ನಾವು ಹೊರನಾಡ ಕನ್ನಡಿಗರು
ಎಲ್ಲಿದ್ದರೇನು ಕನ್ನಡದವರು ನಾವು
ಜಾತಿ ಮತ ಪಂತಗಳಿಲ್ಲ
ವರ್ಗ ವರ್ಣಗಳ ಗೊಜಿಲ್ಲ
ನಮ್ಮಮಾತು ಮನ ಕನ್ನಡವೆಲ್ಲ
ಭಾಷಾ ಬಾಂಧವ್ಯದ ನಂಟು
ನಾವೇಲ್ಲ ಒಂದೇ ಎಂಬ
ಐಕ್ಯತೆಯ ಭಾವ ಇಲ್ಲಿಂಟು ..
ತಾಯಿ ನುಡಿಯ ಪ್ರೇಮ
ನಮ್ಮೆಲ್ಲರ ಬೆಸದ ಸ್ನೇಹ
ಕಲ್ಲುಸಕ್ಕರೆಯಂತ ಸಿಹಿನುಡಿ
ನುಡಿದವನು ಕವಿ…
ಸವಿದವನು ಅನುಭವಿ
ಕನ್ನಡ ನುಡಿ ಜೇನು ಸವಿ .
ಕರುನಾಡಿನಿಂದ ಬಂದವರು
ಹೊರನಾಡವರು ನಾವೀಲ್ಲಿ
ಸರ್ವ ಭೇದಗಳ ಮರೆತು
ಸ್ವಚ್ಛ ಮನಸ್ಸು ಸರ್ವರಲ್ಲಿ
ಬಿಚ್ಚು ಹೃದಯ ಎಲ್ಲರಲ್ಲಿ
ಮಾತು ಮುತ್ತು ಶುದ್ಧ ಚಿನ್ನವಿಲ್ಲಿ
‘ಕಾಯಕವೇ ಕೈಲಾಸ ‘ಎಂದು
ಈ ಕರ್ಮಭೂಮಿಯಲ್ಲಿ. …
ಕಾಯಕದ ಕೆಚ್ಚೆದೆಯ
ಕರ್ಮಯೋಗಿಗಳು..
ನಾವು ಹೊರನಾಡವರು
ಧೀರ ಕನ್ನಡಿಗರು ನಾವು
ವೀರ ಕನ್ನಡಿಗರು..
–ಶಾರದಾ ಅಂಬೇಸಂಗೆ ಮುಂಬಯಿ
ಸುಂದರ ಕವನ ಮೇಡಂ