ಗಜಲ್ 

ಗಜಲ್ 

ಮಾಯಾ ಮೋಹದ ಬಟ್ಚೆಯನು ಕಳಿಚಿ ಎಸೆದ ಶರಣೆ
ವೈರಾಗ್ಯದ ಬಟ್ಟೆಯನು ಅರಸುತಾ ಹೋದ ಶರಣೆ

ಅರಮನೆಯ ವೈಭವಯುತ ಸುಖವ ದಿಕ್ಕರಿಸಿದವಳು
ಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದ ಶರಣೆ

ಹಸಿವು ತೃಷೆ ಭಾದೆಗಳನು ಬದುಕಲಿ ಸಹಿಸುತ ಸಾಗಿದವಳು
ಅಂಗ ಚೇಷ್ಟೆ ಕಾಮ ಕ್ರೋಧಗಳ ದಹಿಸಿದ ಶರಣೆ

ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದ ಧೀರೆ
ನಿರಾಕಾರನ ಪಡೆಯಲು ಸರ್ವ ತ್ಯಜಿಸಿದ ಶರಣೆ

ಶರಣ ಸಮೂಹದಲಿ ರತ್ನವಾಗಿ ಬೆಳಗಿದ ಜ್ಯೋತಿ
ಮಹಿಳಾ ಸಂಕುಲಕೆ ಆತ್ಮಸ್ಥೈರ್ಯ ತುಂಬಿದ ಶರಣೆ

ಅಲ್ಲಮನ ನುಡಿಗೆ ಉತ್ತರಿಸಿ ಲೋಕಗೆದ್ದ ಚತುರೆ
ರೂಹಿಲ್ಲದ ಕೇಡಿಲ್ಲದ ಚೆಲುವನ ಮೆಚ್ಚಿದ ಶರಣೆ

ಬೆಟ್ಟ ಹಳ್ಳ ಕಣಿವೆಗಳ ದಾಟುತ ಮುನ್ನಡೆದ ವನಿತೆ
ಶಿವ”ಪ್ರಭೆ”ಯಲಿ ಒಂದಾಗಲು ಕದಳಿಗೆ ನಡೆದ ಶರಣೆ

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!