ಗುರುವಿನ ಮಹತ್ವ
ಲಘು ಗುರುವಪ್ಪನೇ? ಗುರು-ಲಘು ವಪ್ಪನೇ ?ಆಗದಾಗದು
ಗುರು ಗುರುವೇ ಲಘು ಲಘುವೆ ಶ್ರೀಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ
ಶ್ರೀಗುರು ಲಿಂಗ ಜಂಗಮ ಪ್ರಸಾದನ್ನು
ತಾನೆ ಲಘು ಮಾಡಿ ಲಘುವಾದನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
-ಉರಿಲಿಂಗ ಪೆದ್ದಿ
ಗುರು ವಾದವರು ತಮ್ಮ ಘನತೆ ಗೌರವಗಳನ್ನು ಕಾಯ್ದುಕೊಳ್ಳಬೇಕೆಂದು ತಿಳಿಸುವುದರ ಜೊತೆಗೆ ಗುರು-ಲಿಂಗ-ಜಂಗಮ ಎಂಬ ಮೂರು ವಿಧದ ಮಹತ್ವವನ್ನು ಅರಿಯದೇ ನಮ್ಮತನವನ್ನು ಪ್ರದರ್ಶನ ಮಾಡಿದಂತಾಗುತ್ತದೆ. ಎಂಬ ಅರಿವನ್ನು ಮೂಡಿಸುತ್ತಿರುವ ಸಂದರ್ಭದಲ್ಲಿ ಈ ವಚನವು ಮೂಡಿಬಂದಿದೆ.
ಲಘು ಗುರುವಪ್ಪನೇ? ಗುರು-ಲಘು ವಪ್ಪನೇ ?ಆಗದಾಗ ದು
ಲಘು ಎಂದರೆ ಸಣ್ಣತನದ ಸಂಕೇತವಾದರೆ ,ಗುರು ಎನ್ನುವುದು ದೊಡ್ಡತನದ ಸಂಕೇತವಾಗಿದೆ. ಗುರುವಾದರು ಪ್ರತಿಯೊಬ್ಬರಿಗೂ ಜ್ಞಾನದ ಮಾರ್ಗವನ್ನು ತೋರಿಸುವ ಅಲ್ಲದೆ ಸಮಾಜದಲ್ಲಿ ಸದಾಚಾರಿಗಳಾಗಿ ಶ್ರೇಷ್ಠ ವ್ಯಕ್ತಿತ್ವವನ್ನು ತ್ರಿವಿಧ ಮಹತ್ವವನ್ನು ಅರಿತು ನಡೆಯುವಂತಾಗಬೇಕು. ಶ್ರೇಷ್ಠವಾದ ಗುರುವಿನ ಸ್ಥಾನದಲ್ಲಿರುವವರು ಯಾವಾಗಲೂ ನಮಗಿಂತ ದೊಡ್ಡವರಾಗಿರುತ್ತಾರೆ
ಗುರು ಗುರುವೇ ಲಘು ಲಘುವೆ ಶ್ರೀಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ
ಸಣ್ಣವರು ಯಾವಾಗಲೂ ಗುರುಗಳಿಗಿಂತ ಸಣ್ಣವರಾಗಿಯೇ ಇರುವುದು ಸಹಜವಾದುದು. ಸಮಾಜದಲ್ಲಿ ಉತ್ತಮವಾದ ನಡೆ-ನುಡಿ ಆಚಾರ-ವಿಚಾರ ಜ್ಞಾನ- ಕ್ರಿಯೆಗಳನ್ನು ಹೊಂದಿ ಶ್ರೇಷ್ಠ ವ್ಯಕ್ತಿತ್ವವನ್ನು ಪಡೆದಾಗ ಮಾತ್ರ ಗುರುವಿನ ಸ್ಥಾನಕ್ಕೆ ಘನತೆ ಗೌರವಗಳು ಒದಗುತ್ತವೆ.
ಶ್ರೇಷ್ಠವಾದ ಗುರುವಿನ ಸ್ಥಾನದಲ್ಲಿರುವವರು ದುರ್ಗುಣಗಳನ್ನೇ ಮೈಗೂಡಿಸಿಕೊಂಡು ಸಣ್ಣತನದ ವರ್ತನೆಗಳಿಂದ ಕೂಡಿದ್ದರೆ ಅದು ಗುರುವಿನ ಸ್ಥಾನಕ್ಕೆ ಶೋಭೆ ಉಂಟಾಗದೆ ವ್ಯಕ್ತಿತ್ವಕ್ಕೆ ಧಕ್ಕೆಯುಂಟಾಗುವುದು.
ಗುರು ಲಿಂಗ ಜಂಗಮ ಪ್ರಸಾದ ನ್ನು
ತಾನೆ ಲಘು ಮಾಡಿ ಲಘುವಾದನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
ಗುರುವಾದವರು ಶಿವಲಿಂಗವನ್ನು ಜಂಗಮ ಪ್ರಸಾದವನ್ನು ಲಘುವಾಗಿ ಕಂಡು ದುಷ್ಟತನದ ಕಾರ್ಯಗಳನ್ನು ಕೈಗೊಳ್ಳುವುದರಿಂದ ತಮ್ಮ ಸಣ್ಣತನವನ್ನು ತಾವೇ ಪ್ರದರ್ಶಿಸಿ ದಂತಾಗುತ್ತದೆ.
ಗುರು-ಲಿಂಗ-ಜಂಗಮ ವೆಂಬ ತ್ರಿವಿಧ ವನ್ನರಿತು ನಡೆದಾಗ ಮಾತ್ರ ಪರಮಾತ್ಮನ ಪ್ರೀತಿಗೆ ಪಾತ್ರರಾಗಿ ಮುಕ್ತಿ ಪಡೆಯಲು ಸಾಧ್ಯವೆಂಬ ಅಂಶವನ್ನು ಉರಿಲಿಂಗ ಪೆದ್ದಿಯವರು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಗುರುವಾದರು ಗುರು-ಲಿಂಗ-ಜಂಗಮ ಎಂಬ ಈ ತ್ರಿವಿಧವನ್ನರಿತು ಉತ್ತಮವಾದ ನಡತೆಯನ್ನು ಹೊಂದಿದಾಗ ಮಾತ್ರ ಶ್ರೇಷ್ಠ ತೆಯ ವ್ಯಕ್ತಿತ್ವವನ್ನು ಪಡೆಯಲು ಸಾಧ್ಯವೆಂಬ ಅರಿವಿನ ಅಂಶವನ್ನು ಈ ವಚನದಲ್ಲಿ ಕಾಣಬಹುದು.
ಶ್ರೀಮಂತ ನಾಗಲಿ ಬಡವನ ನಾಗಲಿ ಪ್ರತಿಯೊಬ್ಬರೂ ಮಾನಸಿಕವಾಗಿ, ದೈಹಿಕವಾಗಿ ,ತೊಂದರೆಗಳಿಗೆ ಒಳಗಾದಾಗ ಅವರಲ್ಲಿದ್ದ ದುಷ್ಟ ಗುಣಗಳು ,ದೃಷ್ಟ ಚಾರಿತ್ರ್ಯ ರೋಗರುಜಿನಗಳನ್ನು ಹೋಗಲಾಡಿಸಲು ಮತ್ತು ಮಾನಸಿಕವಾಗಿ ಅವುಗಳನ್ನು ಹೋಗಲಾಡಿಸಲು ಬಸವಣ್ಣನವರು ಕರಸ್ಥಲಕ್ಕೆ ಇಷ್ಟಲಿಂಗವನ್ನು ದಯಪಾಲಿಸಿದರೆಂದು ಹೇಳಲಾಗಿದೆ .ಆ ಲಿಂಗದ ಕಟ್ಟಳೆಯಲ್ಲಿ ಬಂದಾಗ ಅವುಗಳನ್ನೆಲ್ಲಾ ದೂರೀಕರಿಸಿ ಅವರಲ್ಲಿ ಸದ್ಭಾವನೆಗಳು ಮೂಡಿ ಚಾರಿತ್ರ ವಂತರಾಗಿ ,ನೀತಿವಂತರಾಗಿ, ಬಾಳಿ ಒಳ್ಳೆಯ ಆರೋಗ್ಯವಂತರಾಗಿ ಬದುಕಲು ಈ ಇಷ್ಟಲಿಂಗ ವಿಶ್ವ ಚೈತನ್ಯವನ್ನು ವ್ಯಕ್ತಿ ಚೈತನ್ಯದಲ್ಲಿ ಸಂಪಾದಿಸಿಕೊಂಡಾಗ ಮಾತ್ರ ಸಾಧ್ಯವೆಂದು ಮನಗಂಡು ವೈಜ್ಞಾನಿಕ ಮಹತ್ವ ಹೊಂದಿದ . ಇಷ್ಟಲಿಂಗವನ್ನು ಸಂಶೋಧನೆ ಮಾಡಿದ್ದಾರೆ l.
ಗುರು ಲಿಂಗ ಜಂಗಮ ಕುರಿತು ಬಸವಣ್ಣವರ ವಚನ &ಸರ್ವಜ್ಞ ನ ವಚನ ನೋಡಲಾಗಿ
* ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ
ಜಂಗಮ ವಿಕಾರಿಗೆ ಧನವಿಕಾರವೆಂಬುದಿಲ್ಲ
ಪ್ರಸಾದ ವಿಕಾರಿಗೆ ಮನ ವಿಕಾರವೆಂಬುದಿಲ್ಲ
ಇಂತಿ ತ್ರಿವಿಧ ಗುಣವನರಿದಾತನು
ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವ
* ಗುರು ಮುನಿದರೆ ಒಂದು ದಿನ ತಾಳುವೆ
ಲಿಂಗ ಮುನಿದರೆ ದಿನವರೆ ತಾಳುವೆ ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ ಎನ್ನ ಪ್ರಾಣ ಹೋಗೋ ಕೂಡಲಸಂಗಮದೇವ.
*ಬೆಟ್ಟ ಕರ್ಪೂರ ಬೆಂದುl ಬೊಟ್ಟಗಲ ಬೂದಿಲ್ಲl
ನೆಟ್ಟನೆ ಗುರುವಿಗೆರಗಿದರೆ ಪಾಪವುl ಸುಟ್ಟು ಹೋಗುವುದು ಸರ್ವಜ್ಞll
*ಗುರುಗಳಿಗೆ ಹಿರಿಯರಿಗೆ ಶಿರಬಾಗಿ ಎರಗಿದರೆ
ನರಸುರರು ಒಲಿದು ಸಿರಿ ಸುರಿದು ಕೈಲಾಸ
ಕರತಲಾಮಲಕ ಸರ್ವಜ್ಞll
* ಗುರು ಲಿಂಗ ಜಂಗಮವು ಹರನೊಲಿದ ರೂಪೆಂದು
ಅರಿದು ನಿಶ್ಚಯಿಸಿ ನಡೆಯುವ ಭಕ್ತಂಗೆ
ಪರಮ ಪದವಹುದು ಸರ್ವಜ್ಞll
–ಪ್ರೊ- ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ