ಸಾಮಾಜಿಕ ಜಾಲತಾಣದ ರಿಯಲ್ ಮತ್ತು ಫೇಕ್ ಜನ

ಸಾಮಾಜಿಕ ಜಾಲತಾಣದ ರಿಯಲ್ ಮತ್ತು ಫೇಕ್ ಜನ

ನಮ್ಮ ಸಾಮಾಜಿಕ ಜೀವನದಂತೆ ಈಗೀಗ 10-12 ವರ್ಷಗಳಿಂದ ಸಾಮಾಜಿಕ ಜಾಲತಾಣದ ಜೀವನ ಎಂಬುದು ಹೊಸದಾಗಿ ಆರಂಭವಾಗಿದೆ. ಮೊದಮೊದಲು ದೂರದಲ್ಲಿರುವ ನಮ್ಮ ಸಂಬಂಧಿಸಿದವರೊಂದಿಗೆ ಸಂಪರ್ಕದಲ್ಲಿರಲು ಎಂದು ಆರಂಭವಾದ ಜಾಲತಾಣಗಳು ಈಗೀಗ ಬೇರೆ ಜನರೊಂದಿಗೆ ಸಂಬಂಧ ಸಂಪರ್ಕ ಬೆಳೆಸಲು ಕಾರಣವಾಗಿವೆ.

ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಅಷ್ಟೇ ಏಕೆ ಬಹಳಷ್ಟು ಜಾಲತಾಣಗಳಲ್ಲಿ ಫೇಕ್ ಅಕೌಂಟ್ಗಳ ಹಾವಳಿ ಹೆಚ್ಚಾಗಿದೆ. ಗಂಡು /ಹೆಣ್ಣು ಪರಸ್ಪರ ಸ್ವಂತ ಗುರುತಿನಿಂದ ಮಾತನಾಡಲು ಇಷ್ಟ ಪಡದವರು ಬೇರೆ ಐಡಿ ಮಾಡೋದು ಸರ್ವೇ ಸಾಮಾನ್ಯವಾಗಿ ಹೋಗಿದೆ.

ಸಾಮಾಜಿಕ ಜಾಲತಾಣಗಳನ್ನು ಸಂಪರ್ಕ, ಸಂಬಂಧ ಸುಧಾರಣೆಗೆ ಮಾಹಿತಿ ಸಂಗ್ರಹಣೆಗೆ ಬಳಸುವ ಜನರು ಕೆಲವರಾದರೆ, ರಾಜಕೀಯ ಮತ್ತು ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿಗೆ ಬಳಸುವವರು ಇನ್ನೂ ಕೆಲವರು. ಆದರೆ 60%ಗಿಂತ ಹೆಚ್ಚು ಜನ ಡೇಟಿಂಗ್ ಎಂದೇ ಬಳಸುತ್ತಾರೆ. 14-15 ವಯಸ್ಸಿನವರಿಂದ 70-75 ವಯಸ್ಸಿನ ಜನರು ಹೆಣ್ಣು / ಗಂಡಿನ ಸಾಂಗತ್ಯ ಅಥವಾ ಸ್ನೇಹ ಹುಡುಕುವ ಜನರಿರುತ್ತಾರೇ…

ಜಾಲತಾಣಗಳು ಪರ್ಯಾಯ ಜಗತ್ತನ್ನೇ ಸೃಷ್ಟಿ ಮಾಡಿ ಮನುಷ್ಯನನ್ನು ವ್ಯಸನಿಯನ್ನಾಗಿ ಮಾಡುತ್ತವೆ. ಎಷ್ಟೋ ಜನರಿಗೆ ಅಪಾಯಕಾರಿಯೂ ಆಗಿದೆ.

ಜನರ ದೌರ್ಬಲ್ಯ ತಿಳಿದ ಮೋಸಗಾರರು ವಿವಿಧ ರೀತಿಯಲ್ಲಿ ದೋಚುವ ಮನಸ್ಸನ್ನು ಘಾಸಿಗೊಳಿಸುವವರಾಗಿರುತ್ತಾರೆ.

ಹೆಚ್ಚಿನ ಜನ ಕೆಲಸದಿಂದ ಸಮಯ ಸಿಕ್ಕಾಗ ಮೊಬೈಲ್ ಬಳಸಿದರೆ ಇನ್ನೂ ಕೆಲವರಿಗೆ ಕೆಲಸವೇ ಮೊಬೈಲ್ನಲ್ಲಿ ಇರುತ್ತದೆ. ಬಹಳಷ್ಟು ಜನ ಕೆಟ್ಟ ಜನರ ಮೋಸಕ್ಕೆ ಬಲಿಯಾಗುವ ಮುಗ್ಧರೇ ಇಲ್ಲಿ ಗಂಡು ಹೆಣ್ಣು ಮಕ್ಕಳು ಮುದುಕರು ಎಂಬ ಭೇದ ಇಲ್ಲ. ಯಾರು ಬೇಗ ಮಾಯಾಜಾಲಕ್ಕೆ ಬಲಿಯಾಗುವರೋ ಅವರನ್ನು ಉಪಯೋಗಿಸಿಕೊಳ್ಳುವ ಜನ ಹೆಚ್ಚು.

ಹೊಗಳಿಕೆಗೆ ಬಲಿಯಾಗುವವರು, ಅವಕಾಶಕ್ಕೆ ಹುಡುಕುವವರು, ದಿಢೀರ್ ಪ್ರಸಿದ್ಧಿಗೆ ಬರಲು ಇಚ್ಛೆ ಇರುವವರು, ತನಗೆ ಹೆಚ್ಚು ತಿಳಿದಿದೆ ಎನ್ನುವ ಜನ ಮೋಸ ಹೋಗುತ್ತಾರೆ.

ನೀವು ನಿಮ್ಮ ಅಕೌಂಟ್ ಗೆ ರಿಕ್ವೆಸ್ಟ್ ಬಂದಾಗ ಸ್ವತಃ ಪರಿಚಯ ಇದೆಯೇ? ನಮ್ಮ ಪರಿಚಯದವರು ಯಾರಿದ್ದಾರೆ? ನಿಜವಾದ ಭಾವ ಚಿತ್ರವಿದೆಯೇ ಗಮನಿಸಬೇಕಾದ ಅಂಶಗಳು.

ಫ್ರೆಂಡ್ ಅದ ನಂತರ ಅಸಭ್ಯ ವರ್ತಿಸುವವರನ್ನು ಮುಲಾಜಿಲ್ಲದೆ ಬ್ಲಾಕ್ ಭಾಗ್ಯ ಕೊಟ್ಟು ಬಿಡಿ. ನಿಮ್ಮ ನೆಮ್ಮದಿ ಮುಖ್ಯ. ಸುಳ್ಳಿನ ಶಾರದಾರರೇ ಬಹಳ ದುಡ್ಡು ಕಾಸಿನ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಡಿ.

ಏನೇ ಆದರೂ ಸಾಮಾಜಿಕ ಜಾಲತಾಣ ಜನರ ಪರ್ಯಾಯವಷ್ಟೇ, ನಿಜವಾದ ಜನರನ್ನು ಗುರುತಿಸಿ ಅವರೊಂದಿಗೆ ಮಧುರ ಸಂಬಂಧ ಬೆಳೆಸಿ. ನೆನಪಿಡಿ ನಮ್ಮ ನೇರಳೆ ನಮ್ಮನ್ನು ಬಿಟ್ಟು ಹೋಗಬಹುದು. ಪ್ರೀತಿಯ ಸಂಬಂಧ ವ್ಯಾಪಾರ ವ್ಯವಹಾರ ಎಲ್ಲವೂ ಸುರಕ್ಷಿತ ಜನರಲ್ಲಿ ಇರುವುದು ಉತ್ತಮ.

ಸಾಮಾಜಿಕ ಜಾಲತಾಣವನ್ನು ಹಿತಮಿತವಾಗಿ ಬಳಸೋಣ. ಅದರ ದಾಸರಾಗುವುದು ಬೇಡ

ಮಾಧುರಿ ಬೆಂಗಳೂರು

Don`t copy text!