ಉಡುಗೊರೆ
ದಿಟ್ಟ ಹೆಜ್ಜೆ ಇಟ್ಟು
ಬಸವ ಧರ್ಮದ ಹಿಂದೆ
ಹೊರಟೆ ಧೀರೆ
ವಚನ ಸಾಹಿತ್ಯದಲಿ
ಆತ್ಮ ಸಂತೋಷ
ಹುಡುಕುತ್ತಿರುವ ನೀರೆ
ಎಲ್ಲರನೂ ನನ್ನವರೆಂದು
ಬಗೆಯುವ ಉದಾರೆ
ಗತ್ತು ಗಾಂಭೀರ್ಯದಲೂ
ಮಮತೆ ತೋರುವ ಮಾಧುರೆ
ಸಮಾಜ ಸೇವೆಗೆ
ದೀಕ್ಷಾಕಂಕಣ ತೊಟ್ಟು ಚತುರೆ
ನಡೆನುಡಿ ಆಚಾರದಲಿ
ಶರಣು ಸಂಸ್ಕೃತಿಯ ಪ್ರಭಾರೆ
ಇವರೆ… ಪ್ರತಿವಾರ
ಪ್ರೀತಿಯ ಮಾತುಗಳಲ್ಲಿ
ಕಟ್ಟಿಹಾಕಿ
ನೆನಪಿನ ಪುಸ್ತಕದಲ್ಲಿ
ಸಿಹಿ ಹಾಕಿ
ಅಕ್ಕನಅರಿವು ವೇದಿಕೆಗೆ
ಅಣ್ಣತಮ್ಮ ಅಕ್ಕತಂಗಿ
ತಂದೆತಾಯಿಗಳು ಕರೆತರುವ
ಜತ್ತಿ ನಾಡಿನ ಮಗಳು
ಸಂಕ ಗ್ರಾಮದ ಕುವರಿ
ಗೌಡತಿಯ ಗತ್ತು ಹೊರಗೆ
ಬಸವ ಧ್ಯಾನದ ಚೇತನ್ ಒಳಗೆ
ವಚನ ದೀವಿಗೆಯ ಬೆಳಕು
ಹಂಚುತ ನಡೆದಿರುವ
ಪ್ರೀತಿಯ ಸಹೋದರಿ
ಸುಜಾತಾ ಪಾಟೀಲ
ನಿಮಗಿದು ಹುಟ್ಟು ಹಬ್ಬದ
ಉಡುಗೊರೆ
ಡಾ. ನಿರ್ಮಲ ಬಟ್ಟಲ