ನೆನೆಯಲೇಕೆ
ದಿನ ಗಣನೆ ಏಕೆ
ಘನಮಹಿಮರ ನೆನೆಯಲು
ಮನಶುಧ್ಧ ದಿಂದ ತನುಬಾಗಿ
ಸ್ಮರಿಸೋಣ ದಿನದಿನವು
ಶಿವನನ್ನು ನೆನೆಯಲು
ಶಿವರಾತ್ರಿಗೆ ಕಾಯುವುದೆ
ಶಿವನಮ್ಮ ಆತ್ಮದಲ್ಲಿರುವನು
ಮರೆಯದಿರು ಎಂದೆಂದು ನಿನಿದನು
ಮೈಭಾರ ಇಳಿಸಲು
ಉಪವಾಸ ವೃತ ಮಾಡಿ
ಅದಕೆ ದೇವನಾ ಹೆಸರಿಡಲು
ಹುಸಿಯ ನಂಬಿಕೆಯದು ಸ್ಥಿರವಲ್ಲ
ಕಾಷಾಯ ಧರಿಸಿದರೇನು
ಲಾಂಛನಗಳ ಮುದ್ರಿಸಿದರೇನು
ಮನದ ವಾಂಛನೆಗಳ ತೊರೆಯದೆ
ಸಜ್ಜನ ನಾಗುವ ಬಗೆ ಹೇಗೆ ಹೇಳು
ನಿಜ ಮುಕ್ತಿ ಮಾರ್ಗವನು ಅರಿಯದೆ
ಬರಿ ಢಂಭದಲಿ ಬದುಕಿದರೆ ನೀನು
ಶರಣನಾಗಲಾರೆ ಎಂದೆಂದಿಗೂ
ನಡೆ ನುಡಿ ಒಂದಿರದವರ ಮೆಚ್ಚನಮ್ಮ
ಶಿವಗುರುಬಸವಾ
–ಆಶಾ ಎಸ್ ಯಮಕನಮರಡಿ