ಕ.ಸಾ.ಪ ತಾಲೂಕು ಪದಾಧಿಕಾರಿಗಳ ಪದಗ್ರಹಣ.
e-ಸುದ್ದಿ ಲಿಂಗಸುಗೂರು
ಗುರು ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾದ ಮಾನಪ್ಪ ಡಿ. ವಜ್ಜಲ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ
ಕನ್ನಡ ಭಾಷೆಗೆ ನಮ್ಮ ಬದುಕನ್ನು ಕಟ್ಟುವ ಶಕ್ತಿ ಇದೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನಾವು ಇಂದು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಇಂಗ್ಲಿಷ್ ಇಲ್ಲದಿದ್ದರೆ ನಮ್ಮ ಜೀವನವೇ ಇಲ್ಲವೆಂಬ ಭಾವನೆಗೆ ಒಳಗಾಗಿದ್ದೇವೆ. ನಮ್ಮ ನಾಡು ನುಡಿಯ ಬಗ್ಗೆ ಕೇವಲ ನಾವು ಬಾಯಿ ಮಾತಿನಲ್ಲಿ ಮಾತನಾಡಬಾರದು ಅದು ಹೃದಯ ಅಂತರಾಳದಿಂದ ಹೊರ ಬರಬೇಕು. ನಮ್ಮ ಕನ್ನಡ ಸಾಹಿತ್ಯ ಮತ್ತು ಭಾಷೆಯ ಮಹತ್ವ ಬಗ್ಗೆ ನಾವು ತಿಳಿದು ಅದನ್ನು ಆಡಳಿತದ ಭಾಷೆಯಾಗಿ ಎಲ್ಲಾ ಆಡಳಿತ ಕಛೇರಿ ಗಳಲ್ಲಿ ಬಳಸಬೇಕಾಗಿದೆ. ಇಂಗ್ಲಿಷ್ ಭಾಷೆಯನ್ನು ಹೋಗಲಾಡಿಸಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದರ ಮೂಲಕ ನಮ್ಮ ಭಾಷೆಯೇ ನಮಗೆ ಹೆಮ್ಮೆ ಎಂದು ಪ್ರತಿಯೊಬ್ಬರೂ ಅರಿತು ಇಂದಿನ ಯುವ ಪೀಳಿಗೆಗೆ ಕನ್ನಡ ಸಾಹಿತ್ಯದ ಅರಿವು ಮೂಡಿಸಬೇಕಾಗಿದೆ.ಎಂದರುು.
ಮೋಬೈಲ್ ಬಿಟ್ಟು ಕನ್ನಡ ಸಾಹಿತ್ಯ ಓದಿ ತಿಳಿದುಕೊಳ್ಳುವ ಕೇಲಸ ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ ಸಾಹಿತಿಗಳು, ಶಿಕ್ಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ ವಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನಪ್ಪ ವಜ್ಜಲ್ ಅವರು ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನೆಲ- ಜಲ ನಾಡು- ನುಡಿ ಬಗ್ಗೆ ಅಪಾರ ಕಾಳಜಿ ಉಳ್ಳ ಸಂಘಟನೆಯಾಗಿದ್ದು, ಕನ್ನಡ ನಾಡಿನ ಏಳಿಗೆಗಾಗಿ ಅನೇಕ ಸಾಹಿತಿಗಳು ಕಥೆ-ಕಾದಂಬರಿ, ಕವನ ಸಂಕಲನಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ, ಅಖಂಡ ಕರ್ನಾಟಕಕ್ಕೆ ಧಕ್ಕೆ ಬಂದಾಗ ಕನ್ನಡಿಗರೆಲ್ಲ ಒಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ, ಆದ್ದರಿಂದ ನಾವೆಲ್ಲರೂ ಕನ್ನಡ ನೆಲ,ಜಲದ ಬಗ್ಗೆ ಅಭಿಮಾನ ಭಾವ ಹೊಂದೋಣ ಎಂದು ಹೇಳಿದರು.
ಸಾಹಿತಿ ಡಾ. ಸಿ.ಬಿ ಚಿಲ್ಕರಾಗಿಯವರು ಬರೆದ ‘ತಿಗರಿ ತಿರುಗಿದ ಮ್ಯಾಲ’ ಎಂಬ ‘ಗಜಲ್’ ಕೃತಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ರಂಗಣ್ಣ ಪಾಟೀಲ ಅಳ್ಳುಂಡಿ , ಸಾಹಿತಿಗಳಾದ ಮಹಾಂತೇಶ್ ಮಸ್ಕಿ, ಬಿ.ಇ.ಒ ಹೊಂಬಣ್ಣ ರಾಠೋಡ್, ಅಲ್ಲಾಗಿರಿರಾಜ್ ಕನಕಗಿರಿ, ಡಾ. ಶಿವಬಸಪ್ಪ ಹೆಸರೂರ, ಡಾ.ಸಿ.ಬಿ ಚಿಲ್ಕರಾಗಿ ಕ.ಸಾ.ಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ್, ಸೇರಿದಂತೆ ಶಿಕ್ಷಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.