ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ

 

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ

ಬೇರೆ ಬೇರೆ

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬ ರೂ ಬೇರೆ ಬೇರೆ .ಇತ್ತೀಚೆಗೆ ಕರ್ನಾಟಕ ಸರಕಾರವು ಆದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿಗೆ ಲಕ್ಷಾಂತರ ಹಣ ಕೊಟ್ಟು ರಾಜ್ಯದಲ್ಲಿ ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸುವದು ಹಾಸ್ಯಾಸ್ಪದ .
ದೇವರ ದಾಸಿಮಯ್ಯ 11 ನೆಯ ಶತಮಾನದ ಶಿವ ಭಕ್ತ ,ಇಮ್ಮಡಿ ಜಯಸಿ೦ಹ ಮಡದಿ ಸುಗ್ಗಲೆ ಇವಳಿಗೆ ಶಿವಬೋಧ ದೀಕ್ಷೆ ನೀಡಿ ಅವಳನ್ನು ಶೈವ ಧರ್ಮದ ಅನುಯಾಯಿಯನ್ನಾಗಿ ಮಾಡಿದರು.ದೇವರ ದಾಸಿಮಯ್ಯ ಅಪ್ಪಟ ಸನ್ಯಾಸಿಗಳು ಮತ್ತು ಯಾವುದೇ ವಚನ ರಚನೆ ಮಾಡಿಲ್ಲಾ .
ಆತನು ವೃತ್ತಿಯಿಂದ ಕೃಷಿಕನೆಂದು ತಿಳಿದು ಬರುತ್ತದೆ.ಆತನು ವಚನಕಾರನಲ್ಲ .

ಜೇಡರ ದಾಸಿಮಯ್ಯ ಮತ್ತು ದುಗ್ಗಳೆ 12 ಶತಮಾನದ ಬಸವಾದಿ ಪ್ರಮಥರ ಸಮಕಾಲೀನರು .ಇಬ್ಬರೂ ವಚನಕಾರರು ,ಇವರಿಬ್ಬರ ಬಗ್ಗೆ ಬಸವಣ್ಣ ಆದಿಯಾಗಿ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯ ಮತ್ತು ಮಡದಿ ದುಗ್ಗಳೆ ಇವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಅದೇ ರೀತಿ ಜೇಡರ ದಾಸಿಮಯ್ಯ ಮತ್ತು ದುಗ್ಗಳೆ ,12 ನೇಯ ಶತಮಾನದ ಬಸವಾದಿ ಪ್ರಮಥರ ಬಗ್ಗೆ ತಮ್ಮ ಅನೇಕ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ. ವ್ರತ್ತಿಯಲ್ಲಿ ನೇಯ್ಗೆ ಕೆಲಸ ಮಾಡುವ ನೇಕಾರರು. ಇದರ ಬಗ್ಗೆ ಡಾ ಎಂ ಎಂ ಕಲ್ಬುರ್ಗಿ ಅವರು ೪೦ ವರ್ಷಗಳ ಹಿಂದೆಯೇ ಈ ವಿಷಯವನ್ನು ಸಂಶೋದನೆಯ ಮೂಲಕ ಬಹಿರಂಗಗೊಳಿಸಿದ್ದಾರೆ.
ಡಾ ಎಚ ದೇವಿರಪ್ಪ, ಡಾ ಎಚ ಚಂದ್ರಶೇಖರ , ಡಾ ಎಂ ಚಿದಾನಂದ ಮೂರ್ತಿ ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋದಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಜೇಡರ ದಾಸಿಮಯ್ಯನ ವಚನ ಅಂಕಿತ -ರಾಮನಾಥ ಮತ್ತು ದುಗ್ಗಳೆ ಇವರ ವಚನಾಂಕಿತ ದಾಸಯ್ಯ ಪ್ರಿಯ ರಾಮನಾಥ.
ವಸ್ತು ಸ್ಥಿತಿ ಹೀಗಿದ್ದರೂ ವಚನಕಾರನಲ್ಲದ ದೇವರ ದಾಸಿಮಯ್ಯನವರಿಗೆ ಆದ್ಯ ವಚನಕಾರ ಪಟ್ಟ ಕಟ್ಟಿ ಅವರು ರಚಿಸದ ವಚನಗಳಿಗೆ ಮಾಲಕರನ್ನಾಗಿ,
ಕರ್ನಾಟಕ ಸರಕಾರ ಮಾಡಿದ್ದು ಘೋರ ಅಪರಾಧ .ಅಷ್ಟೆ ಅಲ್ಲ ಜೇಡರ ದಾಸಿಮಯ್ಯನವರ ಮಡದಿ ದುಗ್ಗಳೆಯನ್ನು ದೇವರ ದಾಸಿಮಯ್ಯನವರ ಮಡದಿ ಅಂತಾ ಹೇಳಿ ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯ ಚರಿತ್ರೆಗೆ ಮಸಿ ಬಳೆಯುವ ಕೆಲಸ ಮಾಡಿದ್ದಾರೆ.
ಡಾ ಎಂ ಚಿದಾನಂದ ಮೂರ್ತಿ -ಈ ದಿಶೆಯಲ್ಲಿ ಪ್ರತಿಭಟಿಸಿದ್ದು ಸೂಕ್ತ ಮತ್ತು ಸ್ತುತ್ಯಾರ್ಹ ಆದರೆ ಇದು ಪ್ರಚಾರ ಗಿಟ್ಟಿಸುವ ತಂತ್ರವಾಗಬಾರದು. ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಚ್ಚುತನವಿರಬಾರದು.
ಇಂದು ಬಹುತೇಕ ಸಂಶೋಧಕರು ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ಜೇಡರ ದಾಸಿಮಯ್ಯನವರ ಮತ್ತು ಮಡದಿ ದುಗ್ಗಳೆಯವರ ದಾರ್ಶನಿಕ ಮತ್ತು ಪವಿತ್ರ ಜೀವನದ ಜೊತೆ ಚೆಲ್ಲಾಟವಾಡುವ ಕೆಲಸ ಮೊದಲು ನಿಲ್ಲಲಿ. ಸರಕಾರವೂ ಕೂಡಾ ಇಂತಹ ಸಮಯದಲ್ಲಿ ಸಮಾಜವನ್ನು ಒಡೆಯುವ ಕೆಲ ಶಕ್ತಿಗಳಿಗೆ ಕಡಿವಾಣ ಹಾಕಿ ,ತಜ್ಞ ಸಮಿತಿ ರಚಿಸಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರ ಜೀವನ ಚರಿತ್ರೆಯ ನಿರ್ಧರಿಸಬೇಕು. ಇಂತಹ ವಿವಾದಗಳು ಕೊನೆಗೊಳ್ಳಲಿ ನಮ್ಮ ವ್ಯಕ್ತಿ ಪ್ರತಿಷ್ಟೆಗೆ ಶರಣರ ಜೀವನವನ್ನು ಬೀದಿಗೆ ತರುವದು ತರವಲ್ಲ. ಮತ್ತೆ ಇದೆ ತಪ್ಪನ್ನು ಸರಕಾರ ಮರಕಳಿಸುತ್ತದೆ ಕಾರಣ ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಒಂದೇ ಎಂದು ಹೇಳುವ ಕೆಲ ಕುಲಗೆಟ್ಟ ಸಾಹಿತಿಗಳು ಈಗಲೂ ಉಂಟು ಸಮಾರಂಭದ ಮಧ್ಯೆ ಗೊಂದಲ ಎಬ್ಬಿಸಿದ ಡಾ ಎಂ ಚಿದಾನಂದಮೂರ್ತಿ ಅವರನ್ನು ವಿಧಾನ ಸಭೆಯ ಬ್ಯಾಂಕ್ವೆಟ ಹಾಲಿನಿಂದ ಹೊರ ತಳ್ಳಲಾಯಿತು .

ಸತ್ಯ ಹೇಳಿದವನಿಗೆ ಅಪಮಾನ ಸರಕಾರದಿಂದ ನಡೆಯಿತು

ಕಾರಣ ಜನರನ್ನು ತಪ್ಪು ದಾರಿಗೆ ನೂಕುವ ಲಿಂಗಾಯತ ಧರ್ಮದಲ್ಲಿನ ನೇಕಾರ ಸಮಾಜವನ್ನು ಓಲೈಸುವ ನೆಪದಲ್ಲಿ ಚರಿತ್ರೆಗೆ ಮಸಿ ಬಳಿಯುವ ಕಾರ್ಯವನ್ನು ಸರಕಾರ ಮಾಡಬಾರದು.
ಸಾಮಾಜಿಕ ಜಾಲತಾಣಗಳಲ್ಲಿ ಶರಣರ ಬಗ್ಗೆ ವಚನಗಳ ಬಗ್ಗೆ ಲೇಖನ ಬಂದಾಗ ಅದನ್ನು ಓದದೇ ಅದರ ಸತ್ಯ ಸತ್ಯತೆ ವಿವೇಚಿಸದೆ ಫಾರ್ವಾರ್ಡ್ ಮಾಡುವ ಪ್ರವೃತ್ತಿ ಅಪಾಯಕಾರಿಯಾಗಿದೆ. ಅರಿವು ಅಧ್ಯಯನ ಗಟ್ಟಿಗೊಂಡಾಗ ಮಾತ್ರ ಇತಿಹಾಸ ಚರಿತ್ರೆಗೆ ನ್ಯಾಯ ಒದಗಿಸಬಹುದು . ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸಂಶಯಾಸ್ಪದ ಶರಣರ ಲೇಖನಗಳನ್ನು ಫಾರ್ವಾರ್ಡ್ ಮಾಡಿ ಜನರಲ್ಲಿ ಗೊಂದಲ ಮೂಡಿಸಬಾರದು ಎಂದು ವಿನಂತಿ

-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Don`t copy text!