ನಲುಗುತಿದೆ ವಿಶ್ವ

ಏಕೆ ಬೇಕು ಜಗಕೆ ಚಿಂತೆ
ರಾಷ್ಟ್ರ ರಾಷ್ಟ್ರಗಳ ಕದನ
ಎಳೆ ಹಸುಳೆಗಳು ಬಿಕ್ಕಿ ಬಳಲಿವೆ
ನಲುಗುತಿದೆ ವಿಶ್ವವು

ಕಾಡು ಕಡಿದು ನೆಲ ಅಗೆದು
ಪ್ರಾಣಿ ಕೊಲ್ಲುವ ರಕ್ಕಸ
ಕೆರೆಯ ಮುಚ್ಚಿ ಸೌಧ ಕಟ್ಟಿದ
ಬರಡಾಯಿತು ಭಾರತ

ಆಮ್ಲಜನಕದ ಪದರು ಕಳಚಿದೆ
ಭೂಮಿ ನಡುಗಿ ಬೆದರಿದೆ
ರೌದ್ರ ತೆರೆಗಳ ಕಡಲ ಒಡಲಲಿ
ಲಾವಾ ಉಕ್ಕಿ ಕುದಿಯುತಿದೆ

ನೆಲ ಜಲ ಒತ್ತುವರಿ
ವಿಷ ಅನಿಲ ಉಗುಳುತಿವೇ
ಅಣ್ವಸ್ತ್ರಗಳ ಕಾರುಬಾರು
ಬಾಂಬ ಸಪ್ಚಳ ಮಾಡಿವೆ

ನೀಚ ಮನುಜ ಸ್ವಾರ್ಥದ್ವೇಷಕೆ
ನಿತ್ಯ ಮರಣ ಮೃದಂಗವು
ಶೋಕ ಗೀತೆ ರಾಗ ನಿಲ್ಲಲಿ
ಮತ್ತೆ ಸಂತಸ ಮೊಳಗಲಿಿ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!