ಮನುಜ

ಮನುಜ

ಯಾಕೆ ಹೀಗೆ ಯಾಕೊ ಏನೊ
ಯಾಕೆ ಮನುಜ ?
ಯಾಕೀ ಮೋಹ ಯಾಕೀ ದ್ರೋಹ
ಯಾಕೀ ದ್ವೇಷ

ದಾಸರೆಂದರಂತೆ…
ಯಾರಿಗೆ ಯಾರೂ ಇಲ್ಲ
ಎರವಿನ ಸಂಸಾರ ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ

ಬರುವಾಗ ಬೆತ್ತಲೆ ಹೋಗುವಾಗ ಕತ್ತಲೆ
ಬಂದು ಹೋಗುವ ನಡುವೆ
ಒಳಿತ ಮಾಡೊ ಮನುಜ
ಆಗ ಆಗುವೆ ನೀ ಸಹಜ

ಕಾಣದ ದೈವ ನಮ್ಮಲ್ಲಿರುವುದು
ಹೊಡೆದು ಎಬ್ಬಿಸೋ
ಒಳಿತು ಕೆಡುಕು ಏನೆಂದು ಅರಿಯದೆ
ತಪ್ಪಾ ಮಾಡದಿರು ಮನುಜ

ಮನುಷ್ಯನಾಗಿ ನೂರು ಜನ್ಮ ಬಾಳದೆ
ಮಲ್ಲಿಗೆಯಾಗಿ ಒಂದು ಕ್ಷಣಕ್ಕೆ ಹಾತೊರೆಯೊ
ಮರುಜನ್ಮ ಒಂದಿದ್ದರೆ ಮೂಕ ಜೀವಿಯಾಗಿ
ಪುಣ್ಯಕೊಟಿಯ ಅರಸಿ ಬಾ ಮನುಜ

ಆಸೆ ಆಕಾoಕ್ಷೆಗಳ ಅದುಮಿ
ಸಿಟ್ಟು ದ್ವೇಷಗಳ ಕೊಡವಿ
ಬರುವೆ ನೀ ಕಾಮಧೇನುವಾಗಿ
ಬರುವೆ ಕಲ್ಪವೃಕ್ಷವಾಗಿ ಸಹಜ

ಅಂತರಾಳದಿ ಅಡಗಿರುವ
ದೈವಶಕ್ತಿಯ ಸಾಕ್ಷಿಯಾಗಿ
ಮಾಡುವ ಕಾಯಕದಲಿ
ಪರಮಾತ್ಮನನು ಕಾಣು ಮನುಜ

ಆಗಲೇ ಸಾರ್ಥಕತೆಯ ಬದುಕು
ಅರಿವಾಗುವುದು ಸಹಜ!!

ಮಮತಾ ಅಂಚನ್ ಪುಣೆ

Don`t copy text!