ಹೀಗೆ ಇರಬೇಕೆಂದಿಲ್ಲ
ಹೀಗೆ ಇರಬೇಕೆಂದಿಲ್ಲ
ಕವಿ /ತೆ
ಇದ್ದಂತೆ ಹಾಫ್ ಶರ್ಟ್, ಫುಲ್ ಶರ್ಟ್ ಒಮ್ಮೊಮ್ಮೆ ಮೊಂಡ ಚೆಡ್ಡಿಯ ಮೇಲೆ
ನೀಟಾಗಿ ಇಸ್ತ್ರಿ ಮಾಡಿದ
ಶರ್ಟ್, ಪ್ಯಾಂಟ್
ಟೈ,ಮೇಲಂಗಿ ಇದ್ದರಂತು
ಕೆಳಗಿನ ಬೂಟಿನ ಗತ್ತೇ ಬೇರೆ
ಚುಟುಕೊ, ಗುಟುಕೊ
ಬರೆಯಿರಿ
ಸೊಬಗಿರಲಿ ಅಂಗಿಯ ಗುಂಡಿಗಳಂತೆ
ಸಮತೆಯೂ ಇರಲಿ
ತಲೆಗೆ ತಕ್ಕಂತೆ ಕ್ರಾಫ್
ಇದ್ದ ಹಾಗೆ
ಇರಲಿ ಕವಿತೆಗೆ ಭಾವ
ಕವಿ ಭಾಷೆಯ ಜೀವ
–ಮಹಾಂತೇಶ ಮಸ್ಕಿ