ಬಣ್ಣ

ಬಣ್ಣ

ನನ್ನ ಬದುಕಿನಲ್ಲಿ
ಬರಲಿಲ್ಲ ಕಾಮನಬಿಲ್ಲಿನ
ಏಳು ಬಣ್ಣಗಳು…

ನನಗಿಷ್ಟವಿರಲಿಲ್ಲ
ರಂಗು ರಂಗಿನ
ಘಾಡ ಬಣ್ಣಗಳು…

ಅವೆಲ್ಲವೂ ಸೇರಿದಾಗ
ಕಾಣುವ ಹೊಸ ಬಣ್ಣ
ನನ್ನ ಪ್ರೀತಿಯ ಬಿಳಿ ಬಣ್ಣ

ಸ್ವಚ್ಛ, ಶ್ವೇತ, ಪಾರದರ್ಶಕ
ಶಾಂತಿ, ಸಮಾಧಾನ ಸೂಸುವ
ಅಚ್ಚುಮೆಚ್ಚಿನ ಬಿಳಿಬಣ್ಣ…

ಗೀತಾ
ಹರಮಘಟ್ಟ

Don`t copy text!