ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ

ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ

e-ಸುದ್ದಿ ಗೋಕಾಕ:

ಡಾ.ಬಿ.ಆರ್.ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿಯೇ ಭಾರತದ ಸಂವಿಧಾನವು ವಿಶಿಷ್ಟವಾಗಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಗೌರವ ಮತ್ತು ಐಕ್ಯತೆಯ ಮಂತ್ರವನ್ನು ನೀಡಿದೆ ಎಂದು ಕವಿ ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು .
ನಗರದ ಬಸವಜ್ಯೋತಿ ಐ.ಟಿ .ಐ . ವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾವೀರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು
ಮಾಹಾವೀರರ ಅಹಿಂಸಾ ಸಂದೇಶ , ಬಸವಣ್ಣ ಮತ್ತು ಬುದ್ಧರ ದಯೆಯ ಸಂದೇಶ ಹಾಗೂ ಅಂಬೇಡ್ಕರರ ಸಮಾನತೆಯ ಸಂದೇಶಗಳನ್ನು ಪಾಲಿಸುವುದು ಇಂದು ಅಗತ್ಯವಾಗಿದ್ದು ತನ್ಮೂಲಕ ವಿವಿಧ ಧರ್ಮ , ಸಂಸ್ಕೃತಿಯ ಈ ದೇಶದಲ್ಲಿ ಭಾವೈಕ್ಯತೆ ಹಾಗೂ ಸೌಹಾರ್ದತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ . ಶಿಕ್ಷಣವು ಅತ್ಯಂತ ಮಹತ್ವವಾಗಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬನೆಯ ಜೀವನ ನಡೆಸುವುದರ ಮೂಲಕ ಅಂಬೇಡ್ಕರ್ ರ ಆಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಲಗಮಪ್ಪಗೊಳ ಮಾತನಾಡುತ್ತ ಪರಿಶ್ರಮ ಮತ್ತು ಛಲದಿಂದ ಮಾತ್ರ ಸಾಧನೆಯನ್ನು ಮಾಡಬಹುದಾಗಿದ್ದು ಎಲ್ಲರೂ ಅಂಬೇಡ್ಕರವರ ಜೀವನ ಸಂದೇಶವನ್ನು ಅಳವಡಿಸಿಕೊಳ್ಳುವುದರ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹೇಳಿದರು.

ಮಹಾತ್ಮಾ ಜ್ಯೋತಿಭಾ ಫುಲೆ ಜಯಂತಿಯ ಅಂಗವಾಗಿ ಯಾದವಾಡದ ಸಾಮ್ರಾಟ್ ಐ.ಟಿ .ಐ. ಹಾಗೂ ಗೋಕಾಕ ನಗರದ ಶ್ರೀ ಬಸವಜ್ಯೋತಿ ಐ.ಟಿ. ಐ. ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವೇದಿಕೆಯ ಮೇಲೆ ಮನೋಜ ಬಸ್ತವಾಡಕರ್ , ವಿಠಲ್ಲ ತಹಶೀಲ್ದಾರ, ನಿಂಗಪ್ಪ ಕಮತೆಕರ, ಸಂಸ್ಥೆಯ ಪ್ರಾಚಾರ್ಯರಾದ ಲೋಕೇಶ್ ಜಾಧವ, ಜಿ.ಎಸ್.ಪಾಟೀಲ್, ಸಂಪತರಾವ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕು.ಸ್ಮಿತಾ ಪಾಟೀಲ್ ಸ್ವಾಗತಿಸಿದರು. ಸಿ.ಎಸ್.ಪಾಟೀಲ್ ವಂದಿಸಿದರು.

Don`t copy text!