ಸಿದ್ಧೇಶ್ವರ ಸಾಹಿತ್ಯ ವೇದಿಕೆಯಿಂದ ಕಣವಿ ನಮನ
e-ಸುದ್ದಿ ಬೆಳಗಾವಿ
ಸಿದ್ದೇಶ್ವರ ಸಾಹಿತ್ಯ ವೇದಿಕೆ ಧಾರವಾಡ ಜಿಲ್ಲಾ ಘಟಕದಿಂದ ಇಂದು ಕವಿಋಷಿ ನಾಡೋಜ ಶ್ರೀ ಚೆನ್ನವೀರ ಕಣವಿಯವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮವನ್ನು ಜಯಶ್ರೀ ಪಾಟೀಲ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು ನಾಡೋಜ, ಹಿರಿಯ ಕವಿ ಚೆನ್ನವೀರ ಕಣವಿಯವರ ಭಾವಚಿತ್ರಕ್ಕೆ ಶ್ರೀ ಮತಿ ಚಿನ್ಮಯಿ ಪಾಟೀಲ ಪುಷ್ಪವನ್ನು ಸಮರ್ಪಿಸಿದರು.ಶ್ರೀಮತಿ ಸುಧಾ ಕಬ್ಬೂರ್ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಎಲ್ಲರನ್ನು ಆತ್ಮೀಯತೆಯಿಂದ ಸ್ವಾಗತಿಸಿದರು. ಶ್ರೀಮತಿ ಮಂಜುಳ ರಾಮಡಗಿ ಯವರು ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳ ಹಾಗೂ ಇತರೆ ಗೌರವಾನ್ವಿತರಿಗೆ ತುಂಬು ಹೃದಯದ ಸ್ವಾಗತವನ್ನು ಕೋರಿದರು. ನಂತರ ಕವಿ ಮನಸ್ಸುಗಳೆಲ್ಲ ತಮ್ಮ ತಮ್ಮ ಸ್ವರಚಿತ ಕವನಗಳನ್ನು ಓದುವ ಮೂಲಕ ಕವಿಋಷಿ ಚೆನ್ನವೀರ ಕಣವಿಯವರಿಗೆ ಕವನ ನಮನಗಳನ್ನು ಸಮರ್ಪಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶಕುಂತಲಾ ಕುಂದೂರ ಅವರು ನಾಡೋಜ ಶ್ರೀ ಚನ್ನವೀರ ಕಣವಿ ಅವರೊಡನೆ ತಮ್ಮ ಒಡನಾಟವನ್ನು ವಿವರಿಸುತ್ತಾ ಅವರಿಗೆ ನಮನಗಳನ್ನು ಸಮರ್ಪಿಸಿದರು. ಕವನ ವಾಚನದ ನಿರ್ಣಾಯಕರಾಗಿ ಆಗಮಿಸಿದ ಶ್ರೀಮತಿ ಆಶಾ ಯಮಕನಮರಡಿ ಯವರು ಕವಿ ಚೆನ್ನವೀರ ಕಣವಿ ಅವರ ಸಾಹಿತ್ಯದ ಕುರಿತು ಮಾತನಾಡುತ್ತಾ, ಅವರ ಕೆಲವು ಸುನೀತ ಗಳನ್ನು ವಿವರಿಸಿದರು. ಹಾಗೂ ವ್ಯಕ್ತಿ ವ್ಯಕ್ತಿತ್ವ ಹಾಗೂ ಸಾಹಿತ್ಯ , ಎಲ್ಲರೊಡನೆ ಬೆರೆತು ಮಾತನಾಡುವ ಬೆಲ್ಲದ ಗುಣಗಳನ್ನು ನೆನಪಿಸಿಕೊಂಡರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಚಿನ್ಮಯಿ ಪಾಟೀಲ್ ಮಾತನಾಡುತ್ತ, ತಮ್ಮ ಒಡನಾಟಗಳನ್ನು ವಿವರಿಸಿದರು ತಾವು ಬರೆದ ಸಾಹಿತ್ಯ ಕೃತಿಗೆ ಮುನ್ನುಡಿ ಬರೆದುಕೊಟ್ಟ ಅಪ್ಪನವರ ಪಾದಾರವಿಂದಗಳಿಗೆ ನಮನಗಳನ್ನು ಸಮರ್ಪಿಸಿದರು. ನೀಲಾಂಬಿಕೆ ಕುರಿತು ಕಣವಿ ಅಪ್ಪನವರು ಬರೆದ” ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ “ಎಂಬ ಕವನವನ್ನು ಮೂಲಕ ವಿವರಿಸಿದರು ಜಯಶ್ರೀ ಪಾಟೀಲ್ ಅವರ ಅಚ್ಚುಕಟ್ಟಾದ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು ,ಶ್ರೀಮತಿ ಮಂಜುಳಾರಾಮಡಗಿ ವಂದನೆಗಳನ್ನು ಸಲ್ಲಿಸಿದರು.
ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕವಿ ಋಷಿ ಶ್ರೀ ಚೆನ್ನ ವೀರ ಕಣವಿ ಯವರಿಗೆ ಕವನ ನಮನ ಸ್ಪರ್ಧೆಯ ಫಲಿತಾಂಶ.
ಪ್ರಥಮ
ರಾಧಾಮಣಿ ಎಮ್ ಕೋಲಾರ
*ದ್ವಿತೀಯ* :
೧) ಡಾ.ಸುರೇಶ ನೆಗಲಗುಳಿ
೨) ಶ್ರೀಮತಿ ಮಂಜುಳಾ ಬನ್ನಿಗೋಳಮಠ
*ತೃತೀಯ* : ೧)ಲತಾ ಹುದ್ದಾರ
೨)ಸುಲಕ್ಷಣಾ ಹೀರೆಮಠ
೩) ಪ್ರೇಮಾ ಆರ್ ಚಿಕ್ಕನ್ನವರ
ಸಮಾಧಾನಕರ
೧)ರತ್ನಾ ಕೆ ಭಟ್ಟ
೨)ಶೋಭಾ ಸತೀಶ್
೩)ದೇವರಾಜ್ ಬಸವನಹಳ್ಳಿ
ವಿಶೇಷ ಬಹುಮಾನ
ಕು.ಸ್ವರೂಪ್ ( ವಿದ್ಯಾರ್ಥಿ)