ತಾಲೂಕಿನ ಎಲ್ಲಾ ಗುತ್ತೇದಾರರಿಗೆ ಸಮನಾಗಿ ಕಾಮಗಾರಿ ಹಂಚಿ- ಗುತ್ತೇದಾರ ಸಂಘದ ಪದಾಧಿಕಾರಿಗಳ ಒತ್ತಾಯ

ತಾಲೂಕಿನ ಎಲ್ಲಾ ಗುತ್ತೇದಾರರಿಗೆ ಸಮನಾಗಿ ಕಾಮಗಾರಿ ಹಂಚಿ- ಗುತ್ತೇದಾರ ಸಂಘದ ಪದಾಧಿಕಾರಿಗಳ ಒತ್ತಾಯ

e-ಸುದ್ದಿ ಮಸ್ಕಿ

ತಾ.ಪಂ ನಿಂದ ೧೫ ನೇ ಹಣಕಾಸು ಅನುದಾನ ಮತ್ತು ಮುಖ್ಯಮಂತ್ರಿ ಅನುದಾನದ ಕಾಮಗಾರಿಗಳನ್ನು ತಾಲೂಕಿನ ಎಲ್ಲಾ ಗುತ್ತಿಗೆ ದಾರರಿಗೆ ಕೊಡುವಂತೆ ಮಸ್ಕಿ ತಾಲೂಕು ಗುತ್ತೇದಾರ ಸಂಘದ ಪ್ರಧಾನ‌ ಕಾರ್ಯದರ್ಶಿ ಮೌನೇಶ ತುಗ್ಗಲದಿನ್ನಿ ಒತ್ತಾಯಿಸಿದ್ದಾರೆ.
ಈ‌ ಕುರಿತು ಶನಿವಾರ ತಾಲೂಕು ಪಂಚಾಯತಿ ಇಒ ಬಾಬು ರಾಟೋಠ ಅವರಿಗೆ ಮನವಿ ಪತ್ರ ಸಲ್ಲಿಸಿ‌ಮಾತನಾಡಿದರು.
ಕೆ.ಟಿ.ಪಿ.ಪಿ. ಕಾಯ್ದೆ ಪ್ರಕಾರ ಗುತ್ತಿಗೆ ದಾರರಿಗೆ ಕಾಮಗಾರಿ ನೀಡಬೇಕಬ ನಿಯಮವಿದೆ. ಅಧಿಕಾರಿಗಳು ಕಾನೂನು ಬಾಹಿರವಾಗಿ ಪ್ಯಾಕೇಜ್ ಮಾಡಿ ಕೆಲವೆ ಗುತ್ತೇದಾರರಿಗೆ ಅನುಕೂಲ‌ ಮಾಡಿಕೊಡುವ ಮೂಲಕ ಸಣ್ಣ ಪುಟ್ಟ ಗುತ್ತಿಗೆದಾರರನ್ನು ಬೀದಿಗೆ ತಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಪ್ಯಾಕೇಜ್ ಮಾಡಿ ಆಯ್ದ ಗುತ್ತಿಗೆದಾರರಿಗೆ ಕಾಮಗಾರಿ ಕೊಡುವದರಿಂದ ಸಣ್ಣ ಗುತ್ತಿಗೆ ದಾರರು ಸರ್ಕಾರಕ್ಕೆ ಹಣ ಕಟ್ಟಿ ಪಡೆದಿದ್ದ ಲೈಸನ್ಸ್ ಕೆಲಸ ಇಲ್ಲದೆ ರಿನಿವಲ್ ಮಾಡದ ದುಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾನೂನು ಬಾಹಿರವಾಗಿ ಕೆಲವೇ ಜನರಿಗೆ ನೀಡಿರುವ ೪ ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ರದ್ದುಪಡಿಸಿ ಉಳಿದ ಎಲ್ಲಾ ಗುತ್ತಿಗೆದಾರರಿಗೆ ಹಂಚಿಕೆ ಮಾಡಬೇಕು. ಇಲ್ಲದಿದ್ದಲ್ಲಿ ಗುತ್ತೆದಾರ ಸಂಘದಿಂದ ತಾಲೂಕು ಪಂಚಾಯತಿ ಕಚೇರಿ ಮುಂದೆ ಧರಣಿ‌ನಡೆಸುವುದಾಗಿ ತಿಳಿಸಿದರು.
ಮನವಿ ಪತ್ರ ಸ್ವಿಕರಿಸಿದ ತಾ.ಪಂ ಇಒ ಪರಿಶೀಲಿಸುವದಾಗಿ ತಿಳಿಸಿದರು.
ತಾಲೂಕು ಗುತ್ತೇದಾರರ ಸಂಘದ ಹುಲಗಪ್ಪ ಉದ್ಬಾಳ, ವೆಂಕನಗೌಡ ದಿಗ್ಗನಾಯಕನಬಾವಿ, ಚಾಂದ ಷೇಡ್ಮಿ, ಮಲ್ಲಿಕಾರ್ಜುನ ನಾಗರಬೆಂಚಿ, ಸಂತೋಷ ಗೋನವಾರ, ಬಸವರಾಜ ಉದ್ಬಾಳ, ರವಿಕುಮಾರ್ ಬೆಳಿಗನೂರು, ಬಸಯ್ಯ ಮೆದಕಿನಾಳ ರಮೇಶ ಬಳಗಾನೂರು, ಯಂಕಪ್ಪ ಬಸಾಪೂರ, ಮೌನೇಶ ಕವಿತಾಳ, ಬಸವರಾಜ ನವಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

 

 

Don`t copy text!