ಹೆಬ್ಬಾಗಿಲು

ಹೆಬ್ಬಾಗಿಲು

ಕಾಯುತಿಹೆ
ನಾನು
ಮರಳಿ
ಆ ಗತ
ವೈಭವವ
ಕಾಣಲು

ಮಕ್ಕಳ
ಚಿಲಿಪಿಲಿ
ಕೇಳಲು
ಹಿರಿಯರ
ಹರುಷದ
ಧ್ವನಿಗಳ
ಕೇಳಲು

ಕಾಯುತಿಹೆ
ನಾನು
ಚದುರಿದ
ಹಕ್ಕಿಗಳು
ಮತ್ತೆ
ಒಂದಾಗುವ
ಕಾಲಕೆ
ಕಾಯುತಿಹೆ
ನಾನು ……..


ಅನುಪಮಾ ಪಾಟೀಲ ಹುಬ್ಬಳ್ಳಿ

Don`t copy text!