ಮಸ್ಕಿ ಮಲ್ಲಿಕಾರ್ಜುನ ರಥ ನಿರ್ಮಾಣದ ಪೂರ್ವ ಬಾವಿ ಸಭೆ

ಮಸ್ಕಿ ಮಲ್ಲಿಕಾರ್ಜುನ ರಥ ನಿರ್ಮಾಣದ ಪೂರ್ವ ಬಾವಿ ಸಭೆ

e-ಸುದ್ದಿ ಮಸ್ಕಿ

ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ , ಎರಡನೇ ಶ್ರೀಶೈಲ ಎಂದೇ ಖ್ಯಾತಿಯಾದ ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವರ ರಥ ಶಿಥಿಲವಾಗಿದ್ದು ಹೊಸ ರಥ ನಿರ್ಮಾಣ ಮಾಡಿಸುವ ಸಲುವಾಗಿ ಗ್ರಾಮದ ಮುಖಂಡರು ಮಾ.೨೧, ಸೋಮವಾರ ಸಂಜೆ ೬ ಗಂಟೆ ರಥ ಬೀದಿಯಲ್ಲಿರುವ ತೇರಿನ‌ಮನೆ ಮುಂಬಾಗದಲ್ಲಿ ಪೂರ್ವಬಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಗ್ರಾಮದ ಮುಖಂಡರಾದ ಕೆ.ವೀರನಗೌಡ, ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ, ಪ್ರತಾಪಗೌಡ ಪಾಟೀಲ, ಡಾ.ಶಿವಶರಣಪ್ಪ ಇತ್ಲಿ, ಮಲ್ಲಪ್ಪ ಕುಡತನಿ, ಡಾ.ಬಿ.ಎಚ್.ದಿವಟರ್, ಪ್ರಕಾಶ ಧಾರಿವಾಲ ಸೇರಿದಂತೆ ಅನೇಕರು ಭಾಗವಹಿಸುವರು.
ಗ್ರಾಮದ ಸರ್ವ ಜನಾಂಗದ ಹಿರಿಯರು, ಯುವಕರು ಸಭೆಗೆ ಆಗಮಿಸಿ ಸಲಹೆ ಸೂಚನೆ ನೀಡಿ ತನು, ಮನ ಧನ ಸಾಹಾಯ‌ ಮಾಡುವ ಮೂಲಕ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೊರಿದ್ದಾರೆ.

Don`t copy text!