ಕವಿತೆ
ನೇಸರ ಪರಿಸರ.
ಮೂಡಣದಲಿ ಉದಯಿಸುತಿಹ ನೇಸರನನು ನೋಡಿ
ಗಗನದಲಿ ಹರಡುವ ರವಿ ಕಿರಣಗಳನು ನೋಡಿ
ಹಕ್ಕಿಗಳು ಗೂಡಿನಿಂದ ಹೊರಬರುತಿರುವವು ನೋಡಿ
ಚಿಲಿಪಿಲಿ ಗುಟ್ಟುತ ಗಗನಕೆ ಹಾರುತಿರುವವು ನೋಡಿ
ಬಾನಿನೆತ್ತರದಿ ಹಾರುವ ಗಿಳಿಹಿಂಡುಗಳನು ನೋಡಿ
ಹಾರುತ ಹಾರುತ ನಭದಿ ಹಸಿರು ಬಣ್ಣಗಳ ಹರಡಿ
ರವಿ ತನ್ನ ಪಥದಿ ಸಾಗಿ ಏರುತಿರುವನು ನೋಡಿ
ನೀಡುತ ಬೆಳಕಿನ ತನ್ನ ಸೌಂದರ್ಯವನು ಹರಡಿ
ಮೇಘಗಳ ಮಧ್ಯ ತಾನು ಓಡುತಿಹನು ನೋಡಿ
ಇಳಿಯುತ ಪಡುವಣಕೆ ತುಂಬ ಕತ್ತಲೆಯ ಹರಡಿ
ಕೃಷ್ಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473