ಸುವಿಚಾರ
“ಆಗಬೇಕಾದ್ದು ಆಗುವ ಸಮಯಕ್ಕೆ ಆಗುತ್ತದೆ “
ಮನುಷ್ಯನ ಮನಸ್ಸು ಬಹಳ ವೇಗವಾಗಿ ಓಡುತ್ತದೆ. ಅದಕ್ಕೆ ತಕ್ಕಂತೆ ವೇಗವಾಗಿ ಕೆಲಸ ಮಾಡುವುದು ಅದರ ಫಲ ಬಯಸುವುದು ಮನುಷ್ಯನ ಸ್ವಭಾವ.
ಮರದಲ್ಲಿ ಕಾಯಿ ಹಣ್ಣಾಗುವವರೆಗೂ ಕಾಯುವ ವ್ಯವಧಾನ ಮನುಷ್ಯನಿಗೆ ಇರುವುದಿಲ್ಲ. ಕಾಯಿ ಕಿತ್ತು ನಿಂಬೆ ಹಣ್ಣಿನೊಂದಿಗೆ ಇಟ್ಟು ಬೇಗ ಹಣ್ಣು ಮಾಡಿ ತಿನ್ನಬಯಸುತ್ತೇವೆ.
ಭಗವಂತನ ಸೃಷ್ಟಿ ನಿರಾಳ ಅವನಿಗೆ ಯಾವುದನ್ನು ಯಾವಕಾಲಕ್ಕೆ ಕೊಡಬೇಕೆನ್ನುವ ಜ್ಞಾನ ಇದ್ದೇ ಇರುತ್ತದೆ. ಇದಕ್ಕೆ ಉತ್ತಮ ಸಾಕ್ಷಿ 9ತಿಂಗಳು ಮುಗಿದನಂತರ ಹುಟ್ಟಿದ ಮಗು ಆರೋಗ್ಯವಂತ ಇದ್ದು, 9ತಿಂಗಳಿಗೂ ಮೊದಲು ಹುಟ್ಟಿದ ಮಗುವನ್ನು ಇನ್ ಕ್ಯೂ ಬೆಟರ್ ಒಳಗೆ ಇಟ್ಟು ಕಾಪಾಡುತ್ತಾರೆ.
ಯಾವ ಸಮಯಕ್ಕೆ ಏನು ಆಗಬೇಕು ಎಂಬುದು ವಿಧಿ ನಿರ್ಮಿತ. ಆದ್ದರಿಂದ ಸಮಯಕ್ಕೆ ಮೊದಲು ಯಾವ ಕೆಲಸ ಮಾಡಲು ಹೋಗಬಾರದು. ಸಮಯಕ್ಕೆ ಸರಿಯಾಗಿ ಆದ ಕೆಲಸ ಉತ್ತಮ ಫಲ ನೀಡುತ್ತದೆ.
–ಮಾಧುರಿ, ಬೆಂಗಳೂರು