ಉಸ್ಕಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ
ಶಾಸಕ ಆರ್.ಬಸನಗೌಡ ತುರ್ವಿಹಾಳ್ ಚಾಲನೆ,
e-ಸುದ್ದಿ ಮಸ್ಕಿ
ಮಸ್ಕಿ: ತಾಲೂಕಿನ ಉಸ್ಕಿಹಾಳ್ ಗ್ರಾಮದಲ್ಲಿ ಜಿಲ್ಲಾದಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಶನಿವಾರ ಶಾಸಕ ಆರ್.ಬಸನಗೌಡ ತುರ್ವಿಹಾಳ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಆರ್.ಬಸನಗೌಡ ಗ್ರಾಮದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲಾ ಸರ್ಕಾರದ ಪ್ರತಿಯೊಂದು ಇಲಾಖೆಯ ಸವಲತ್ತುಗಳು ನೇರವಾಗಿ ಮನೆಬಾಗಲಿಗೆ ತಲುಬೇಕು ಎನ್ನುವ ಉದ್ಧೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಆದ್ದರಿಂದ ಸಾರ್ವಜನಿಕರು ಊರಿನ ಎನೇ ಸಮಸ್ಯೆಗಳಿರಲಿ ಸ್ಥಳದಲ್ಲಿಯೇ ಪರಿಹರ ಕಂಡುಕೊಳ್ಳಲು ಮುಂದಾಗಿ ಇದರಿಂದ ನವು ಕೇಲಸ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪುತ್ತದೆ ಎಂದರು. ನಂತರ ತಹಸೀಲ್ದರ್ ಕವಿತಾ.ಆರ್ ಮಾತನಾಡಿ ಉಸ್ಕಿಹಾಳ್ ಗ್ರಾಮದಲ್ಲಿ ಸ್ಮಶಾನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪಹಣಿ, ಪೋತಿ, ಪೆನ್ಸನ್ ಸೇರಿದಂತೆ ಯಾವುದಾರೂ ಸಮಸ್ಯೆಗಳಿದ್ದರೆ ತಿಳಿಸಿ ಆಯಾ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಸಮಸ್ಯೆ ಇತ್ಯರ್ಥ ಮಾಡಲು ಪ್ರಯತ್ನಿಸಲಾಗುವುದು ಎಂದರು ಸಾರ್ವಜನಿಕರಿಗೆ ತಿಳಿಸಿದರು.
ನಂತರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸ್ಥಳದಲ್ಲಿಯೆ ಸೂಚನೆ ನೀಡಿದರು. ನಾಗರಡೆಪ್ಪ ಬುದ್ದಿನ್ನಿ ಸೇರಿದಂತೆ ಸುತ್ತಮುತ್ತಲಿನ ೨೦ಕ್ಕೂ ಅಧಿಕ ಗ್ರಾಮಸ್ಥರು ಮುದಬಾಳ್ ಕ್ರಾಸ್ ಬಳಿ ಸಾರಿಗೆ ಇಲಾಖೆಯ ಎಲ್ಲಾ ಬಸ್‌ಗಳನ್ನು ನಿಲ್ಲಿಸುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಳಿಗೆ ಮನವಿ ಮಾಡಿದರು. ನಂತರ ಡಿಸಿ ಅವಿನಾಶ್ ಮೆನನ್ ಮಾತನಾಡಿ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಸರಿಪಡಿಸಿ ಬಸ್ ನಿಲ್ಲಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಇನ್ನು ತಾಂಡಾ ಸೇರಿದಂತೆ ಇತರೆಡೆ ಹಲವಾರು ವರ್ಷಗಳಿಂದ ರೈತರು ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿರುವವರಿಗೆ ಪಹಣಿ ಕೊಡಿಸುವಂತೆ ಮನವಿ ಮಾಡಿದರು. ಅಲ್ಲದೇ ವಿಮುಕ್ತಿ ದೇವದಾಸಿ ಸಂಘದ ಜಿಲ್ಲಾಧ್ಯಕ್ಷೆ ರತ್ನಾ ತಾಲೂಕು ಸೇರಿದಂತೆ ಇತರೆಡೆ ದೇವದಾಸಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸಿ ಹಾಗೂ ಮಸ್ಕಿ ತಾಲೂಕಿಗೆ ದೇವದಾಸಿ ಯೋಜನಾಧಿಕಾರಿಗಳನ್ನು ನೇಮಕ ಮಾಡುವಂತೆ ಡಿಸಿಯವರಿಗೆ ರತ್ನಾ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸಿಇಓ ನೂರ್‌ಜಾ ಖಾನಂ, ಸಹಾಯಕ ಜಿಲ್ಲಾಧಿಕಾರಿ ದುರ್ಗೇಶ್, ಮಾರಲದಿನ್ನಿ ಗ್ರಾಪಂ ಅಧ್ಯಕ್ಷ ಟಾಕಪ್ಪ, ಜಿಲ್ಲಾ ಮಟ್ಟದ ಅದಿಕಾರಿ ಮೇನಕಾ, ಡಿಡಿಎಲ್‌ಆರ್ ರೇಷ್ಮಾ, ಅಭಕಾರಿ ಇಲಾಖೆಯ ಲಕ್ಷಿö್ಮ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಹಾಗೂ ಕಂದಾಯ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.,
೧