ಡಾ .ಪುಟ್ಟರಾಜ ಗವಾಯಿ
ಅಂದರ ಪಾಲಿಗೆ
ಆರದ ದೀಪ
ಹೊಂಗಿರಣದ ಗವಾಯಿ
ಸಂಗೀತ ಸಾಕ್ಷಾತ್ಕಾರ
ಮೇಧಾವಿ
ದೇವಗಿರಿಯ ಪುಟ್ಟಯ್ಯ
ಭಕ್ತಿ ಭಾವ ಸಂಗೀತಾಧ್ಯ
ತಬಲಾ ಪಿಟೀಲು
ಹಾರ್ಮೋನಿಯಂ ಶಹನಾಯಿ
ವೀಣೆ ಕರ್ನಾಟಕ ಹಿಂದೂಸ್ತಾನಿ
ಕರ್ನಾಟಕ ಸಂಗೀತ ಕಲೆಗಳ ರುವಾರಿ
ಸಂಸ್ಕೃತಿ ಸಂಸ್ಕಾರ
ಸಂಪ್ರದಾಯ ಸದ್ವಿಚಾರ
ಸಹಬಾಳ್ವೆ ಸಮಾನತೆ
ಸೌಹಾರ್ದ ಸೋದರತೆ
ನಿತ್ಯ ಪುಷ್ಪ ಗಂಧ ಕರ್ಪೂರ
ವಿಭೂತಿ ರುದ್ರಾಕ್ಷಿ ಊದಬತ್ತಿ
ಇಷ್ಟ ಲಿಂಗ ಶಿವ
ಪುಣ್ಯಾಶ್ರಮದ ವೀರೇಶ್ವರ
ರಾಷ್ಟ್ರ ಅಂತರಾಷ್ಟ್ರ ಖ್ಯಾತಿ ಪುಟ್ಠಯ್ಯ
ರಾಜ್ಯೋತ್ಸವ ಕನಕ ಪುರಂದರ
ನಾಡೋಜ ಬಸವಯ್ಯ
ಕಾಳಿದಾಸ ಪದ್ಮಭೂಷಣ
ಗೌರವ ಡಾಕ್ಟರೇಟ್
ಬದುಕನು ಕಲಿಸಿದ ಸಂತ
ಪದಕ ಪುರಸ್ಕಾರ
ಪರಮಾತ್ಮನ ಪಾದದಲಿ ತಲ್ಲೀನ
ದೇವಸುತ ಪುಟ್ಟಜ್ಜ
ಸದಾ ಕಾಲ ಅಮರ
ಇಂದು ಉದಯಿಸಿದ ರವಿತೇಜ
ನಿನಗಿದೋ ಸವಿಯ ರಾಗದಲಿ
ಜನುಮದಿನದ ಶುಭಕಾಮನೆ..
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ
ಮೂಡಲಗಿ