ಬಸವ ಪುರಾಣ’’ ಪ್ರಾರಂಭೋತ್ಸವಕ್ಕೆ ಹುಟ್ಟೂರಿನಿಂದ ಬಸವ ಬುತ್ತಿ

ಶಿವಯೋಗಿಗಳ ಶತಮಾನೋತ್ಸವ ಅಂಗವಾಗಿ “ಬಸವ ಪುರಾಣ’’ ಪ್ರಾರಂಭೋತ್ಸವಕ್ಕೆ ಹುಟ್ಟೂರಿನಿಂದ ಬಸವ ಬುತ್ತಿ
ಶಿವಯೋಗಿಗಳು ತಪ್ಪಸ್ಸಶಕ್ತಿಯಿಂದ ಅಥಣಿ ಪಾವನ ಕ್ಷೇತ್ರ: ಉಪ್ಪಿನ ಬೆಟಗೇರಿ ವಿರೂಪಾಕ್ಷ ಶ್ರೀಗಳು
ಅಥಣಿ

e-ಸುದ್ದಿ ಅಥಣಿ

ವರದಿ ರೋಹಿಣಿ ಯಾದವಾಡ

ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಅಪ್ಪನವರು ಅಪ್ಪಟ್ಟ ಬಸವಾಭಿಮಾನಿಗಳು, ಬಸವಾನುಯಾಯಿಗಳು. ಬಸವಣ್ಣನವರ ವಚನಗಳನ್ನು ಅಪ್ಪನ ವಚನ ಎಂದು ತಲೆ ಮೇಲೆ ಹೊತ್ತು ಆರಾಧಿಸಿದವರು. ವೈರಾಗ್ಯನಿಧಿ, ಜಂಗಮಜ್ಯೋತಿಗಳಾದ ಅವರು ತಮ್ಮ ತಪಸ್ಸಿನ ಶಕ್ತಿಯಿಂದ ಅಥಣಿ ನೆಲವನ್ನು ಪಾವನಗೊಳಿಸಿ ಅಧ್ಯಾತ್ಮಿಕ ನೆಲೆಯನ್ನಾಗಿಸಿದ್ದಾರೆ ಎಂದು ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ನುಡಿದರು.
ಅಥಣಿಯ ಗಚ್ಚಿನಮಠದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಅಥಣಿ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಒಂದು ತಿಂಗಳ ``ಬಸವ ಪುರಾಣ’’ ಉದ್ಘಾಟನಾ ಸಮಾರಂಭದಲ್ಲಿ ಮೇಲಿನಂತೆ ನುಡಿಯುತ್ತ, ಶಿವಯೋಗಿಗಳು ಮಹತ್ಮರು, ಪುಣ್ಯಪುರುಷರು. ಅವರು ನಡಿದಾಡಿ ಉದ್ಧರಿಸಿದ ಈ ಕ್ಷೇತ್ರ ಪಾವನಕ್ಷೇತ್ರವಾಗಿದೆ. ಅವರ ಲಿಂಗೈಕ್ಯ ಶತಮಾನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಬಸವ ಪುರಾಣಕ್ಕೆ ಚಾಲನೆ ನೀಡಿದ ನದಿಇಂಗಳಗಾವಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿ ಶಿವಯೋಗಿಗಳ ಬದುಕು ನಮ್ಮೆನಿಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರು.

ನೇತೃತ್ವ ವಹಿಸಿದ್ದ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ ಶತಮಾನೋತ್ಸವ ಆಚರಣೆಗೆ ಕಳೆಕಟ್ಟಲು ಒಂದು ತಿಂಗಳ ಪರ್ಯಂತ ಮೇ ೨೦ ರವರೆಗೆ ಉಪ್ಪಿನ ಬೆಟಗೇರಿ ಶ್ರೀಗಳು ಬಸವಪುರಾಣ ನಡೆಯಿಸಿಕೊಡಲಿದ್ದಾರೆ. ಅಲ್ಲದೇ ಅನೇಕ ವೈಶಿಷ್ಟö್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಯದಲ್ಲಿ ಶಿವಯೋಗಿಗಳ ಶತಮಾನೋತ್ಸವ ಅಂಗವಾಗಿ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮುರುಘೇಂದ್ರ ಶಿವಯೋಗಿಗಳ ಜೀವನದರ್ಶನ ಪ್ರಚಚನ ನೇರವೇರಿಸಿದ ಶ್ರೀಗಳಿಗೆ ಮತ್ತು ಸೇವಾರ್ಥಿಗಳಿಗೆ ಶ್ರೀಮಠದಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಪ್ಪಳದ ಸಿದ್ದಲಿಂಗದೇವರು, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿಗಳು, ಸಿದ್ಧಕಬೀರ ಸ್ವಾಮೀಜಿ, ತೆಲಸಂಗದ ವೀರೇಶ ದೇವರು, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಹಲ್ಯಾಳದ ಗುರುಸಿದ್ಧ ಸ್ವಾಮೀಜಿ, ಶಶಿಕಾಂತ ಮಹಾರಾಜರು ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ ಉಪಸ್ಥಿತರಿದ್ದರು.

ಶಿವಾನಂದ ದಿವಾನಮಳ ಸ್ವಾಗತಿಸಿದರು, ಎ.ಎಂ ಖೊಬ್ರಿ ವಕೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವಕುಟೀರದ ಬಸವರಾಜೇಂದ್ರ ಅವರು ನಿರೂಪಿಸಿದರು.
ಶಿವಯೋಗಿ ಹುಟ್ಟೂರು ನದಿಇಂಗಳಗಾವಿಯಿಂದ ಬಸವ ಬುತ್ತಿ
ಬಸವಪುರಾಣ ಉದ್ಘಾಟನಾ ಪೂರ್ವದಲ್ಲಿ ನಗರದ ಶಿವಯೋಗಿ ಸರ್ಕಲದಿಂದ ಅಥಣಿ ಶಿವಯೋಗಿಗಳ ಹಾಗೂ ಬಸವೇಶ್ವರವರ ಭಾವಚಿತ್ರಗಳ ಹಾಗೂ ಶ್ರೀ ಶಿವಯೋಗಿಗಳ ಹುಟ್ಟೂರಾದ ನದಿ ಇಂಗಳಗಾವಿಯಿಂದ ಭಕ್ತಾಧಿಗಳು ತಂದ ಬಸವ ಬುತ್ತಿಯ ಬೃಹತ್ ಭವ್ಯ ಮೆರವಣಿಗೆ ನಡೆಯಿತು.


ನೂರಾರು ತಾಯಂದಿರು ಬಸವ ಬುತ್ತಿಯಲ್ಲಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಅಡುಗೆ ಸಜ್ಜಿರೊಟ್ಟಿ, ಗೊಂಜಾಳ ಹಾಗೂ ಜೋಳದ ರೊಟ್ಟಿ, ಎಣ್ಣೆ ಬದನಿಕಾಯಿ, ಜುನಕದ ವಡೆ, ನಾನಾ ತರಹದ ಉಸುಳಿಗಳು, ಅಂಬಲಿ, ಹುಳಿಬಾನ, ಮೊಸರನ್ನ, ಹಾಲು, ಹಣ್ಣು ತರತರದ ಉಪ್ಪಿನಕಾಯಿ, ಚಟ್ನಿಪುಡಿ ಮೊದಲಾದವುಗಳನ್ನು ಬಿಳಿವಸ್ತçದಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತು ಪಾದಯಾತ್ರೆಯ ಮೂಲಕ ಪ್ರವಚನ ವೇದಿಕೆವರೆಗೆ ಭವ್ಯ ಮೆರವಣಿಗೆ ಮೂಲಕ ತಂದರು ಅಥಣಿ ಮಹಿಳಾಬಳಗ ಬುತ್ತಿ ಬಿಚ್ಚುವ ಮೂಲಕ ಎಲ್ಲ ಭಕ್ತಾಧಿಗಳಿಗೆ ಮಹಾಪ್ರಸಾದವಾಯಿತು.
ಗಚ್ಚಿನಮಠದ ಪೂಜ್ಯ ಶಿವಬಸವ ಸ್ವಾಮೀಜಿ ಮಾತನಾಡಿ ಇದು ಅಪ್ಪ ಶಿವಯೋಗಿಗಳ ಮೇಲೆ ಭಕ್ತರಿಟ್ಟ ಹೃದಯವೈಶಾಲ್ಯತೆಯನ್ನು ತೋರಿಸುತ್ತದೆ ಅವರ ಈ ಭಕ್ತಿ ಸೇವೆಗೆ ಅಭಿನಂದನೆ ಎಂದರು. ಇದೊಂದು ಐತಿಹಾಸಿಕ ಸಮಾರಂಭವಾದ್ದರಿಂದ ನಾಡಿನಾದ್ಯಂತದ ಭಕ್ತರು ಆಗಮಿಸುತ್ತಾರೆ.

ಬಸವ ಪುರಾಣ ಕೇಳುವ ಭಾಗ್ಯಕ್ಕೆ ಪಾಲುದಾರರಾಗಿ ಜೀವನ ಸಾರ್ಥಕತೆ ಪಡೆಯಿರಿ ಎಂದರು.
ಈ ಮೆರವಣಿಗೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಕಬೀರ ಸ್ವಾಮೀಜಿ, ಕೊಪ್ಪಳ ಸಿದ್ದಲಿಂಗದೇವರು, ವೀರೇಶ ದೇವರು, ಆನಂದ ಮಹಾರಾಜರು, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಗಣ್ಯರಾದ ಚಿದಾನಂದ ಸವದಿ, ಗಜಾನನ ಮಂಗಸೂಲಿ, ಶಹಜಹಾನ ಡೊಂಗರಗಾಂವ, ಶಿವಪುತ್ರ ಯಾದವಾಡ, ಪ್ರಕಾಶ ಮಹಾಜನ, ಸಂತೋಷ ಸಾವಡಕರ, ಪ್ರಕಾಶ ಚನ್ನನವರ, ಶಂಕರಗೌಡ ಪಾಟೀಲ, ಹನುಮಂತ ಕಾಲವೆ, ಧರೆಪ್ಪ ಠಕ್ಕನವರ, ರಾಮನಗೌಡ ಪಾಟೀಲ, ರೋಹಿಣಿ ಯಾದವಾಡ, ಶಿಲ್ಪಾ ತೊದಲಬಾಗಿ, ಗೀತಾ ತೋರಿ, ವಿಶಾಲಾಕ್ಷಿ ಅಂಬಿ, ಲಿಂಬೆವಕ್ಕ ಮೊದಲಾದವರು ಪಾಲ್ಗೊಂಡಿದ್ದರು.
ಶಿವಯೋಗಿ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಕೀಲು ಕುದುರೆ, ಪುರುಷ ಹಾಗೂ ಮಹಿಳಾ ಝಾಂಜಪಥಕ, ಜಾನಪದ ಕಲಾತಂಡಗಳು ಭಾಗವಹಿಸಿ ವೈಭವದ ಮೇರವಣಿಗೆಯನ್ನಾಗಿಸಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದರು.

Don`t copy text!