ಹಾಲಾಪೂರದಲ್ಲಿ ಹನುಮ ಜಯಂತಿ ಸಂಭ್ರಮ ಆಚರಣೆ
e-ಸುದ್ದಿ ಹಾಲಾಪುರ
ಹಾಲಾಪೂರ ಗ್ರಾಮದಲ್ಲಿ ಹನುಮಾನ್ ಜಯಂತಿ ಮಾಡಲಾಯಿತು. ಗ್ರಾಮದಲ್ಲಿ ಬರುವ ಹನಮಂತನ ದೇವಾಲಯದಲ್ಲಿ ಬೆಳಿಗ್ಗೆ ಪುಜಾ ಕಾರ್ಯಕ್ರಮ ನಡೆಯಿತು. ನಂತರ ಬಜರಂಗ ಗೆಳಯರ ಬಳಗದಿಂದ ಉಪಕಾಲುವೆಯ ಪಕ್ಕದಲ್ಲಿ ಬಹಳ ಸಂಭ್ರಮ ಸಡಗರದಿಂದ ಹನುಮಾನ್ ಮೂರ್ತಿಯ ಬ್ಯಾನರ್ ಮಾಡಿಸಿ ಪೂಜಾ ವಿಧಿವಿಧಾನಗಳನ್ನು ಮಾಡಿದ ನಂತರ ಎಲ್ಲ ಭಕ್ತ ವೃಂದದವರಿಗೆ ಸಿಹಿ ಪಾನಕವನ್ನು ವಿತರಿಸಿದರು.
ಮಹಾಂತೇಶ ಪುಜಾರ, ಚನ್ನಬಸವ ಪಾಟೀಲ್, ಸಿದ್ದಾರ್ಥ ಹಿರೇಮಠ, ಗಿರೀಶ್ ದಿನ್ನಿ, ಚಂದ್ರಶೇಖರ ಬೋವಿ, ನಾಗರಾಜ ,ಬಸವರಾಜಗೌಡ, ಬಸವರಾಜ ಮರಾಠ, ಸುನಿಲ್ ಗೌಡ, ವೀರಭದ್ರಯ್ಯ, ಅರವಿಂದ್, ಆನಂದ ಮರಾಠ ಇತರರು ಇದ್ದರು.