ಯುಗಾದಿ

ಯುಗಾದಿ

ಹಳೆ ಬೇರು
ಹೊಸ ಚಿಗುರು
ಹಳೆ ಮರ
ಹೊಚ್ಚ ಹೊಸ ಹಸಿರು
ಕಹಿ ಬೇವು
ಸಿಹಿ ಮಾವು

ಕೋಗಿಲೆ ಗಾನದ ಸಡಗರದಿ
ಹೊಸ ಸಂಭ್ರಮ
ಹೊಸ ಉಲ್ಲಾಸ
ಹೊಸ ಉತ್ಸಾಹ
ಎಲ್ಲ ಹೊಸತನಕ್ಕೂ ಮುನ್ನುಡಿಯು ಈ ಯುಗಾದಿ

ಬೇವು ಬೆಲ್ಲದಂತೆ
ಬದುಕು ಬೆರೆಯಲಿ
ನೋವು ನಲಿವುಗಳು
ಹಾಲು ಜೇನಂತೆ ಒಂದಾಗಲಿ

ಕಂಡ ಕನಸು ನನಸಾಗಲಿ
ಬೆಳಕಿನ ಸಿಂಚನದಲ್ಲಿ
ಸಂಬಂದ ಸಮೃದ್ಧಿಯಾಗಲಿ
ಮಾನವಿಯತೆ ಮೆರೆದಾಡಲಿ
ಯುಗಾದಿಯ ಹರ್ಷವು ನಲಿದಾಡಲಿ

ಅನೂ ಹುಬ್ಬಳ್ಳಿ

Don`t copy text!