು..

ದೇಶ ವಿದೇಶಗಳಲ್ಲಿ
ಕನ್ನಡದ ಪತಾಕೆ ಹಾರಿಸಿದ
ನಮ್ಮ ಕರ್ನಾಟಕದ ಜನ
ಸರಳರು, ಸುಂದರರು
ಹೃದಯವಂತರು…

ಗೀತಾ.ಜಿ.ಎಸ್.
ಹರಮಘಟ್ಟ
ಶಿವಮೊಗ್ಗ ತಾಲ್ಲೂಕು

Don`t copy text!