ಹೋಳಿ ಹಬ್ಬ
ಬಂತು ಬಂತು ಹೋಳಿ ಹಬ್ಬ
ರಂಗು ರಂಗಿನ ಬಣ್ಣದಾಟದ ಹಬ್ಬ
ಹೋಳಿ ಹಬ್ಬ ಹೋಳಿ ಹಬ್ಬ
ಕೆಟ್ಟ ವಿಚಾರಗಳ ಹೋಳಿಯೊಳು ಸುಡು ತ
ಸುವಿಚಾರಗಳ ಮನದೊಳು ಬೆಳೆಸು ತ
ಪ್ರೀತಿ ಪ್ರೇಮ ಸ್ನೇಹ ಗಳ ಹಂಚು ತ
ಮೆರೆಯುವ ಹಬ್ಬ ಹೋಳಿ ಹಬ್ಬ. ||
ವರುಷದ ಅಂತ್ಯದಿ ಬರುವ ಹಬ್ಬ
ವರುಷ ವಿಡಿ ತುಂಬಿಹ ಚಿಂತೆಗಳ
ಕಳೆ ಯುವ ಹಬ್ಬ
ಸಂತೋಷದಿ ಉಲ್ಲಾಸದಿ ಹೊಸ
ವರುಷವ ಸ್ವಾಗತಿಸುವ ಹಬ್ಬ
ಬಂತು ಹೋಳಿ ಹಬ್ಬ. ||
ಕಟ್ಟಿಗೆ ಬೆರಣಿ ಗಳ ಬೇಡುತ ಹುಡುಗರು
ಗಲ್ಲಿ ಗಲ್ಲಿಯಲ್ಲಿ ತಿರುಗುವ ಹಬ್ಬ
ಇಲ್ಲೆನ ದೆ ವನಿತೆಯರು ಬೇಡಿದುದ ನೆಲ್ಲವ
ಕೊಡುವ ಹಬ್ಬ ಬಂತು ಹಬ್ಬ ಹೋಳಿ ಹಬ್ಬ ||
ಹುಡುಗರೆಲ್ಲಾ ಕೂಡಿ ಕಾಮಣ್ಣನ ಸುಟ್ಟು
ಕೇಕೆ ಹಾಕುತ ಕುಣಿಯುವ ಹಬ್ಬ
ಕೂಣಿಯುತ ನಲಿಯುತ ಹೋಳಿಗೆ ತುಪ್ಪದ
ಸವಿಯನು ಸವಿಯುವ ಹಬ್ಬ ಹೋಳಿ ಹಬ್ಬ.
ಬಂತು ಹೋಳಿ ಹಬ್ಬ. ||
–ಮೀನಾಕ್ಷಿ ವೀ.ಥಳಂಗೆ ಸೊಲ್ಲಾಪುರ