ಗಜಲ್
ಹೊಸ ವರ್ಷಕ್ಕೆ ಹೊಸ ಹರುಷ ತಂದಿದೆ ಯುಗಾದಿ
ಹೊಸ ಮಾವು ಚಿಗುರಿನೊಂದಿಗೆ ಬಂದಿದೆ ಯುಗಾದಿ
ಹೊಸ ವರುಷ ಹರುಷದಿ ಎಲ್ಲೆಡೆಯೂ ನೂತನವಿದೆ
ಹಸಿರು ಹೂವು ಹಣ್ಣು ತಂಪೆರಳು ನೀಡಿದೆ ಯುಗಾದಿ
ಬೆಳಗಿನ ತಂಪನೆ ತಂಗಾಳಿಯ ಆಹ್ಲಾದ ತನುವಿಗೆ ತಟ್ಟಿದೆ
ಕೋಗಿಲೆ ಕುಹೂ ಗಾಯನ ಮೋಡಿ ಮಾಡಿದೆ ಯುಗಾದಿ
ಬಿರು ಬೇಸಿಗೆಯ ಮರೆಸಿ ಜೀವನೋತ್ಸಾಹ ಮರಳಿಸಿದೆ
ಬೇವು ಹೊಂಗೆ ಹುಣಸೆಗಳೆಲ್ಲವನ್ನು ಅರಳಿಸಿದೆ ಯುಗಾದಿ
ಎಲ್ಲೆಡೆ ಪ್ರಾಣಿ ಪಕ್ಷಿಗಳ ಉತ್ಸಾಹವು ಇಮ್ಮಡಿಗೊಂಡಿದೆ
ನೀರಿನಭಾವದಿ ಮೃಗಗಳಲೆದಾಟಕ್ಕೆ ನೊಂದಿದೆ ಯುಗಾದಿ
ಮತ್ತೆ ಮತ್ತೆ ಬರುವ ಈ ಹಬ್ಬ ಬೇವು ಬೆಲ್ಲವ ಹಂಚಿದೆ
ಸಿಹಿ ಕಹಿ ಮಿಶ್ರಣ ಮನಕೆ ಸದೃಢತೆ ಕೊಟ್ಟಿದೆ ಯುಗಾದಿ
ಈಶನೊಲುಮೆ ಸೃಷ್ಟಿ ಸಹಜ ಸುಂದರತೆಯಿಂದ ಕೂಡಿದೆ
ಹಳೆತು ಹೊಸದು ಸಮ್ಮಿಲನ ದುಃಖ ಮರೆಸಿದೆ ಯುಗಾದಿ
— ಈಶ್ವರ ಮಮದಾಪೂರ , ಗೋಕಾಕ
ಮೊಬೈಲ್ – ೯೫೩೫೭೨೬೩೦೬