ಲಿಂಗಸುಗೂರಿನಲ್ಲಿ ನಾಳೆ ಜನತಾ ಜಲಧಾರೆ ಕಾರ್ಯಕ್ರಮ – ಕೆ.ನಾಗಭೂಷಣ.

e -ಸುದ್ದಿ ಲಿಂಗಸುಗೂರು

ವರದಿ ವಿರೇಶ ಅಂಗಡಿ ಗೌಡೂರು

ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಆಶೀರ್ವದಿಸಿ ಗೆಲ್ಲಿಸಿದರೆ ಕುಡಿಯುವ ನೀರು ಮತ್ತು ರೈತರ ಜಮೀನುಗಳಿಗೆ ನೀರುಣಿಸಲು ಜೆಡಿಎಸ್ ಪಕ್ಷದ  ಬದ್ದವಾಗಿದೆ.   ರಾಜ್ಯಾದ್ಯಂತ ಹಮ್ಮಿಕೊಂಡಿರುವಂತ ಜನತಾ ಜಲದಾರೆ ಕಾರ್ಯಕ್ರಮವನ್ನು ನಾಳೆ ಏಪ್ರಿಲ್ 20 ರಂದು ಲಿಂಗಸ್ಗೂರು ಪಟ್ಟಣದ ಗಡಿಯಾರ ಚೌಕ್ ಹತ್ತಿರದ ದೊಡ್ಡ ಹನುಮಂತ ದೇವಸ್ಥಾನದ ಹತ್ತಿರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.  ಸುಮಾರು ೧೦೦೦ ಬೈಕಗಳ ಮೂಲಕ ರ್ಯಾಲಿ ನಡೆಸಲಾಗುತ್ತದೆ ಎಂದು ಜೆ.ಡಿ.ಎಸ್ ಪಕ್ಷದ ತಾಲೂಕು ಅಧ್ಯಕ್ಷ ಕೆ ನಾಗಭೂಷಣ್ ತಿಳಿಸಿದರು.

ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೃಷ್ಣಾ ನದಿ ಜಲಾಶಯದ ಪ್ರದೇಶ, ಆಲಮಟ್ಟಿ ಅಣೆಕಟ್ಟು, ಕೂಡಲಸಂಗಮ, ಮಲಪ್ರಭಾ ಸೇರಿದಂತೆ ರಾಜ್ಯದ ಹಲವು ನದಿಗಳ ನೀರು ಸದ್ಬಬಳಕೆಯ ಬಗ್ಗೆ ಹಮ್ಮಿಕೊಂಡಿರುವ ಜನತಾ ಜಲಧಾರೆ ಅಭಿಯಾನಕ್ಕೆ ಲಿಂಗಸೂಗೂರು ತಾಲೂಕಿನ ಬಸವಸಾಗರ ಜಲಾಶಯಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಚಿತಾಪುರ ,ಆನೆಹೊಸೂರು ಮಾರ್ಗವಾಗಿ ೧೦೦೦ ದ್ವಿಚಕ್ರ ವಾಹನಗಳ ಮೂಲಕ ರ್ಯಾಲಿಯನ್ನು ಮಾಡಲಾಗುವುದು ಎಂದರು.

ಕಾರ್ಯಕ್ರಮದ ಮಾಹಿತಿ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.ಈ ಕಾರ್ಯಕ್ರಮದಲ್ಲಿ ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೆವಣ್ಣ ಸೇರಿದಂತೆ ರಾಯಚೂರು,ವಿಜಯಪುರ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ತಾಲೂಕಿನ ಜೆಡಿಎಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಮುಖಂಡ ಸಿದ್ದು ವೈ ಬಂಡಿ ಅಧ್ಯಕ್ಷ ಯುವ ಘಟಕ ಅಧ್ಯಕ್ಷ ಇಮ್ತಿಯಾಜ್ ಪಾಷಾ, ಬಸವರಾಜ ಮಾಕಾಪುರ, ಬಸವರಾಜ್ ಅಡವಿಭಾವಿ, ಸಿದ್ದು ಬಡಿಗೇರ , ಹುಲುಗಪ್ಪ ನಾಯಕ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Don`t copy text!