ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಿ- ಮುರುಘರಾಜೇಂದ್ರ ಶ್ರೀಗಳು.

ವರದಿ -ವಿರೇಶ ಅಂಗಡಿ ಗೌಡೂರು.

ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ಬಸವ ಶ್ರೀ ಶಿಕ್ಷಣ ಸಂಸ್ಥೆ (ರಿ) ಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ 3 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.

ಯರಡೋಣ ಕ್ರಾಸ್ ನ ಸಿದ್ದರಾಮೇಶ್ವರ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತಾಯಿಯೇ ಮಕ್ಕಳಿಗೆ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರವನ್ನು ಕೊಟ್ಟಾಗ ಮಾತ್ರ ಬಾಲ್ಯಾವಸ್ಥೆ ಪರಿ ಪೂರ್ಣವಾಗುತ್ತದೆ, ಅಂದಾಗ ಮಾತ್ರ ಅವರ ಜೀವನ ಭವಿಷ್ಯ ಸುಗಮವಾಗುತ್ತದೆ. ಮಕ್ಕಳು ಭಗವಂತನ ಸ್ವರೂಪ ಪಾಲಕರು,ಶಿಕ್ಷಕರು ಮಕ್ಕಳಿಗೆ ಯಾವ ರೀತಿಯ ಸಂಸ್ಕಾರವನ್ನು ನೀಡುತಾರೆ ಆ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ. ಇಂದಿನ ಆಧುನಿಕ ದಿನಮಾನಗಳಲ್ಲಿ ಟಿ.ವಿ ನೋಡುವಂತದ್ದು ಕಡಿಮೆ ಮಾಡಿ ನಿಮ್ಮಂತೆ ನಿಮ್ಮ ಮಕ್ಕಳು ಅನುಕರಿಸುತ್ತಾರೆ ಮಕ್ಕಳ ಕೈ ಯಲ್ಲಿ ಪಾಲಕರು ಮೋಬೈಲ್ ಕೋಡಬೇಡಿ ಆದಷ್ಟು ಅದರಿಂದ ಮಕ್ಕಳನ್ನು ದೂರ ಇರಿಸಿ ಅದರ ಬದಲು ಉತ್ತಮ ಪುಸ್ತಕಗಳನ್ನು ಕೊಡಿ.ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪಾಲಕ,ಪೋಷಕರ ಪಾತ್ರವು ಅಷ್ಟೇ ಮುಖ್ಯ ಎಂದು ಹೇಳಿದರು.

ಬಸವಶ್ರೀ ಶಿಕ್ಷಣ ಸಂಸ್ಥೆಯನ್ನು ಉದ್ದೇಶಿಸಿ ಮುಖ್ಯೊಪಾದ್ಯಾಯ ಗವಿಸಿದ್ದ ಭಜಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶಿವಪುತ್ರ ಗಾಣಾದಾಳ ,ಪ್ರಭುರಾಜ್ ಹವಾಲ್ದಾರರ ಜಮಾದಾರ್ ಸೇರಿದಂತೆ ಇತರರು ಮಾತನಾಡಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ನಿರೂಪಣೆಯನ್ನು ಕು.ಜ್ಯೋತಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ರಾಜಾ ಶೆತುರಾಮ್ ನಾಯಕ, ಕರನಾಡು ವಿಜಯಸೇನೆ ಪ್ರಧಾನ ಕಾರ್ಯದರ್ಶಿ
ಶಿವಪುತ್ರ ಗಾಣದಾಳ, ಖಾಸಗಿ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷರಾದ ಪ್ರಭುರಾಜ ಹವಾಲ್ದಾರ್, ಶಿಕ್ಷಣ ಪ್ರೇಮಿ ರಶೀದ್ ಜಮಾದಾರ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು ಗ್ರಾಮದ ಹಿರಿಯ ಮುಖಂಡರು,ಪಾಲಕರು, ಶಾಲಾ ಆಡಳಿತ ಮಂಡಳಿಯವರು , ಶಾಲಾ ಮಕ್ಕಳು ಭಾಗವಹಿಸಿದ್ದರು.

Don`t copy text!