ಮಸ್ಕಿ ತಾಪಂ ನೂತನ ಇಒ ಅಮರೇಶ ಅಧಿಕಾರ ಸ್ವೀಕಾರ

ಮಸ್ಕಿ ತಾಪಂ ನೂತನ ಇಒ ಅಮರೇಶ ಅಧಿಕಾರ ಸ್ವೀಕಾರ

e-ಸುದ್ದಿ ಮಸ್ಕಿ

ಮಸ್ಕಿ : ಇಲ್ಲಿನ ತಾಲೂಕು ಪಂಚಾಯತ್‌ನ ನೂತನ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅಮರೇಶ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಹಿಂದಿನ ಇಒ ಬಾಬು ರಾಥೋಡ್‌ ಅವರು ಅಧಿಕಾರ ಹಸ್ತಾಂತರಿಸಿದರು. ನಂತರ ಅಮರೇಶ ಅವರು ಮಾತನಾಡಿ, ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಪಂ ಸಿಬ್ಬಂದಿ ನಿಗಾ ವಹಿಸಬೇಕು. ಸಿಬ್ಬಂದಿ ಪರಸ್ಪರ ಸಹಕಾರದೊಂದಿಗೆ ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು. ಜಿಲ್ಲಾ ಪಂಚಾಯತ್‌ಯಿಂದ ಕೇಳುವ ವರದಿಗಳನ್ನು ಸಕಾಲಕ್ಕೆ ತಲುಪಿಸಬೇಕು ಎಂದರು.


ಈ ವೇಳೆ ಸಿಂಧನೂರು ತಾಪಂ ಇಒ ಲಕ್ಷ್ಮೀದೇವಿ, ಮಸ್ಕಿ ತಾಪಂ ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ್‌, ಲಿಂಗಸುಗೂರು ತಾಪಂ ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ್‌, ಗ್ರಾಪಂ ಸಿಬ್ಬಂದಿ ಇದ್ದರು

 

Don`t copy text!