ಚಂದನದ ಗೊಂಬೆ.

ಚಂದನದ ಗೊಂಬೆ.

ಚಂದನದ ಚೆಂದದ ಗೊಂಬೆಯು ನೀನು
ಕುಂದದ ಗಂಧದ ಬೊಂಬೆಯು ನೀನು

ಜೀವಿತದ ಕಾಲದಲಿ ಪರಿಮಳವ ಸೂಸುತ
ಚೆಂದದಲಿ ಎಲ್ಲರಲಿ ನೆಲೆಸಿದ್ದೆ ನೀನು
ಮಂಗಳದ ದೇವತೆ ನೀ ಎಂದೆನಿಸುತ
ಅಂದದಲಿ ನಗುತಲಿ ಇರುತಿದ್ದೆ ನೀನು || 1 ||

ಚಂದನದ ಗಂಧವನು ಎಲ್ಲೆಡೆ ಹರಹುತ
ಸುಂದರ ಜೀವನವ ಬಯಸಿದ್ದೆ ನೀನು
ಆನಂದದಲಿ ನೀ ನನ್ನ ಜತೆಯಲಿ ಇರುತ
ಅಂಬರಕೆ ಹಾರಿದೆ ದೇವನ ಕರೆಗೆ ನೀನು || 2 ||

ನಿನ್ನ ನೆನಪಿನಂದದಿ ಜೀವನವ ಸವೆಸುತ
ನಿನ್ನ ಕುಡಿ ಮರಿಕುಡಿಗಳ ಜತೆ ಬೆರೆಯುತ
ನೀ ಬೀರಿದ ಚಂದನದ ಪರಿಮಳವ ಹೀರುತ
ಶ್ರೀಹರಿಯ ಕರುಣೆಯಲಿ ನಾನಿಂದು ಮೀಯುತ || 3 ||

-ಕೃಷ್ಣ ಬೀಡಕರ
ವಿಜಯಪುರ – 586103
ಮೋ: 9972087473

 

Don`t copy text!