ಅಕ್ಕ ಸ್ವಾವಲಂಬಿ ಬದುಕಿನ ಪ್ರತಿಕ- ಸರೋಜನಿ ಕಲ್ಯಾಣ

ಮಹಿಳಾ ಬಳಗದಲ್ಲಿ ಅಕ್ಕನ ಜಯಂತಿ ಆಚರಣೆ

ಅಕ್ಕ ಸ್ವಾವಲಂಬಿ ಬದುಕಿನ ಪ್ರತಿಕ- ಸರೋಜನಿ ಕಲ್ಯಾಣ

ಅಥಣಿ ವರದಿ: ರೋಹಿಣಿ ಯಾದವಾಡ

ಸ್ತ್ರೀಯರಿಗೆ ಹಲವು ಕಟ್ಟಳೆಗಳ ಮಿತಿಯಲ್ಲಿ ಬದುಕು ನಡೆಸಬೇಕು ಎನ್ನುವ ಕಾಲದಲ್ಲಿ ಅಕ್ಕಮಹಾದೇವಿ ಸ್ತ್ರೀ ಸ್ವಾವಲಂಬಿಯಾಗಿ ಬದುಕಬಲ್ಲಳು ಎಂದು ಬದುಕಿ ತೋರಿಸಿದಾಕೆ. ಅಕ್ಕ ಧೈರ್ಯದ ಪ್ರತೀಕ ಎಂದು ಅಭಾವೀ ಮಹಿಳಾ ಘಟಕದ ಸರೋಜನಿ ಕಲ್ಯಾಣಿ ಹೇಳಿದರು.

ಅಥಣಿಯ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕನ ಬಳಗ ಹಾಗೂ ಅಭಾವೀ ಮಹಾಸಭಾ ಮಹಿಳಾ ಘಟಕದವರು ಅಕ್ಕನ ಜಯಂತಿಯನ್ನು ಆಚರಿಸಿದ ಸಮಯದಲ್ಲಿ ಮೇಲಿನಂತೆ ಮಾತನಾಡಿದರು.

ಡಾ.ಪ್ರಿಯಂವದಾ ಹುಲಗಬಾಳಿ ಮಾತನಾಡಿ ಅಕ್ಕನ ಬದುಕು ನಮಗೆಲ್ಲ ಆದರ್ಶ. ಅಕ್ಕನ ನಿಲುವುಗಳನ್ನು ನೋಡಲಾಗಿ ಇಂದಿನ ಶತಮಾನದಲ್ಲಿಯೂ ಅಂತಹ ದಿಟ್ಟ ಮಹಿಳೆ ಸಿಗುವುದು ಅಪರೂಪ, ಇತರರನ್ನು ಗೌರವಿಸುವ ಸಂಸ್ಕೃತಿ ನಮ್ಮಲ್ಲಿದ್ದರೆ ಅದು ನಮ್ಮನ್ನು ನಾವು ಗೌರವಿಸಿಕೊಂಡಂತೆ ಎಂದರು.

ರಾಷ್ಟ್ರ ಪ್ರಶಸ್ತಿ ಭೂಷಿತೆ ವಿಶಾಲಾಕ್ಷಿ ಅಂಬಿ ಮಾತನಾಡಿ ಅಕ್ಕನ ದೇವಸ್ಥಾನಗಳು ಇರುವುದು ಅಪರೂಪ ಆದರೆ ಅಥಣಿಯಲ್ಲಿ ಸುಸಜ್ಜಿತ ಅಕ್ಕಮಹಾದೇವಿ ದೇವಸ್ಥಾನ ನಿರ್ಮಿಸಿದ್ದು ಹಿರಿಯ ಬಳಗದೊಂದಿಗೆ ಆಚರಿಸುವ ಭಾಗ್ಯ ಸಂತಸದ್ದು ಎಂದರು. ಗೀತಾ ತೋರಿ ಮಾತನಾಡಿದರು.

ಈ ಸಮಯದಲ್ಲಿ ಹಿರಿಯ ಸದಸ್ಯೆಯರಾದ ಕಮಲಾ ಕೊಪ್ಪದ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಗುರಕ್ಕಾ,ಶಶಿಕಲಾ ಹರ್ತಿ, ಮಂಜುಳಾ ಚೊಳ್ಳಿ, ಮಹಾದೇವಿ ಪಾಟೀಲ ಅಕ್ಕನ ಕುರಿತಾದ ಗೀತಗಾಯನ ನಡೆಸಿಕೊಟ್ಟರು. ತೋಟ್ಟಿಲೋತ್ಸವವನ್ನು ವಿದ್ಯಾ ಹಿರೇಮಠ , ವೈಶಾಲಿ ಮಠಪತಿ, ಸುಧಾ, ಶ್ವೇತಾ ಅಣೆಪ್ಪನವರ, ದೀಪಾ ಚೊಳ್ಳಿ, ರುಚಿತಾ ಸಂಕ ಜರುಗಿಸಿದರು.ಅಧ್ಯಕ್ಷತೆಯನ್ನು ಅಭಾವೀ ಘಟಕದ ಶೈಲಾ ನೇಮಗೌಡ ವಹಿಸಿದ್ದರು.

ಸಾಹಿತಿ ರೋಹಿಣಿ ಯಾದವಾಡ ಪ್ರಾಸ್ತಾವಿಕ ಮಾತನಾಡಿ ಬದುಕಿನ ಮೌಲ್ಯಗಳನ್ನು ತಿಳಿಬೇಕಾದರೆ ಓದಿನ ಮೂಲಕ ಅಕ್ಕನ ಜೀವನ ಅರಿತುಕೊಳ್ಳಬೇಕು. ಅಕ್ಕ ಮಹಿಳಾ ಕುಲದ ಅಸ್ಮಿತೆ ಎಂದು ಹೇಳಿ ಕಾರ್ಯಕ್ರಮ ನಿರೂಪಿಸಿದರು.

ಈ ಸಮಯದಲ್ಲಿ ಹಿರಿಯರಾದ ಚನ್ನಕ್ಕ ಸಂಕ, ಶಿವಲೀಲಾ ಬಳ್ಳೋಳ್ಳಿ, ಸುಮಿತ್ತಾ ಮಠಪತಿ,ಸಾವಿತ್ರಿ ಕೊಪ್ಪದ, ಅಭಾವೀ ಮಹಿಳಾ ಘಟಕದ ಇರಾವತಿ ಕೌಲಾಪೂರ ,ಭಾರತಿ ಕೋರಿ, ಅರ್ಚನಾ ಭೂಷನೂರ, ದೀಪಾ ಯಲ್ಲಟ್ಟಿ, ಶಿವಲೀಲಾ ಅಂಬಲಿ, ಶೋಭಾ ಕೋಲಾರ ಮೊದಲಾದವರು ಪಾಲ್ಗೊಂಡ ಅಕ್ಕನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಭಾಗ್ಯಶ್ರೀ ತೆಗ್ಗಿ ಸ್ವಾಗತಿಸಿದರು. ಕೊನೆಯಲ್ಲಿ ಹಣ್ಣು ಪ್ರಸಾದ ವಿತರಿಸಲಾಯಿತು.

Don`t copy text!