ಶುಭಕೃತ್ ಸಂವತ್ಸರಕ್ಕೆ ಸ್ವಾಗತ.
ಹೊಸ ವರುಷದ ಮಾಸ ,ಈ ಚೈತ್ರ ಮಾಸ
ಶುಭಕೃತ್ ಸಂವತ್ಸರದ, ಮಾಸ
ಈ ಚೈತ್ರ ಮಾಸ ಈ ಚೈತ್ರ ಮಾಸ
ಮಲ್ಲಿಗೆ ,ಸಂಪಿಗೆ, ಸಂಪಿಗೆ ಮಲ್ಲಿಗೆ
ತೂಗುತಿವೆ ಗಿಡಬಳ್ಳಿಗಳಲಿ, ಅತ್ತ ಇತ್ತಲಿ
ಕಂಪು ಬೀರುತಲಿ ಸ್ವಾಗತವೀಯುತ
ರಂಗುರಂಗಿನಲಿ ಶುಭಕೋರುತಲಿ
ಮಾವಿನ ಮರಗಳಲಿ , ಮೂಡಿವೆ ಮಾಮಿಡಿ
ಜಿಗಿದು ಜಿಗಿದು ಹರಿಯುವ, ಮನದಿ ಹುಮ್ಮಸ್ಸು
ಬೇವಿನ ಮರಗಳು ತಂಪನು ಬೀರುತ
ಹೂಗಳ ಬಿಡುತಲಿ, ಮರದ ತುಂಬ
ಕೋಗಿಲೆ ಕೂಗುತಿದೆ , ಕುಹು ಕುಹು ಎಂದು
ಸಾಗುತಲಿವೆ ಗಗನದಲಿ ಗಿಳಿವಿಂಡು
ಚಿಗುರಿವೆ ಗಿಡ ಮರ , ಹಸಿರು ಬಣ್ಣವ ತೊಡೆದು
ನವನವ ವಿಧದಲಿ , ತೋರುತಿದೆ ಹೊಸ ವರುಷ
ಹೊಸ ವರುಷಕೆ, ಹರುಷದಿ, ಸ್ವಾಗತವೀಯುತ
ಮರೆಯೋಣ ಹಿಂದಿನ ,ಕಹಿ ಅನುಭವಗಳ
ಮರೆಯುತ ಮರೆಯುತ ಕೋವಿಡ್ ವಿಷಗಳ
ದೂರದಲಿ ದೂಡುತ್ತ, ಸಲಿಸಾಗಿ ಮುಂದೆ
ಫಾಲ್ಗುಣ ಮಾಸದ ಕತ್ತಲೆ , ಸರಿಸುತ ಸರಿಸುತ
ಚೈತ್ರ ಮಾಸದ ಬೆಳಕು, ಸವಿಯುತ ಸವಿಯುತ
ಸರ್ವ ಜನಾಂಗದ ಒಳಿತು, ಬಯಸುತ ಬಯಸುತ
ಕಳೆಯೋಣ, ಶುಭಕೃತ್ ಸಂವತ್ಸರವ ಹೊಸ ಹರುಷವ
-ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
,ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473